ವಿಜಯಪುರ: ಪ್ರಧಾನಿ ಮಂತ್ರಿಯವರಿಗೆ ಯಾರ್ಯಾರೋ ಹೋಗಿ ನನ್ನನ್ನು ಸಿಎಂ ಮಾಡಿ 2,000 ಕೋಟಿ ರೂ. ಕೊಡುತ್ತೇನೆ ಎಂದರೆ ಕಪಾಳಕ್ಕೆ ಹೊಡೆಯುತ್ತಾರೆ ಎಂದು ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
Advertisement
ಸಚಿವ ಮುರುಗೇಶ್ ನಿರಾಣಿ ದೆಹಲಿ ಭೇಟಿ ಬಗ್ಗೆ ಪ್ರಶ್ನಿಸುತ್ತಿದ್ದಂತೆ ಯಾರ್ಯಾರೋ ಹೋಗಿ ನಾವು 2,000 ಕೋಟಿ ರೂ. ಕೊಡುತ್ತೇವೆ. ನಮ್ಮನ್ನು ಸಿಎಂ ಮಾಡಿ ಅಂತಾ ಓಡಾಡುತ್ತಾರೆ. ಮತ್ತೇನೇನೋ ಆಸೆ, ಆಮಿಷ ಹಚ್ಚುತ್ತಾರೆ. ಆದರೆ ನಮ್ಮ ಪಕ್ಷ ಹಾಗಿಲ್ಲ. ನಮ್ಮ ಪ್ರಧಾನಮಂತ್ರಿಗಳು ಮೊನ್ನೆ ಸಚಿವ ಸಂಪುಟ ಮಾಡಿದರು. ಇಡೀ ದೇಶದ ಇತಿಹಾಸದಲ್ಲೇ ದಲಿತರು, ಹಿಂದುಳಿದವರು ಮತ್ತು ಮಹಿಳೆಯರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಿದರು. ಇಂತವರ ಬಳಿ ಹೋಗಿ ನಾನು 2,000 ರೂ. ಕೋಟಿ ನೀಡುತ್ತೇನೆ ಅಂದರೆ ಕಪಾಳಕ್ಕೆ ಹೊಡೆದು ಕಳಿಸುತ್ತಾರೆ ಎಂದು ಹೇಳಿದ್ದಾರೆ.
Advertisement
Advertisement
ಎಲ್ಲೋ ರೊಕ್ಕಾ (ಹಣ) ಕೊಡ್ತೇನೆ. ನಾನು ಚಂದ ಚಂದ ಹೆಂಗಸರನ್ನು ಕರೆದುಕೊಂಡು ಬಂದು ಮಲಗಿಸುತ್ತೇನೆ. ಅನ್ನೋರಿಗೆ ಸಿಎಂ ಸ್ಥಾನ ಕೊಡುವುದಿಲ್ಲ. ಅಂತಹವರು ಯಾರು ಎನುವುದನ್ನ ನೀವು ಗುರುತಿಸಿ ಎಂದಿದ್ದಾರೆ. ಅಲ್ಲದೇ ಸಿಎಂ ರೇಸ್ ಅಲ್ಲ, ನಾನು ಯಾವುದೇ ರೇಸ್ ನಲ್ಲಿಯೂ ಇಲ್ಲ. ಪ್ರಧಾನ ಮಂತ್ರಿಗಳು ಈ ರಾಜ್ಯಕ್ಕೆ ಓರ್ವ ಪ್ರಾಮಾಣಿಕ ಹಿಂದುತ್ವವಾದಿ, ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಿಸಿ ತರುವಂತಹ ಶಕ್ತಿವಂತ ನಾಯಕನನ್ನು ಆಯ್ಕೆ ಮಾಡುತ್ತಾರೆ ಎಂದು ತಿಳಿಸಿದ್ದಾರೆ.
Advertisement
ಸಿಎಂ ಹಾಗೂ ಪುತ್ರ ವಿಜಯೇಂದ್ರ ದೆಹಲಿ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿ ಸಿಎಂ ಯಡ್ಡಿಯೂರಪ್ಪ ದೆಹಲಿಗೆ ಸಚಿವರನ್ನು ಬಿಟ್ಟು ಏಕಾಂಗಿಯಾಗಿ ಭೇಟಿ ಮಾಡಿದ್ದು ಏಕೆ ಗೊತ್ತಿಲ್ಲ. ಸಚಿವರನ್ನ ಕರೆದುಕೊಂಡು ಹೋಗಬೇಕಿತ್ತು. ಅವರ ಅತ್ಯಂತ ಪ್ರೀತಿಗೆ ಪಾತ್ರರಾದ ಬಸವರಾಜ ಬೊಮ್ಮಾಯಿ ಅವರು, ಶ್ರೇಷ್ಠ ನಾಯಕರಾದ ಗೋವಿಂದ ಕಾರಜೋಳ ಇದ್ದರು. ಅತ್ಯಂತ ಪ್ರಬಲವಾಗಿ ವಾದ ಮಾಡುವಂತಹ ಆರ್.ಅಶೋಕ್ ಇದ್ದರು. ಅವರನ್ನು ಕರೆದುಕೊಂಡು ಹೋಗಬೇಕಿತ್ತು. ಪಾಪ ಅವರನ್ನ ಏಕೆ ಕರೆದುಕೊಂಡು ಹೋಗಿಲ್ಲ ಅವರಿಗೆ ಗೊತ್ತು. ಸಿಎಂ ದೆಹಲಿಗೆ ಬರುತ್ತಾರೆ ಅಂತಾ ಸುದ್ದಿ ತಿಳಿದು ನಾನು ದೆಹಲಿಯಿಂದ ಹೊರಟೆ ಎಂದು ವ್ಯಂಗ್ಯ ಮಾಡಿದ್ದಾರೆ.
ನಾನು 9 ದಿನ ದೆಹಲಿಯಲ್ಲಿದ್ದೆ, ನನಗೆ ಎಲ್ಲರೂ ಬಹಳ ಹಳೆಯ ಪರಿಚಯ. ನಾನು ಅಟಲ್ ಬಿಹಾರಿ ವಾಜಪೇಯಿ ಅವರ ಸರ್ಕಾರದಲ್ಲಿ ಕೆಲಸ ಮಾಡಿದವನು. ಎಲ್ಲಾ ಮಂತ್ರಿಗಳು, ಹಿರಿಯ ನಾಯಕರ ಜೊತೆ ನನಗೆ ಒಳ್ಳೆಯ ಸಂಬಂಧ ಇದೆ. ಸೌಹಾರ್ದಯುತವಾದ ಮಾತುಕತೆ ಮಾಡಿದ್ದೇನೆ. ಅಲ್ಲಿ ಏನು ಮಾತನಾಡಿದ್ದೇನೆ ಎನ್ನುವುದರ ಬಗ್ಗೆ ನಾನು ಹೇಳಲ್ಲ ಎಂದಿದ್ದಾರೆ. ಇದನ್ನೂ ಓದಿ: ವಿಜಯೇಂದ್ರರಿಗೆ ಆಪ್ತರಿರೋರು ಸಿಸಿಬಿಯಲ್ಲಿದ್ದಾರೆ: ಯತ್ನಾಳ್