– ರೆಸ್ಟ್ ತೆಗೆದುಕೊಳ್ಳುವ ಪ್ರಶ್ನೆಯೇ ಇಲ್ಲ
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಇದೀಗ ಕೊರೊನಾ ನೆಗೆಟಿವ್ ಬಂದಿದ್ದು, ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಸಿಎಂಗೆ ಆರು ದಿನಗಳ ಆಸ್ಪತ್ರೆ ವಾಸ್ತವ್ಯ ಮುಕ್ತಾಯಗೊಳಿಸಿ ಇಂದು ತಮ್ಮ ಕಾವೇರಿ ನಿವಾಸಕ್ಕೆ ಮರಳಿದ್ದಾರೆ. ಕಳೆದ ಶುಕ್ರವಾರ ಎರಡನೇ ಬಾರಿ ಕೊರೊನಾ ಪಾಸಿಟಿವ್ ದೃಢಪಟ್ಟು ಆಸ್ಪತ್ರೆಗೆ ದಾಖಲಾಗಿದ್ದರು.
Advertisement
I have been discharged from the hospital today and I thank you all for your support and good wishes. pic.twitter.com/xhhHolBtEj
— B.S.Yediyurappa (@BSYBJP) April 22, 2021
Advertisement
ಡಿಸ್ಚಾರ್ಜ್ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ರೆಸ್ಟ್ ತಗೊಳೋ ಪ್ರಶ್ನೆಯೇ ಇಲ್ಲ. ಇಂದು ಸಂಜೆಯೇ ಸಚಿವ ಸಹೋದ್ಯೋಗಿಗಳ ಸಭೆ ಕರೆಯುತ್ತೇನೆ. ಕೋವಿಡ್ ನಿರ್ವಹಣೆಗೆ ಮೊದಲ ಆದ್ಯತೆ ನೀಡುವುದಾಗಿ ಹೇಳಿದರು.
Advertisement
ನಾನು ನಿರಂತರವಾಗಿ ಸಿಎಸ್, ಸಚಿವರ ಜೊತೆ ಸಂಪರ್ಕದಲ್ಲಿದ್ದೆ. ಬಿಗಿಯಾದ ನಿಯಮಗಳನ್ನು ಕೈಗೊಂಡಿದ್ದೇವೆ. ಅದರ ಪಾಲನೆನೆಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದೇನೆ. ಕೊರೊನಾ ದಿನೇ ದಿನೇ ಹೆಚ್ಚಾಗ್ತಿದೆ. ಒಂದು ಮನೇಲಿ 3-4 ಜನಕ್ಕೆ ಕೊರೊನಾ ಬರುತ್ತಿದೆ ಎಂದರು.
Advertisement
ಜ್ವರದ ಹಿನ್ನಲೆಯಲ್ಲಿ ಇಂದು ತಪಾಸಣೆಗೆ ಒಳಪಟ್ಟಾಗ ಕೋವಿಡ್ ಪರೀಕ್ಷಾ ವರದಿ ಪಾಸಿಟಿವ್ ಬಂದಿರುತ್ತದೆ. ಅಲ್ಪ ಪ್ರಮಾಣದಲ್ಲಿ ರೋಗ ಲಕ್ಷಣಗಳಿರುವುದರಿಂದ ವೈದ್ಯರ ಸಲಹೆಯಂತೆ ಮಣಿಪಾಲ್ ಆಸ್ಪತ್ರೆಗೆ ದಾಖಲಾಗುತ್ತಿದ್ದೇನೆ. ಕಳೆದ ಕೆಲವು ದಿನಗಳಲ್ಲಿ ಸಂಪರ್ಕಕ್ಕೆ ಬಂದಿದ್ದವರು ಕ್ವಾರಂಟೈನ್ ನಲ್ಲಿದ್ದು, ಒಮ್ಮೆ ಪರೀಕ್ಷಿಸಿಕೊಳ್ಳಿ ಎಂದು ಕೋರುತ್ತೇನೆ
— B.S.Yediyurappa (@BSYBJP) April 16, 2021
ಪ್ರಧಾನಿಯವರು ಹೇಳಿದಂತೆ, ಮಾಸ್ಕ್, ಅಂತರ ಬಿಟ್ರೆ ಬೇರೆ ಪರಿಹಾರ ಇಲ್ಲ. ಜನ ಮನೆಯಿಂದ ಹೊರಗೆ ಬರಬಾರದು. ಅನಗತ್ಯವಾಗಿ ಹೊರಗೆ ಬರೋದು ಬೇಡ ಜನ. ನಾವು ಬಿಗಿಯಾದ ಕ್ರಮ ಕೈಗೊಂಡಿದ್ದೇವೆ ಎಂದು ಸಿಎಂ ತಿಳಿಸಿದರು.