ಹುಬ್ಬಳ್ಳಿ: ಇಲ್ಲಿನ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಕಾರು ಪಂಕ್ಚರ್ ಆದ ಪ್ರಸಂಗ ನಡೆದಿದೆ.
ಹಾವೇರಿಗೆ ಭೇಟಿ ನೀಡಲೆಂದು ಮುಖ್ಯಮಂತ್ರಿಗಳು ಇಂದು ಬೆಂಗಳೂರಿನಿಂದ ಹುಬ್ಬಳ್ಳಿಗೆ ತೆರಳಿದ್ದಾರೆ. ಆದರೆ ಹುಬ್ಬಳ್ಳಿಯ ಏರ್ ಪೋರ್ಟಿನಲ್ಲಿ ಸಿಎಂ ಅವರ ಕಾರು ಪಂಕ್ಚರ್ ಆಗಿದೆ. ಸಿಎಂ ಅವರು ಕಾರಿನಲ್ಲಿ ಹುಬ್ಬಳ್ಳಿಯಿಂದ ಹಾವೇರಿಗೆ ತೆರಳಬೇಕಿತ್ತು. ತಮ್ಮ ಕಾರು ಪಂಕ್ಚರ್ ಆದ ಹಿನ್ನೆಲೆಯಲ್ಲಿ ಸಿಎಂ ಅವರು ಬೇರೆ ಸರ್ಕಾರಿ ಕಾರಿನಲ್ಲಿ ತೆರಳಬೇಕಾದ ಪ್ರಸಂಗ ನಡೆಯಿತು.
ಮಾಜಿ ಶಾಸಕ ರಾಜಶೇಖರ ಸಿಂಧೂರ ಅವರು ಇಂದು ಬೆಳಗ್ಗೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಹೀಗಾಗಿ ಅವರ ಅಂತ್ಯಕ್ರಿಯೆಯಲ್ಲಿ ಸಿಎಂ ತೆರಳಿದ್ದರು. ಈ ವೇಳೆ ಕಾರು ಪಂಕ್ಚರ್ ಆಗಿದ್ದು, ಕೊನೆಗೆ ಬೇರೆ ಕಾರಿನಲ್ಲಿ ತೆರಳಿ ಮಾಜಿ ಶಾಸಕರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ. ಸಿಎಂ ಜೊತೆ ಕೃಷಿ ಸಚಿವ ಬಿ.ಸಿ.ಪಾಟೀಲ ಸೇರಿದಂತೆ ಅಂತ್ಯಕ್ರಿಯೆಯಲ್ಲಿ ಜಿಲ್ಲೆಯ ಜನಪ್ರತಿನಿಧಿಗಳು ಭಾಗವಹಿಸಿದ್ದಾರೆ. ಮಾಜಿ ಶಾಸಕರ ಅಂತ್ಯಕ್ರಿಯೆ ಸವಣೂರು ಪಟ್ಟಣದ ವೀರಶೈವ ರುದ್ರಭೂಮಿಯಲ್ಲಿ ನಡೆದಿದೆ. ಇದನ್ನೂ ಓದಿ: ನಾವು ಅಡ್ಜೆಸ್ಟ್‌ಮೆಂಟ್ ಮಾಡಿಕೊಳ್ಳುವುದಾದರೆ ಸರ್ಕಾರವನ್ನೇ ಉರುಳಿಸಬಹುದಿತ್ತು- ಪ್ರೀತಂ ಗೌಡಗೆ ಎಚ್‍ಡಿಕೆ ತಿರುಗೇಟು
ಇತ್ತ ಹಾವೇರಿಯ ಸವಣೂರು ಪಟ್ಟಣಕ್ಕೆ ಸಿಎಂ ತೆರಳುವ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆ ಶಿಗ್ಗಾಂವಿ ಮತ್ತು ಸವಣೂರು ಪಟ್ಟಣದಲ್ಲಿ ಹೆಲಿಪ್ಯಾಡ್ ನಿರ್ಮಾಣ ಕಾರ್ಯ ಮಾಡಲಾಗಿತ್ತು.