Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಸಿಎಂ ಬದಲಾವಣೆ ಮಾಡಿದ್ರೆ ಮುಂದಿನ ಅಭ್ಯರ್ಥಿ ನಾನೇ: ಉಮೇಶ್ ಕತ್ತಿ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Belgaum | ಸಿಎಂ ಬದಲಾವಣೆ ಮಾಡಿದ್ರೆ ಮುಂದಿನ ಅಭ್ಯರ್ಥಿ ನಾನೇ: ಉಮೇಶ್ ಕತ್ತಿ

Belgaum

ಸಿಎಂ ಬದಲಾವಣೆ ಮಾಡಿದ್ರೆ ಮುಂದಿನ ಅಭ್ಯರ್ಥಿ ನಾನೇ: ಉಮೇಶ್ ಕತ್ತಿ

Public TV
Last updated: July 19, 2021 6:00 pm
Public TV
Share
3 Min Read
UMESH KATTI 2
SHARE

– ಸಿಎಂ ಆಗಲು ಎಲ್ಲಾ ಯೋಗ್ಯತೆಗಳು ನನ್ನಲ್ಲಿವೆ
– ಯಾವುದೇ ರೀತಿಯ ಬ್ಲ್ಯಾಕ್ ಸ್ಪಾಟ್ ನನ್ನಲ್ಲಿಲ್ಲ

ಬೆಳಗಾವಿ: ರಾಜ್ಯದಲ್ಲಿ ಸಿಎಂ ಬದಲಾವಣೆ ಬಗ್ಗೆ ರಾಜಕೀಯ ವಲಯದಲ್ಲಿ ಚರ್ಚೆ ವಿಚಾರವಾಗಿ, ಸಿಎಂ ಬದಲಾವಣೆ ಮಾಡಿದ್ರೆ ಮುಂದಿನ ಅಭ್ಯರ್ಥಿ ನಾನೇ ಎಂದು ಆಹಾರ ಸಚಿವ ಉಮೇಶ್ ಕತ್ತಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.

umesh katti cm

ಬೆಳಗಾವಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಕತ್ತಿ, ಹುಕ್ಕೇರಿ ಮತಕ್ಷೇತ್ರದ ಜನ 8 ಬಾರಿ ಶಾಸಕನಾಗಿ ಮಾಡಿ ಆಶೀರ್ವಾದ ಮಾಡಿದ್ದಾರೆ. ಎಂಟು ಬಾರಿ ಶಾಸಕನಾದ ಮೇಲೆ ಮಂತ್ರಿ ಆಗಬೇಕೆಂಬ ಆಸೆ ಇತ್ತು, ನಾಲ್ಕು ಬಾರಿ ರಾಜ್ಯದ ಮಂತ್ರಿಯಾಗಿ ನಾನು ಕೆಲಸ ಮಾಡಿದ್ದೇನೆ. ರಾಜ್ಯದ ಮುಖ್ಯಮಂತ್ರಿ ಆಗಲು ಎಲ್ಲಾ ಯೋಗ್ಯತೆಗಳು ನನ್ನಲ್ಲಿ ಇವೆ. ಯಾವುದೇ ರೀತಿಯ ಬ್ಲ್ಯಾಕ್ ಸ್ಪಾಟ್ ನನ್ನಲ್ಲಿ ಇಲ್ಲ, ಕಳಂಕರಹಿತ ವ್ಯಕ್ತಿತ್ವ ಇದೆ. ಅದರ ಜೊತೆ ಹುಕ್ಕೇರಿ ಜನರ ಆಶೀರ್ವಾದ ಇದೆ. ರಾಜ್ಯದ ಜನ ಆಶೀರ್ವದಿಸಿದ್ರೆ, ಪಕ್ಷದ ಹೈಕಮಾಂಡ್ ಮನಸ್ಸು ಮಾಡಿದ್ರೆ ನಾನು ಸಿಎಂ ಆಗುವ ಆಸೆ ಉಳ್ಳವನು ಎಂದಿದ್ದಾರೆ.

ಪಕ್ಷ ಮನಸ್ಸು ಮಾಡಿದ್ರೆ ರಾಜ್ಯದ ಸಿಎಂ ಆಗಬೇಕೆಂದು ಮನಸು ಮಾಡಿದ್ದೇನೆ. ಆದರೆ ಸದ್ಯಕ್ಕೆ ಸಿಎಂ ಖುರ್ಚಿ ಖಾಲಿ ಇಲ್ಲ, ಹೀಗಾಗಿ ಅದರ ಬಗ್ಗೆ ಚರ್ಚಿಸಲ್ಲ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರುಣ್ ಕುಮಾರ್ ಕರೆದ ಸಂಘಟನಾತ್ಮಕ ಸಭೆಗೆ ಬಂದಿದ್ದೇನೆ. ರಾಜ್ಯದಲ್ಲಿ ಸಿಎಂ ಇದ್ದಾರೆ, ಸರ್ಕಾರ ಇದೇ ಒಳ್ಳೆಯ ಸರ್ಕಾರ ನಡೀತಿದೆ. ಕಳೆದ ವರ್ಷದಿಂದ ಸಿಎಂ ಬದಲಾವಣೆ ಕೂಗು ಇದ್ದೇ ಇದೆ ಅದು ಯಾರು ಬದಲಾಯಿಸುತ್ತಿದ್ದಾರೋ ನನ್ನ ಗಮನಕ್ಕೆ ಬಂದಿಲ್ಲ. ಅದರ ಬಗ್ಗೆ ನಾನು ಪ್ರತಿಕ್ರಿಯೆ ನೀಡಲ್ಲ ಎಂದು ಉಮೇಶ್ ಕತ್ತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

yathnalಸಿಎಂ ಹುದ್ದೆ ಖಾಲಿ ಇಲ್ಲ, ಖಾಲಿ ಆದಾಗ ಆ ಬಗ್ಗೆ ವಿಚಾರ ಮಾಡುತ್ತೇನೆ. ಈಗ ಸಿಎಂ ಸ್ಥಾನ ಬದಲಾವಣೆ ಆದರೆ ಉತ್ತರ ಕರ್ನಾಟಕಕ್ಕೆ ಕೊಡಬೇಕೆಂಬುದು ನಮ್ಮ ವಾದ. ಯಾರೇ ಸಿಎಂ ಆದರೂ ಅಖಂಡ ರಾಜ್ಯ ಆಳುವ ಸಿಎಂ ಇರಬೇಕು. ಸಿಎಂ ಹುದ್ದೆ ಖಾಲಿ ಆದ್ರೆ ಮುಂದಿನ ಅಭ್ಯರ್ಥಿ ನಾನೇ. ಸಿಎಂ ಸ್ಥಾನ ಬದಲಾವಣೆ ಆದ್ರೆ ನಂದೇ ನಂಬರ್ ಇದೆ. ಅವಧಿ ಮತ್ತು ಕಳಂಕರಹಿತ ಎಲ್ಲ ಅರ್ಹತೆ ಇರುವ ಕ್ಯಾಂಡಿಡೇಟ್ ನಾನು. ನಸೀಬ್ ಗಟ್ಟಿ ಇದ್ರೆ, ಹೈಕಮಾಂಡ್ ನಿರ್ಣಯ ಮಾಡಿದರೆ ನಾನು ಸಿಎಂ ಆಗುವ ಆಸೆ ಇಟ್ಟುಕೊಂಡಿದ್ದೇನೆ. ಈ ಬಗ್ಗೆ ಬೆಳಗಾವಿಯಲ್ಲಿ ನಾನು ಯಾವುದೇ ಸಭೆ ಮಾಡಿಲ್ಲ ಅರವಿಂದ ಬೆಲ್ಲದ್, ಬಸನಗೌಡ ಪಾಟೀಲ್ ಯತ್ನಾಳ್ ಬಗ್ಗೆ ನೀವೇ ಹೇಳುತ್ತಿದ್ದೀರಿ. ಯತ್ನಾಳ್ ಬೆಳಗಾವಿಗೆ ಬರುತ್ತಿರುತ್ತಾರೆ. ನಾನು ವಿಜಯಪುರಕ್ಕೆ ಹೋಗುತ್ತಿರುತ್ತೇನೆ. ಎಲ್ಲರೂ ಕೂಡಿ ಊಟ ಮಾಡಿದ್ದೇವೆ ವಿನಃ ನಾವು ಯಾವುದೇ ಸಭೆ ಮಾಡಿಲ್ಲ ಎಂದರು. ಇದನ್ನೂ ಓದಿ: ಸಿಎಂ ಮಾಡಿ ಅಂದವರಿಗೆ ಮೋದಿ ಕಪಾಳಕ್ಕೆ ಹೊಡಿತಾರೆ: ಯತ್ನಾಳ್

Nalin Kumar Kateel

ನಳಿನ್‍ಕುಮಾರ್ ಕಟೀಲ್ ಅವರದ್ದು ಎನ್ನಲಾದ ಆಡಿಯೋ ವೈರಲ್ ವಿಚಾರವಾಗಿ ಪ್ರತಿಕ್ರಿಯಿಸಿ, ನಳಿನ್ ಕುಮಾರ್ ಕಟೀಲ್ ಆಡಿಯೋ ಬಗ್ಗೆ ಅವರು ತಮ್ಮ ಅನಿಸಿಕೆ ಹೇಳಿರಬಹುದು. ನಾನು ನಳಿನ್ ಕುಮಾರ್ ಕಟೀಲ್ ಅನಿಸಿಕೆ ನೋಡಿಲ್ಲ, ನೋಡಿದ ಮೇಲೆ ಪ್ರತಿಕ್ರಿಯಿಸುತ್ತೇನೆ. ಕಟೀಲ್ ತಮ್ಮ ಆಡಿಯೋ ಅಲ್ಲ ಅಂದಾಗ ನಾನೇನು ಪ್ರತಿಕ್ರಿಯೆ ನೀಡಲಿ. ಆ ಆಡಿಯೋ ಯಾರು ಮಾಡಿದ್ದು ಎಂದು ಮಾಧ್ಯಮ ಪ್ರತಿನಿಧಿಗಳು ಪ್ರಶ್ನಿಸಿದಾಗ ನೀವೇ ಮಾಡಿರಬಹುದು ಎಂದು ಉಮೇಶ್ ಕತ್ತಿ ಮಾಧ್ಯಮಗಳ ಮೇಲೆ ಗೂಬೆ ಕೂರಿಸಿದರು. ಇದನ್ನೂ ಓದಿ: ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರಬುದ್ಧರು: ಉಮೇಶ್ ಕತ್ತಿ

ದೆಹಲಿ ಭೇಟಿ ವಿಚಾರವಾಗಿ, ಜೋಳದ ಬೆಂಬಲ ಬೆಲೆ ಚರ್ಚೆಗೆ ನಾನು 6 ಬಾರಿ ದೆಹಲಿ ಭೇಟಿ ನೀಡಿದ್ದು ನಿಜ. ಜೋಳದ ಬೆಂಬಲ ಬೆಲೆ ಮೂರುವರೆ ಸಾವಿರದಿಂದ ನಾಲ್ಕು ಸಾವಿರವರೆಗೂ ಮಾಡಬೇಕೆಂಬ ಆಸೆ ಇದೆ ಎಂದು ನುಡಿದರು.

TAGGED:belagavicmkarnatakaNalin Kumar KateelPublic TVumesh kattiಉಮೇಶ್ ಕತ್ತಿನಳಿನ್ ಕುಮಾರ್ ಕತ್ತಿಪಬ್ಲಿಕ್ ಟಿವಿಬೆಳಗಾವಿಸಿಎಂಸಿಎಂ ಅಭ್ಯರ್ಥಿ
Share This Article
Facebook Whatsapp Whatsapp Telegram

Cinema news

Thalapathy Vijay
Kill Piracy | ʻಜನನಾಯಗನ್ʼ ರಿಲೀಸ್‌ಗೂ ಮುನ್ನವೇ HD ವಿಡಿಯೋ ಲೀಕ್‌ – ಹಿಂದಿದ್ಯಾ ದೊಡ್ಡ ಸಂಚು?
Cinema Latest Main Post South cinema
Monalisa
ಕುಂಭಮೇಳದ ಮೊನಾಲಿಸಾ ಮದುವೆಗೆ ಟ್ವಿಸ್ಟ್‌ – ಪತಿ ಫರ್ಮಾನ್ ಖಾನ್ ವಿರುದ್ಧ ಪೋಕ್ಸೋ ಕೇಸ್
Cinema Latest Main Post National
rashmika mandanna
ಮದುವೆಯಂದು ರಶ್ಮಿಕಾ ಮಿನಿಮಲ್ ಮೇಕಪ್ ಹಾಕಿದ್ದು ಯಾಕೆ – ಗುಟ್ಟು ಬಿಚ್ಚಿಟ್ಟ ಮೇಕಪ್ ಆರ್ಟಿಸ್ಟ್‌
Cinema Latest Sandalwood South cinema
Suhana Khan
ಮಗಳನ್ನೇ ಸಹೋದ್ಯೋಗಿ ಥರ ನೋಡುವ ಶಾರುಖ್ ಖಾನ್!
Bollywood Cinema Latest Top Stories

You Might Also Like

kea
Bengaluru City

CET-2026ರ ಪ್ರವೇಶ ಪತ್ರ ಬಿಡುಗಡೆ: ಕೆಇಎ

Public TV
By Public TV
9 minutes ago
Ramesh Kumar
Districts

63 ಎಕ್ರೆ ಅರಣ್ಯ ಭೂಮಿ ಒತ್ತುವರಿ ಪ್ರಕರಣ – ಮಾಜಿ ಸ್ಪೀಕರ್ ರಮೇಶ್ ಕುಮಾರ್‌ಗೆ ಹಿನ್ನಡೆ

Public TV
By Public TV
16 minutes ago
CRIME
Districts

ಸರ್ಕಾರಿ ಕಚೇರಿಯಲ್ಲಿ ದಲಿತ ಮಹಿಳೆಯ ವಿವಸ್ತ್ರಗೊಳಿಸಿ ವಿಕೃತಿ – 8 ಗಂಟೆ ನಿಲ್ಲಿಸಿದ್ದ ಅಧಿಕಾರಿಗಳ ವಿರುದ್ಧ ದೂರು

Public TV
By Public TV
34 minutes ago
ಸಾಂದರ್ಭಿಕ ಚಿತ್ರ
Bagalkot

ಇನ್ಮುಂದೆ ಬುಕ್‌ ಮಾಡಿದ ದಿನವೇ ಗೃಹ ಬಳಕೆ ಸಿಲಿಂಡರ್ ವಿತರಣೆ – ಗ್ಯಾಸ್ ಏಜೆನ್ಸಿಗಳಿಗೆ ಸೂಚನೆ

Public TV
By Public TV
48 minutes ago
MQ 4C Triton
Latest

ಹಾರ್ಮುಜ್ ಜಲಸಂಧಿಯಲ್ಲಿ ಅಮೆರಿಕದ 1,859 ಕೋಟಿ ಮೌಲ್ಯದ MQ-4C ಟ್ರೈಟಾನ್ ಡ್ರೋನ್ ನಾಪತ್ತೆ

Public TV
By Public TV
1 hour ago
kalaburagi train
Kalaburagi

ಪಂಢರಪುರ-ತಿರುಪತಿ, ಬೆಂಗಳೂರು ಕಂಟೋನ್ಮೆಂಟ್-ಕಲಬುರಗಿ, SMVT ಬೆಂಗಳೂರು-ಬೀದರ್ ವಿಶೇಷ ರೈಲುಗಳ ಸೇವೆ ಮುಂದುವರಿಕೆ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?