– ಅಧಿಕಾರ ಸ್ವೀಕರಿಸುತ್ತಿದ್ದಂತೆ, ನೆರೆ ಪೀಡಿತ ಪ್ರದೇಶಗಳ ವೀಕ್ಷಣೆ ಮಾಡಿದ್ದಾರೆ
– ಬಿಎಸ್‍ವೈ ರಾಷ್ಟ್ರೀಯ ಪಕ್ಷದಲ್ಲಿ 45 ವರ್ಷ ಕೆಲಸ ಮಾಡಿರುವ ತೃಪ್ತಿ ಅವರಿಗಿದೆ
ಶಿವಮೊಗ್ಗ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಕ್ಷಣದಿಂದಲೇ ರಾಜ್ಯದ ಬಗ್ಗೆ ಚಿಂತನೆ ಮಾಡಿ, ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎಂದು ಸಂಸದ ಬಿ.ವೈ. ರಾಘವೇಂದ್ರ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತಿಗೆ ತಿರುಗೇಟು ನೀಡಿದ್ದಾರೆ.
Advertisement
ಶಿವಮೊಗ್ಗದಲ್ಲಿ ಈ ಬಗ್ಗೆ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಸುಮಾರು 450ಕ್ಕೂ ಹೆಚ್ಚು ಕಿ.ಮೀ. ಪ್ರವಾಸ ಮಾಡಿ, ನೆರೆ ಸಂತ್ರಸ್ತರ ಪರವಾಗಿ ನಿಂತಿದ್ದಾರೆ. ನೆರೆ ಪೀಡಿತ ಪ್ರದೇಶಗಳ ಭೇಟಿ ನಂತರ ಅರ್ಧ ರಾತ್ರಿಯೇ ಬೆಂಗಳೂರಿಗೆ ಹಿಂದಿರುಗಿ, ಮುಂಜಾನೆಯೇ ಪ್ರಧಾನಿಯವರನ್ನು ಭೇಟಿ ಮಾಡಲು ದೆಹಲಿಗೆ ತೆರಳಿದರು. ಪ್ರಧಾನಿ ಮೋದಿ ಅವರ ಜೊತೆ ಜಲ್ ಜೀವನ್ ಮಿಷನ್ ಮತ್ತು ನೀರಾವರಿ ಯೋಜನೆಗಳ ಕುರಿತಂತೆ ಚರ್ಚೆ ನಡೆಸಿದ್ದಾರೆ. ಈ ಬಗ್ಗೆ ವಿಪಕ್ಷದವರು ಟೀಕೆ ಮಾಡುತ್ತಾರೆ ಎಂದರೆ ಅವರಿಗೆಲ್ಲಾ ಉತ್ತರ ಕೊಡಲು ಆಗುವುದಿಲ್ಲ. ರಾಜ್ಯಕ್ಕೆ ಸಿಎಂ ಆಗಿ ಏನಾದರೊಂದು ಹೊಸ ಯೋಜನೆ ತರಬೇಕೆಂದು, ದೆಹಲಿ ಮಟ್ಟದ ಸಚಿವರನ್ನು ಭೇಟಿ ಮಾಡಿ ಚರ್ಚಿಸಿದ್ದಾರೆ ಎಂದು ಬಿವೈಆರ್ ತಿರುಗೇಟು ನೀಡಿದ್ದಾರೆ.
Advertisement
Advertisement
ಇದೇ ವೇಳೆ ಶಿವಮೊಗ್ಗ ಜಿಲ್ಲೆಯಲ್ಲಿ ಮುಖ್ಯಮಂತ್ರಿ ಇದ್ದರು. ಸಚಿವರಾಗಿ ಈಶ್ವರಪ್ಪ ಇದ್ದರು. ಹೀಗಾಗಿ ಜಿಲ್ಲೆಯಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಆಗಿವೆ. ಮುಂದೆಯೂ ಅದೇ ರೀತಿ ಕೆಲಸಗಳು ಮುಂದುವರಿಯುತ್ತವೆ. ಜಿಲ್ಲೆಯಲ್ಲಿ ಸಾಕಷ್ಟು ಅನುಭವ ಇರುವ ರಾಜಕಾರಣಿಗಳು ಇದ್ದಾರೆ. ಮಂತ್ರಿ ಮಂಡಲದಲ್ಲಿ ಜಿಲ್ಲೆಯ ಶಾಸಕರಿಗೆ ಹೆಚ್ಚಿನ ಸ್ಥಾನವನ್ನು ಕೊಡಬೇಕು ಎಂದಿದ್ದಾರೆ.
Advertisement
ಯಡಿಯೂರಪ್ಪ ಅವರು ರಾಷ್ಟ್ರೀಯ ಪಕ್ಷದಲ್ಲಿ 45 ವರ್ಷ ಕೆಲಸ ಮಾಡಿದ್ದಾರೆ. ಆ ತೃಪ್ತಿ ಅವರಿಗೆ ಇದೆ. ಮುಂದೆಯೂ ಸಹ ಪಕ್ಷ ಸಂಘಟನೆಯಲ್ಲಿ ತೊಡಗಿಸಿ ಕೊಳ್ಳುತ್ತಾರೆ. ಎಲ್ಲಿಯೂ ಎದೆಗುಂದದೆ ಕೆಲಸ ಮಾಡಿದ್ದಾರೆ ಅಂತ ಯಡಿಯೂರಪ್ಪ ಕುರಿತಂತೆ ರಾಘವೇಂದ್ರ ಬ್ಯಾಟಿಂಗ್ ಮಾಡಿದ್ದಾರೆ. ಇದನ್ನೂ ಓದಿ: ಬಿಎಸ್‍ವೈ ಮಾತನ್ನೇ ಬಿಜೆಪಿ ಹೈಕಮಾಂಡ್ ಕೇಳಲಿಲ್ಲ, ಜನತಾದಳ ಮೂಲದ ಬೊಮ್ಮಾಯಿ ಮಾತು ಕೇಳುತ್ತಾರ? – ಸಿದ್ದರಾಮಯ್ಯ ಟೀಕೆ