ಬೆಳಗಾವಿ/ಚಿಕ್ಕೋಡಿ: ಸಿಂದಗಿ ಉಪಚುನಾವಣೆಯಲ್ಲಿ ನನ್ನ ಸ್ಪರ್ಧೆಗಳು ಊಹಾಪೋಹಗಳು ಹರಿದಾಡುತ್ತಿವೆ. ಸಿಂದಗಿಯಲ್ಲಿ ಸ್ಥಳೀಯ ಮುಖಂಡರಿದ್ದು, ನಾನು ಅಥವಾ ನನ್ನ ಮಗ ಸಿಂದಗಿಯಿಂದ ಸ್ಪರ್ಧೆ ಮಾಡಲ್ಲ ಎಂದು ಡಿಸಿಎಂ ಲಕ್ಷ್ಮಣ ಸವದಿ ಸ್ಪಷ್ಟನೆ ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಕೆಂಪವಾಡ ಸಕ್ಕರೆ ಕಾರ್ಖಾನೆಯ ಮೈದಾನದಲ್ಲಿ ಕಾಗವಾಡ ತಾಲೂಕಿನಲ್ಲಿ ನೂತನವಾಗಿ ಗ್ರಾಮ ಪಂಚಾಯತಿ ಸದಸ್ಯರ ಸತ್ಕಾರ ಸಮಾರಂಭ ಮುಕ್ತಾಯ ಬಳಿಕ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ಈ ಹಿಂದೆ ಬಸವಕಲ್ಯಾಣದಿಂದದಲೂ ಸ್ಪರ್ಧಿಸಲು ಕೆಲವರು ಸೂಚಿಸಿದ್ದರು. ಆದ್ರೆ ವಿನಂತಿಯಿಂದ ತಿರಸ್ಕಾರ ಮಾಡಿದ್ದೇನೆ ಎಂದು ಹೇಳಿದರು.
ಟಿಕೆಟ್ ದರ ಹೆಚ್ಚಳವಿಲ್ಲ: ಬಸ್ ಟಿಕೆಟ್ ದರ ಹೆಚ್ಚಿಗೆ ಮಾಡುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ. ಈಗಾಗಲೇ ಕೊರೊನಾದಿಂದ ಸಾರ್ವಜನಿಕರು ತುಂಬಾ ತೊಂದರೆ ಅನುಭವಿಸಿದ್ದಾರೆ. ಯಾವುದೇ ತೆರನಾಗಿ ಮೂರು ನಿಗಮಗಳಲ್ಲಿ ಟಿಕೆಟ್ ದರ ಹೆಚ್ಚಿಗೆ ಮಾಡುವುದಿಲ್ಲ. ಕಳೆದ ಬಾರಿ 12 ಪ್ರತಿಷತ ಟಿಕೆಟ್ ದರ ಹೆಚ್ಚಿಗೆ ಮಾಡಿದ್ದೇವೆ. ಈ ಸಲ ಟಿಕೇಟ್ ದರ ಹೆಚ್ಚು ಮಾಡುವ ಪ್ರಸ್ತಾಪ ಇಲ್ಲ ಎಂದರು.
10ರಲ್ಲಿ 7 ಬೇಡಿಕೆ ಈಡೇರಿಕೆ: ಸಾರಿಗೆ ನೌಕರರ ಮುಷ್ಕರ ವಿಚಾರವಾಗಿ ಪ್ರತಿಕ್ರಿಯಿಸಿದ ಸವದಿ, ಈ ಹಿಂದೆ ಸಾರಿಗೆ ನೌಕರರು ಅನಿರ್ದಿಷ್ಟಿತವಾಗಿ ಪ್ರತಿಭಟನೆ ಮಾಡಿದರು. ಅವರ 10 ಬೇಡಿಕೆಗಳಲ್ಲಿ 9 ಬೇಡಿಕೆಗಳನ್ನು ಈಡೇರಿಸಲು ಒಪ್ಪಿದ್ದೀವಿ. ಈಗಾಗಲೇ ಏಳು ಬೇಡಿಕೆಗಳನ್ನು ಈಡೇರಿಸಿದ್ದೇವೆ. ಅವರು ಇಟ್ಟಿರುವ ಮೂರು ಬೇಡಿಕೆಗಳಲ್ಲಿ ಇವತ್ತಿನ ಹಣಕಾಸು ವ್ಯವಸ್ಥೆಯನ್ನು ನೋಡಿಕೊಂಡು ಅವರಿಗೆ ಆರನೇ ಆಯೋಗ ಶಿಪಾರಸ್ಸಿನ ಮೇರೆಗೆ ವೇತನ ಹೆಚ್ಚಿಸಬೇಕು ಎಂಬ ಬೇಡಿಕೆಯನ್ನು ಆದಷ್ಟು ಬೇಗ ಬಗೆಹರಿಸುತ್ತೇವೆ ಎಂದು ಹೇಳಿದರು. ಯಾರು ಕಡಿಮೆ ಇಂಧನ ಬಳಕೆ ಮಾಡಿ ಬಸ್ ಸಂಚರಿಸುತ್ತಾರೆ ಅಂತವರಿಗೆ ನಾಲ್ಕು ವಿಭಾಗದಲ್ಲಿ ನಾಲ್ಕು ಜನರನ್ನು ಆಯ್ಕೆ ಮಾಡಿ 10 ಗ್ರಾಂ ಬಂಗಾರದ ಪದಕ ನೀಡಲಾಗುವುದು ಎಂದು ತಿಳಿಸಿದರು.