ಬೆಂಗಳೂರು: ಕನ್ನಡ ಚಲನಚಿತ್ರೋದ್ಯಮದ ಜನಪ್ರಿಯ ಗೀತರಚನೆಕಾರ ಹಾಗೂ ಸಂಗೀತ ನಿರ್ದೇಶಕ ವಿ. ನಾಗೇಂದ್ರ ಪ್ರಸಾದ್‍ರವರಿಗೆ ಹಂಪಿ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ನೀಡಿದೆ.
Advertisement
ಹೌದು ಬಳ್ಳಾರಿಯಲ್ಲಿ ಹಂಪಿ ಕನ್ನಡ ವಿಶ್ವ ವಿದ್ಯಾಲಯದ 29ನೇ ಘಟಕೋತ್ಸವ ಕಾರ್ಯಕ್ರಮ ನಡೆದಿದ್ದು, ಈ ವೇಳೆ ನಾಗೇಂದ್ರ ಪ್ರಸಾದ್ ಅವರ ಮಹಾಪ್ರಬಂಧಕ್ಕೆ ಡಾಕ್ಟರೇಟ್ ಪದವಿ ದೊರೆತಿದೆ.
Advertisement
ಈ ಬಗ್ಗೆ ನಾಗೆಂದ್ರ ಪ್ರಸಾದ್, ಕನ್ನಡ ಚಲನಚಿತ್ರ ಗೀತೆಗಳ ಸಾಮಾಜಿಕ ಪರಿಣಾಮ: ಒಂದು ಅಧ್ಯಯನ’ ಎಂಬ ವಿಷಯ ಕುರುತು ಡಿ.ಲಿಟ್(ಡಾಕ್ಟರ್ ಆಫ್ ಲಿಟರೇಚರ್) ಪದವಿಗೆ ಸಂಶೋಧನೆ ಅಧ್ಯಯನ ನಡೆಸಿ ಕನ್ನಡ ವಿಶ್ವವಿದ್ಯಾಲಯ ಹಂಪಿಗೆ ಸಲ್ಲಿಸಿದ್ದರು. ಈ ಡಿ. ಲಿಟ್ ಮಹಾಪ್ರಬಂಧಕ್ಕೆ ಕ್ನನಡ ವಿಶ್ವವಿದ್ಯಾಲಯ, ಹಂಪಿಯು, ಇಂದು ತನ್ನ 29ನೇ ನುಡಹಬ್ಬದಲ್ಲಿ ನನಗೆ ಡಾಕ್ಟರೇಟ್ ಪದವಿಯನ್ನು ನೀಡಿತು. ಈ ಸಂತಸದ ವಿಷಯವನ್ನು ತಮ್ಮೊಂದಿಗೆ ಹಂಚಿಕೊಳ್ಳುವ ಮನಸಾಯಿತು. ನಿಮ್ಮ ಒಲುಮೆಯೇ ನನ್ನನ್ನು ಸದಾ ಪೋಷಿಸಿದೆ. ಪ್ರೋತ್ಸಾಹಿಸಿದೆ. ಧನ್ಯವಾದಗಳು ಎಂದು ತಮ್ಮ ಫೇಸ್‍ಬುಕ್ ಖಾತೆಯಲ್ಲಿ ಫೋಟೋ ಜೊತೆ ಕ್ಯಾಪ್ಷನ್ ಹಾಕಿಕೊಂಡಿದ್ದಾರೆ.
Advertisement
ಆತ್ಮೀಯರೇ,
*ಕನ್ನಡ ಚಲನಚಿತ್ರ ಗೀತೆಗಳ ಸಾಮಾಜಿಕ ಪರಿಣಾಮ : ಒಂದು ಅಧ್ಯಯನ* ಎಂಬ ವಿಷಯ ಕುರಿತು ಡಿ. ಲಿಟ್ (ಡಾಕ್ಟರ್ ಆಫ್ ಲಿಟರೇಚರ್) ಪದವಿಗೆ…Posted by Nagendra Prasad on Friday, April 9, 2021
ಕನ್ನಡ ಚಿತ್ರರಂಗಕ್ಕೆ ನಾಗೇಂದ್ರ ಪ್ರಸಾದ್ ಪಾದಾರ್ಪಣೆ ಮಾಡಿ 22 ವರ್ಷ ಕಳೆದಿದ್ದು, ಇಲ್ಲಿಯವರೆಗೂ ಸುಮಾರು 3,000ಕ್ಕೂ ಹೆಚ್ಚು ಹಾಡನ್ನು ರಚಿಸಿದ್ದಾರೆ. ಅಲ್ಲದೇ ನಟ, ಗೀತಾ ರಚನೆಕಾರ, ಸಂಗೀತಗಾರ, ನಿರ್ದೇಶಕ, ಸಂಭಾಷಣೆಕಾರ ಹೀಗೆ ಹಲವಾರು ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ಕನ್ನಡಗರ ಮನಗೆದ್ದಿದ್ದಾರೆ.