ಮಂಗಳೂರು: ಪತ್ರಕರ್ತ, ಸಾಹಿತಿ ಧೀರಜ್ ಪೊಯ್ಯೆಕಂಡ ಅವರ ‘ಮಿತಿ’ ಕಾದಂಬರಿ ಇಂದು ಬಿಡುಗಡೆಗೊಂಡಿತು.
ಮಂಗಳೂರಿನ ಬಿಜೈನ ಭಾರತಿ ನಗರದ ಆ?ಯಡ್ ಐಡಿಯಾದಲ್ಲಿ ಈ ಕಾರ್ಯಕ್ರಮ ನಡೆದಿದ್ದು, ಸಾಹಿತಿ ವಿವೇಕಾನಂದ ಕಾಮತ್ ಕಾದಂಬರಿಯನ್ನು ಬಿಡುಗಡೆಗೊಳಿಸಿದರು. ಕಾದಂಬರಿ ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಕಾದಂಬರಿಯಲ್ಲಿರುವ ಎಲ್ಲಾ ಪಾತ್ರಗಳು ಇರುವ ಮಿತಿಯೊಳಗೆ ಬದುಕಿನ ಜೊತೆ ಹೊಂದಾಣಿಕೆ ಮಾಡಿಕೊಂಡು ನಡೆಯುವಂತದ್ದೆ ಈ ಕಾದಂಬರಿಯ ಮೂಲದ್ರವ್ಯವಾಗಿದೆ ಎಂದು ಹೇಳಿದರು.
ಧೀರಜ್ ಪೊಯ್ಯೆಕಂಡ ಅವರ ಬರವಣಿಗೆಯ ಬಗ್ಗೆಯೂ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು. ಕಾದಂಬರಿ ಕುರಿತು ರಶ್ಮಿ ಶರ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ವೇಣು ಶರ್ಮ, ಹಿರಿಯ ಪತ್ರಕರ್ತ ದಿನಕರ್ ಇಂದಾಜೆ, ರಾಘವೇಂದ್ರ ಅಗ್ನಿಹೋತ್ರಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಪತ್ರಕರ್ತ ವೇಣು ವಿನೋದ್ ಸ್ವಾಗತಿಸಿದರು. ಕೃಷ್ಣಮೋಹನ್ ತಲೆಂಗಳ ಕಾರ್ಯಕ್ರಮ ನಿರೂಪಿಸಿದರು. ಇಂದು ಬಿಡುಗಡೆಗೊಂಡ ಮಿತಿ ಕಾದಂಬರಿಯು ಕನ್ನಡಲೋಕ ವೆಬ್‍ಸೈಟ್‍ನಲ್ಲಿ ಲಭ್ಯವಿದೆ.