ದಾವಣಗೆರೆ: ಕೊರೊನಾ ವೈರಸ್ ವಿರುದ್ಧ ಹೋರಾಟ ಮಾಡಿದ್ದ ಮಹಿಳೆ ಇದೀಗ ಧರಣಿ ಕುಳಿತಿದ್ದಾರೆ.
ಹೌದು. ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲೂಕಿನ ಮತ್ತಿಹಳ್ಳಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ಚನ್ನಮ್ಮ ಉಪವಾಸ ಸತ್ಯಾಗ್ರಹಕ್ಕೆ ಮುಂದಾಗಿದ್ದಾರೆ.
Advertisement
Advertisement
ಧರಣಿ ಯಾಕೆ?
ಕೊರೊನಾ ನಿಯಂತ್ರಣಕ್ಕೆ ಚನ್ನಮ್ಮ ತಮ್ಮ ಆಡಳಿತಾವಧಿಯಲ್ಲಿ ಸರ್ಕಾರದ ನಿಯಮಾವಳಿಯಂತೆ 15 ಲಕ್ಷ ಖರ್ಚು ಮಾಡಿದ್ದರು. ಆದರೆ ಈ ಹಣವನ್ನು ಬಳ್ಳಾರಿ ಜಿ.ಪಂ. ಸಿಇಓ ಬಿಡುಗಡೆಯಾಗದಂತೆ ಲಾಕ್ ಮಾಡಿದ್ದಾರೆ ಎಂದು ಇದೀಗ ಮಹಿಳೆ ಆರೋಪಿಸುತ್ತಿದ್ದಾರೆ.
Advertisement
ಕೇಂದ್ರ ಸರ್ಕಾರದಿಂದ ನೇರವಾಗಿ ಹಣ ಬರಬೇಕಿತ್ತು. ಆದರೆ ಸಿಇಓ ಅಕೌಂಟ್ ಲಾಕ್ ಹಿನ್ನೆಲೆ ಹಣ ಬಿಡುಗಡೆಯಾಗಿಲ್ಲ. ಸಾಲ ಮಾಡಿ ಕೊರೊನಾ ನಿಯಂತ್ರಣಕ್ಕೆ ಹಣ ಖರ್ಚು ಮಾಡಿದ್ದೇನೆ. ಗ್ರಾಮದಲ್ಲಿ ಫಾಗಿಂಗ್, ಬ್ಲೀಚಿಂಗ್, ಔಷಧ ಸಿಂಪಡಣೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಸೇರಿ ಅಭಿವೃದ್ಧಿಗೆ 15 ಲಕ್ಷ ಖರ್ಚು ಮಾಡಿರುವುದಾಗಿ ಮಹಿಳೆ ತಿಳಿಸಿದ್ದಾರೆ.
Advertisement
ಸದ್ಯ ಮಹಿಳೆ ಧರಣಿ ಕುಳಿತು, ಸಾಲ ಮಾಡಿ ಅಭಿವೃದ್ಧಿ ಮಾಡಿದ್ದ ಹಣ ಬಿಡುಗಡೆ ಮಾಡುವಂತೆ ಒತ್ತಾಯ ಮಾಡಿದ್ದಾರೆ. ಈ ಹಣ ಬಿಡುಗಡೆಗಾಗಿ ಮಹಿಳೆ ಗ್ರಾಮ ಪಂಚಾಯ್ತಿ ಎದುರು 3 ದಿನಗಳಿಂದ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ. ಹಣ ಬಿಡುಗಡೆಯಾಗುವವರೆಗೂ ಹೋರಾಟ ಮಾಡುವುದಾಗಿ ಚನ್ನಮ್ಮ ಎಚ್ಚರಿಕೆ ನೀಡಿದ್ದಾರೆ. ಮಹಿಳೆಯ ಹೋರಾಟಕ್ಕೆ ಪತಿ ಹಾಗೂ ಗ್ರಾ.ಪಂ ಸದಸ್ಯರು ಕೂಡ ಸಾಥ್ ನೀಡಿದ್ದಾರೆ.