ಇಂದೋರ್: ಮೊಟ್ಟೆ ಮತ್ತು ಮಾಂಸವನ್ನು ಮಾರಲು ಸಾರ್ವಜನಿಕ ಶೌಚಾಲಯವನ್ನು ಬಳಸುತ್ತಿರುವ ಘಟನೆ ಇಂದೋರ್‍ನ ಮಧ್ಯ ಪ್ರದೇಶದಲ್ಲಿ ನಡೆದಿದೆ. ಸುಲಭ್ ಶೌಚಾಲಯದಲ್ಲಿನ ನಡೆಸಲಾಗುತ್ತಿದ್ದ ಈ ಅಕ್ರಮ ವ್ಯಾಪಾರ ಇಂದೋರ್ ಮುನ್ಸಿಪಲ್ ಕಾರ್ಪೋರೇಷನ್ ಪರಿಶೀಲನೆ ವೇಳೆ ಬೆಳಕಿಗೆ ಬಂದಿದೆ. ನಾಗರಿಕ ಸೌಲಭ್ಯ ಮತ್ತು ಅವ್ಯವಸ್ಥೆ ವಿಚಾರವಾಗಿ ಕ್ರಮ ಕೈಗೊಂಡಿದ್ದು, ಸುಲಭ್ ಇಂಟರ್ ನ್ಯಾಷನಲ್ ಎಂಬ ಎನ್‍ಜಿಒ ವಿರುದ್ಧ ದಂಡ ವಿಧಿಸಿದೆ.
ಈ ಕುರಿತಂತೆ ಮಾತನಾಡಿದ ಈಎಂಸಿಯ ಹೆಚ್ಚುವರಿ ಆಯುಕ್ತ ಅಭಯ್ ರಾಜಂಗಾಂವ್ಕರ್, ಪರಿಶೀಲನೆ ನಡೆಸುತ್ತಿದ್ದ ವೇಳೆ ಸಾರ್ವಜನಿಕ ಶೌಚಾಲಯವನ್ನು ಮೊಟ್ಟೆ ಮತ್ತು ಮಾಂಸ ಮಾರಾಟಕ್ಕೆ ದುರ್ಬಳಕೆ ಮಾಡುತ್ತಿರುವುದು ಕಂಡು ಬಂದಿದೆ. ಹಾಗಾಗಿ ಆರೋಪಿಗೆ ಸ್ಥಳದಲ್ಲಿಯೇ 1,000 ರೂ. ದಂಡ ವಿಧಿಸಲಾಗಿದೆ. ಜೊತೆಗೆ ಎನ್‍ಜಿಒ ಸುಲಭ್ ಇಂಟರ್ ನ್ಯಾಷನಲ್‍ಗೆ ನೋಟಿಸ್ ಕಳುಹಿಸುವ ಮೂಲಕ 20,000 ರೂ. ದಂಡ ವಿಧಿಸಲಾಗಿದೆ ಎಂದು ಹೇಳಿದರು.
2017 ಅಂದರೆ ಕಳೆದ ನಾಲ್ಕು ವರ್ಷದಿಂದ ಸತತವಾಗಿ ಇಂದೋರ್ ದೇಶದಲ್ಲಿಯೇ ಸ್ವಚ್ಛನಗರ ಎಂದು ಕೇಂದ್ರ ಸರ್ಕಾರದ ಸ್ವಚ್ಛ ಸುರಕ್ಷನ್ ಸಮೀಕ್ಷೆ ಅಡಿ ತಿಳಿಸಲಾಗಿದೆ.