ಹುಬ್ಬಳ್ಳಿ: ಮಾಸ್ಕ್ ಧರಿಸದೆ ಕೊರೊನಾ ತಡೆಯಲು ಸಾಧ್ಯವಿಲ್ಲ ಎಂಬುದನ್ನು ತಿಳಿಸಲು ಸ್ವತಃ ಹುಬ್ಬಳ್ಳಿ ಪೂರ್ವ ಸಂಚಾರಿ ಠಾಣೆಯ ಪಿಎಸ್‍ಐ ಶರಣ್ ದೇಸಾಯಿ ಹಾಗೂ ಸಿಬ್ಬಂದಿ ಬೆಳಗ್ಗೆ ಚೆನ್ನಮ್ಮ ವೃತ್ತದಲ್ಲಿ ಸಾರ್ವಜನಿಕರಿಗೆ ಮಾಸ್ಕ್ ವಿತರಿಸಿ ಜಾಗೃತಿ ಮೂಡಿಸಿದರು.
Advertisement
ಕೋವಿಡ್-19 ಕುರಿತು ಅರಿವು ಕಾರ್ಯಕ್ರಮ ಏರ್ಪಡಿಸಿ, ಮಾಸ್ಕ್ ವಿತರಿಸುವ ಮೂಲಕ ಶರಣ್ ದೇಸಾಯಿ ಸಾರ್ವಜನಿಕರಿಗೆ ಅರಿವು ಮೂಡಿಸುವ ಪ್ರಯತ್ನ ಮಾಡಿದರು. ದಂಡ ಹಾಕುವುದು ನಿಮ್ಮನ್ನು ಎಚ್ಚರಿಸಲು. ಇದರ ಹೊರತು ಬೇರೆ ಉದ್ದೇಶವಿಲ್ಲ. ನಿಮ್ಮ ಆರೋಗ್ಯದ ದೃಷ್ಠಿಯಿಂದ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಹೀಗಾಗಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ ಎಂದು ತಿಳಿಸಿದರು.
Advertisement
ಚೆನ್ನಮ್ಮ ವೃತ್ತದ ಬಳಿ ಮಾಸ್ಕ್ ಇಲ್ಲದೆ ಸಂಚಾರ ಮಾಡುತ್ತಿದ್ದ ಸಾರ್ವಜನಿಕರಿಗೆ ಮಾಸ್ಕ್ ವಿತರಿಸಿ ಮನೆಯಿಂದ ಹೊರಗೆ ಬರುವಾಗ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ದರಿಸಿಕೊಂಡೇ ಬರಬೇಕು. ಇಲ್ಲವಾದಲ್ಲಿ ಕೊರೊನಾ ನಿಯಂತ್ರಿಸಲು ಸಾಧ್ಯವಿಲ್ಲ. ಮಾಸ್ಕ್ ಇಲ್ಲದೆ ಸಂಚರಿಸಿ ದಂಡ ಕಟ್ಟು ಪರಿಸ್ಥಿತಿ ತಂದುಕೊಳ್ಳಬೇಡಿ ಎಂದರು.
Advertisement
Advertisement
ದಿನದಿಂದ ದಿನಕ್ಕೆ ಕೊರೋನಾ ಹೆಚ್ಚಾಗುತ್ತಿದೆ. ಜೀವನ ಮುಖ್ಯ ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ಅದನ್ನು ಉಳಿಸಿಕೊಳ್ಳಲು ಅಸಡ್ಡೆ ಯಾಕೆ ಎಂದು ಪೊಲೀಸರು ಪ್ರಶ್ನಿಸಿದ್ದಾರೆ. ಈ ಮೂಲಕ ಸಾರ್ವಜನಿಕರನ್ನು ಎಚ್ಚರಿಸಿದ್ದಾರೆ. ಈ ವೇಳೆ ಪಿಎಸ್‍ಐ ಎಸ್.ಎಸ್.ದೇಸಾಯಿ, ಬಿ.ಎಸ್.ಅಣ್ಣಿಗೇರಿ, ಪಿ.ಬಿ.ಕಾಟೇ, ಯಶವಂತ ಬಾಡಿಗೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.