ಬಳ್ಳಾರಿ: ಸಾರಿಗೆ ನೌಕರರ ಸಮಸ್ಯೆಗಳನ್ನು ತಾಯಿ ಹೃದಯದಿಂದ ನೋಡಬೇಕೆ ಹೊರತು ವೈರಗಳಿಂತಲ್ಲ ಎಂದು ಕಾಂಗ್ರೆಸ್ ನಾಯಕ ಯು.ಟಿ ಖಾದರ್ ಹೇಳಿದ್ದಾರೆ.
Advertisement
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡುತ್ತಾ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕೆಎಸ್ ಆರ್‍ಟಿಸಿ ಅವರು ಸ್ಟ್ರೈಕ್ ಮಾಡ್ತಿರೋದು ಬೇಸರ. ಇವರ ಸಮಸ್ಯೆಯನ್ನ ತಾಯಿ ಹೃದಯದಿಂದ ನೋಡಬೇಕು. ಅವರನ್ನ ವೈರಿಗಳಂತೆ ನೋಡಬಾರದು. ನಾವು ಬಡವರ ಪರ ಅಂತೀರ, ಆದರೆ 12 ಸಾವಿರದಲ್ಲಿ ಹೇಗೆ ಅವರು ಜೀವನ ನಡೆಸಬೇಕು?, ಆರನೇ ವೇತನ ಆಯೋಗ ಮಾಡಲಿಕ್ಕೆ ಇವರಿಗೆ ಕಷ್ಟ ಏನು?, ಸರ್ಕಾರ ಬಡ ನೌಕರರ ಮೆಲೆ ದಬ್ಬಾಳಿಕೆಯನ್ನ ಕಾಂಗ್ರೆಸ್ ಖಂಡಿಸುತ್ತದೆ ಎಂದರು.
Advertisement
Advertisement
ಹೃದಯವಿಲ್ಲದ ಮಾನವೀಯತೆ ಇಲ್ಲದ ಸರ್ಕಾರ ಇದೆ. ಅದಕ್ಕೆ ಜನ ಮತ್ತೆ ಪಾಲಿಕೆ ಚುನಾವಣೆ ಅವಕಾಶ ಕೊಡಬಾರದು ಎಂದು ಖಾದರ್ ಕರೆ ನೀಡಿದರು.
Advertisement
ಪಾಲಿಕೆ ಚುನಾವಣೆಗೆ ಕಾಂಗ್ರೆಸ್ ಸಜ್ಜಾಗಿದೆ. ವಿವಿಧ ಟೀಂಗಳನ್ನ ಮಾಡಿ ನಾಯಕರಿಗೆ ಜವಾಬ್ದಾರಿ ನೀಡಲಾಗಿದೆ. ನಮ್ಮ ಸರ್ಕಾರ ಇದ್ದಾಗ ಪಾಲಿಕೆಗಳಿಗೆ ಬಜೆಟ್ ನಲ್ಲಿ ಸಾಕಷ್ಟು ಹಣ ಮೀಸಲಿಟ್ಟಿದ್ದೇವೆ. ಜನರ ಹಿತಾಸಕ್ತಿ ಇಲ್ಲದ ಬಿಜೆಪಿಗೆ ಅಧಿಕಾರ ಕೊಡಬಾರದು ಎಂದರು.