ಮೈಸೂರು: ಶಾಸಕ ಸಾ.ರಾ ಮಹೇಶ್‍ಗೆ ಅವರ ತವರು ಕ್ಷೇತ್ರದಲ್ಲೇ ಶಾಸಕ ಜಿ.ಟಿ. ದೇವೇಗೌಡ ಕುಟುಂಬ ಟಾಂಗ್ ನೀಡುತ್ತಿದೆ.
ಮೈಸೂರಿನಲ್ಲಿ ಸಾ.ರಾ ಮಹೇಶ್ ಸ್ವಕ್ಷೇತ್ರಕ್ಕೆ ಜಿಟಿಡಿ ಕುಟುಂಬ ಲಗ್ಗೆ ಇಟ್ಟು ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ಜಿಟಿಡಿ ಪುತ್ರ ಹರೀಶ್ ಗೌಡ ಅದ್ಧೂರಿ ಹುಟ್ಟುಹಬ್ಬ ಆಚರಣೆಗೆ ಸಿದ್ಧತೆ ನಡೆಸಲಾಗಿದೆ.
ಜಿ.ಡಿ ಹರೀಶ್ ಗೌಡರ ಅಭಿನಂದನಾ ಸಮಾರಂಭದ ಮೂಲಕ ಬಲಪ್ರದರ್ಶನ ಮಾಡುತ್ತಿದೆ. ಈ ಮೂಲಕ ಪರೋಕ್ಷವಾಗಿ ಜಿಟಿಡಿಯನ್ನು ಪಕ್ಷದಿಂದ ಉಚ್ಛಾಟಿಸುವ ಹೇಳಿಕೆ ನೀಡಿದ್ದ ಸಾ.ರಾ.ಮಹೇಶ್ ಗೆ ಜಿಟಿಡಿ ಕುಟುಂಬ ಟಾಂಗ್ ನೀಡುತ್ತಿದೆ.
ಮೈತ್ರಿ ಸರ್ಕಾರ ಪತನಗೊಂಡಾಗಿನಿಂದಲೂ ಸಾ.ರಾ ವಿರುದ್ಧ ಜಿಟಿಡಿ ಸಿಡಿದೆದ್ದಿದ್ದರು. ಈ ಮೂಲಕ ಮೈಸೂರಿನಲ್ಲಿ ದಳಪತಿಗಳ ನಡುವೆ ಕೋಲ್ಡ್ ವಾರ್ ನಡೆಯುತ್ತಿತ್ತು. ಈಗ ಸಾ.ರಾ ವಿರುದ್ಧ ಪುತ್ರನನ್ನ ಕಣಕ್ಕಿಳಿಸಲು ಸಜ್ಜಾಗಿರೋ ರೀತಿಯಲ್ಲಿ ಜಿಟಿಡಿ, ಸಾರಾಗೆ ಠಕ್ಕರ್ ಕೊಡಲು ಕೆ.ಆರ್ ನಗರ ಕ್ಷೇತ್ರಕ್ಕೆ ಎಂಟ್ರಿ ಕೊಟ್ಟಿದೆ.