ಸಾರಾ ಮಹೇಶ್ ಕಲ್ಯಾಣಮಂಟಪ ವಿವಾದ – ಸರ್ವೇ ಕಾರ್ಯ ಆರಂಭ

Public TV
2 Min Read
SARA MAHESH

ಮೈಸೂರು: ಶಾಸಕ ಸಾರಾ ಮಹೇಶ್ ಒಡೆತನದ ಸಾರಾ ಕಲ್ಯಾಣ ಮಂಟಪದ ಜಾಗದ ಸರ್ವೆ ಇಂದು ಆರಂಭವಾಗಿದೆ.

ಮೈಸೂರು ನಿರ್ಗಮಿತ ಡಿಸಿ ರೋಹಿಣಿ ಸಿಂಧೂರಿಯವರು ಶಾಸಕ ಸಾರಾ ಮಹೇಶ್ ಒಡೆತನದ ಸಾರಾ ಕಲ್ಯಾಣ ಮಂಟಪ ರಾಜಕಾಲುವೆ ನಿರ್ಮಾಣ ಮಾಡಲಾಗಿದೆ ಎಂದು ಆರೋಪಿಸಿದ್ದರು. ಈ ಆರೋಪದ ಬಗ್ಗೆ ತನಿಖೆಯಾಗಲಿ ಎಂದು ಸ್ವತಃ ಸಾರಾ ಮಹೇಶ್ ಹೋರಾಟ ಮಾಡಿದ್ದರು. ಹೀಗಾಗಿ, ಪ್ರಾದೇಶಿಕ ಆಯುಕ್ತರು ತನಿಖಾ ತಂಡ ರಚಿಸಿದ್ದರು. ಇದರಂತೆ ಕಂದಾಯ ಇಲಾಖೆಯಿಂದ ಸರ್ವೇ ಕಾರ್ಯ ಶುರುವಾಗಿದ್ದು ವೆಂಕಟರಾಜು ಹಾಗೂ ತಹಶಿಲ್ದಾರ್ ರಕ್ಷಿತ್ ನೇತೃತ್ವದ ತಂಡದಿಂದ ಸರ್ವೇ ಕಾರ್ಯ ನಡೆಯುತ್ತಿದೆ. ಕಲ್ಯಾಣಮಂಟಪದ ಸುತ್ತ ಮುತ್ತ ಅಳತೆ ಮಾಡಲಾಗಿದೆ.

rohini sindhuri 768x563 1

ಕೆಲವು ದಿನಗಳ ಹಿಂದೆ ಸಾರಾ ಮಹೇಶ್ ಹಾಗೂ ನಿರ್ಗಮಿತ ಡಿಸಿ ರೋಹಿಣಿ ಸಿಂಧೂರಿ ನಡುವಿನ ಭೂ ಅವ್ಯವಹಾರದ ಆರೋಪಗಳ ಸುರಿಮಳೆ ಸುರಿದಿತ್ತು. ಈ ವೇಳೆ ಸಾರಾ ಮಹೇಶ್ ಒಡೆತನದ ಸಾರಾ ಕಲ್ಯಾಣ ಮಂಟಪ ರಾಜಕಾಲುವೆ ಮೇಲೆ ನಿರ್ಮಾಣವಾಗಿದೆ ಎಂದು ನಿರ್ಗಮಿತ ಡಿಸಿ ರೋಹಿಣಿ ಸಿಂಧೂರಿ ಆರೋಪಿಸಿದ್ದರು. ಹೀಗಾಗಿ ಸಾರಾ ಮಹೇಶ್ ಏಕಾಂಗಿಯಾಗಿ ಮೈಸೂರಿನ ಪ್ರಾದೇಶಿಕ ಕಚೇರಿ ಮುಂಭಾಗ ಪ್ರತಿಭಟನೆ ಆರಂಭಿಸಿದ್ದರು. ಇದನ್ನೂ ಓದಿ: ರಾಜಕಾಲುವೆ ಮೇಲೆ ಕಲ್ಯಾಣ ಮಂಟಪವಿದ್ದರೆ ರಾಜಕೀಯ ನಿವೃತ್ತಿ: ಸಾರಾ ಮಹೇಶ್

sara mahesh 2 medium

ನನ್ನ ಒಡೆತನದಲ್ಲಿರುವ ಸಾ.ರಾ. ಕಲ್ಯಾಣ ಮಂಟಪ ರಾಜಕಾಲುವೆ ಮೇಲೆ ನಿರ್ಮಾಣ ಆಗಿಲ್ಲ. ಉನ್ನತ ಮಟ್ಟದ ಅಧಿಕಾರಿಗಳು ಜಾಗದ ಸರ್ವೇ ಮಾಡಲಿ. ರಾಜಕಾಲುವೆ ಮೇಲೆ ನಿರ್ಮಾಣ ಆಗಿದ್ದರೆ ಅದನ್ನು ಸಾರ್ವಜನಿಕರ ಬಳಕೆಗಾಗಿ ರಾಜ್ಯಪಾಲರಿಗೆ ಹಸ್ತಾಂತರ ಮಾಡುತ್ತೇನೆ. ಮಾತ್ರವಲ್ಲ ನಾನು ಸಾರ್ವಜನಿಕ ಜೀವನದಿಂದಲೇ ನಿವೃತ್ತಿ ಹೊಂದುತ್ತೇನೆ. ಒಂದು ವೇಳೆ ಅವರು ಮಾಡಿರುವ ಆರೋಪ ಸುಳ್ಳಾದರೆ ಐಎಎಸ್ ಹುದ್ದೆಯಿಂದ ಅಮಾನತು ಮಾಡಬೇಕು. ಮಕ್ಕಳನ್ನು ಆಡಿಸಿಕೊಂಡು, ಅಡುಗೆ ಮಾಡಿಕೊಂಡು ಇರಲು ಆಂಧ್ರಕ್ಕೆ ಕಳುಹಿಸಬೇಕು ಎಂದು ಕಿಡಿಕಾರಿದ್ದರು.

mys sara mahesh 1

ಈ ಬಗ್ಗೆ ಪ್ರಾದೇಶಿಕ ಆಯುಕ್ತ ಪ್ರಕಾಶ್ ತನಿಖೆ ನಡೆಸಿ ವರದಿ ನೀಡುವುದಾಗಿ ಭರವಸೆ ನೀಡಿದ್ದರು. ಇದೀಗ ಶಾಸಕ ಸಾರಾ ಮಹೇಶ್ ಕಲ್ಯಾಣ ಮಂಟಪದ ಜಾಗದ ಸರ್ವೆ ಪ್ರಾರಂಭಗೊಳಿಸಲಾಗಿದೆ. ಇದನ್ನೂ ಓದಿ: ರೋಹಿಣಿ ಸಿಂಧೂರಿಯನ್ನು ಮೈಸೂರಿನ ಭೂ ಅಕ್ರಮದ ವಿಶೇಷ ತನಿಖಾಧಿಕಾರಿಯಾಗಿ ನೇಮಿಸಿ: ವಿಶ್ವನಾಥ್ ಆಗ್ರಹ

Share This Article
Leave a Comment

Leave a Reply

Your email address will not be published. Required fields are marked *