ಬಳ್ಳಾರಿ: ಕೊರೊನಾ ವ್ಯಾಕ್ಸಿನ್ ತೆಗೆದುಕೊಳ್ಳಲು ರಾಜ್ಯದ ಗ್ರಾಮೀಣ ಜನ ಒಂದಲ್ಲ ಒಂದು ಕುಂಟು ನೆಪ ಹೇಳಿಕೊಂಡು ಹಿಂದೇಟು ಹಾಕುತ್ತಿದ್ದಾರೆ. ಯಾದಗಿರಿಯ ಬಳಿಕ ಇದೀಗ ಬಳ್ಳಾರಿಯಲ್ಲೂ ಜನ ವ್ಯಾಕ್ಸಿನ್ ತೆಗೆದುಕೊಳ್ಳಲು ಹಿಂಜರಿದಿದ್ದು ಬೆಳಕಿಗೆ ಬಂದಿದೆ.
ಬಳ್ಳಾರಿ ಜಿಲ್ಲೆ ಕಂಪ್ಲಿ ತಾಲೂಕಿನಲ್ಲಿ ವಯೋವೃದ್ಧರು ನಮಗೆ ವಾಕ್ಸಿನ್ ಬೇಡ ಎಂದು ಹೇಳುತ್ತಿದ್ದಾರೆ. ವ್ಯಾಕ್ಸಿನ್ ಕೊಡೋದಕ್ಕೆ ವೈದ್ಯ ಸಿಬ್ಬಂದಿ ಮನೆ ಮನೆಗೆ ಭೇಟಿ ನೀಡುತ್ತಿದ್ದಾರೆ. ಇತ್ತ ವೈದ್ಯರು ಬರುತ್ತಿದ್ದಂತೆಯೇ ವೃದ್ಧರು ಕಣ್ತಪ್ಪಿಸಿ ಎಸ್ಕೇಪ್ ಆಗುತ್ತಿದ್ದಾರೆ. ಇದನ್ನೂ ಓದಿ: ನಮ್ಗೆ ಲಸಿಕೆ ಕೊಡ್ಬೇಡಿ, ನಮ್ಮ ಮೇಲೆ ದೇವರು ಬಂದಿದ್ದಾರೆ – ಯಾದಗಿರಿಯಲ್ಲಿ ಹೈಡ್ರಾಮಾ
ನಮಗೆ ವ್ಯಾಕ್ಸಿನ್ ಬೇಡವೇ ಬೇಡ, ಸಾಯೋ ವಯಸ್ಸಾಗಿದೆ ನಮ್ಮನ್ನು ನೀವು ಸಾಯಸಬೇಡಿ ಎಂದು ಸಿಬ್ಬಂದಿ ಬಳಿ ಮನವಿ ಮಾಡಿಕೊಂಡಿದ್ದಾರೆ. ಈ ವೇಳೆ ಅಧಿಕಾರಿಗಳು, ವ್ಯಾಕ್ಸಿನ್ ಹಾಕಿಸಿಕೊಳ್ಳದವ್ರನ್ನು ನಿಮ್ಮ ಮನೆಹತ್ರ ಸೇರಿಸಬೇಡಿ ಅಂತ ಸೂಚನೆ ನೀಡಿದ್ದಾರೆ. ಒಟ್ಟಿನಲ್ಲಿ ಪೊಲೀಸರು ಹಾಗೂ ವೈದ್ಯ ಸಿಬ್ಬಂದಿ ಜಿಲ್ಲೆಯ ಜನರಿಗೆ ವ್ಯಾಕ್ಸಿನ್ ಹಾಕಿಸೋದಕ್ಕೆ ಹರಸಾಹಸಪಡುತ್ತಿರುವ ಪ್ರಸಂಗ ನಡೆದಿದೆ.
ಇತ್ತ ಯಾದಗಿರಿ ಮಂದಿ ಕೂಡ ಹೊಸ ಒರಸೆಯನ್ನು ಶುರು ಮಾಡಿದ್ದರು. ಕೋವಿಡ್ ಲಸಿಕೆ ಪಡೆಯಲು ದೇವರ ಹೆಸರಿನಲ್ಲಿ ಫುಲ್ ಹೈಡ್ರಾಮಾ ನಡೆಸಿದ್ದರು. ಮೈ ಮೇಲೆ ದೇವರು ಬಂದಂತೆ ನಟಿಸಿ ಅಧಿಕಾರಿಗಳಿಗೆ ಬೆದರಿಕೆ ಹಾಕಲಾಗುತ್ತಿದೆ. ವ್ಯಾಕ್ಸಿನ್ ಪಡೆಯರಿ ಅಂದ್ರೆ ಮೈಯಲ್ಲಿ ದೇವರು ಬಂದಿರೋ ತರಹ ಇಬ್ಬರು ಪುರುಷರು ಮತ್ತು ಓರ್ವ ಮಹಿಳೆ ಫುಲ್ ನಾಟಕವಾಡಿದ್ದಾರೆ. ಜಿಲ್ಲೆಯ ವಡಗೇರ ತಾಲೂಕಿನ ಹುಲಕಲ್ (ಜೆ) ಮತ್ತು ಗುರುಮಿಠಕಲ್ ತಾಲೂಕಿನ ಪುಟಪಾಕ್ ಗ್ರಾಮಗಳಲ್ಲಿ ಅಧಿಕಾರಿಗಳಿಗೆ ದೇವರ ಹೆಸರಲ್ಲಿ ಭಯ ಹುಟ್ಟಿಸಿದ್ದು ಮಾತ್ರವಲ್ಲದೆ ಹಲ್ಲೆಗೂ ಸಹ ಮುಂದಾಗಲಾಗಿದೆ. ಜನರ ಈ ವರ್ತನೆ ಕಂಡು ಆರೋಗ್ಯ ಸಿಬ್ಬಂದಿ ಫುಲ್ ಶಾಕ್ ಆಗಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ.