ನವದೆಹಲಿ: ಓರ್ವ ಸಾಮಾನ್ಯ ಕಾರ್ಯಕರ್ತನನ್ನು ಪಕ್ಷ ಗುರುತಿಸಿದೆ ಅನ್ನೋದಕ್ಕೆ ರಾಷ್ಟ್ರಕ್ಕೆ ನಾನೇ ಸಾಕ್ಷಿ ಎಂದು ಚಿತ್ರದುರ್ಗ ಸಂಸದ ಎ.ನಾರಾಯಣಸ್ವಾಮಿ ಭಾವುಕರಾದರು.
ಕೇಂದ್ರ ಸಂಪುಟದಲ್ಲಿ ಸಚಿವ ಸ್ಥಾನ ಖಚಿತವಾದ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರ ನಿವಾಸಕ್ಕೆ ನಾರಾಯಣಸ್ವಾಮಿ ಆಗಮಿಸಿದ್ದರು. ನಿವಾಸದಿಂದ ಹೊರ ಬರುತ್ತಲೇ ಕೇಂದ್ರದ ಸಚಿವನಾಗುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ನಾರಾಯಣಸ್ವಾಮಿ, ಸಾಮಾನ್ಯ ಕಾರ್ಯಕರ್ತನನ್ನು ಗುರುತಿಸಿ, ಪಕ್ಷ ಅವಕಾಶ ನೀಡಿದೆ. ಸಿಕ್ಕ ಅವಕಾಶವನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದು ಹೇಳಿದರು.
ಸಂಸದ ನಾರಾಯಣಸ್ವಾಮಿಗೆ ಏಕೆ ಸ್ಥಾನ?
ಎಸ್‍ಸಿ ಎಡಗೈ ಸಮುದಾಯದ ಕೋಟಾ ಇತ್ತು. ಮೊದಲ ಅವಧಿಯಲ್ಲಿ ಮೋದಿ ಸಂಪುಟದಲ್ಲಿ ವಿಜಯಪುರದ ಸಂಸದ ರಮೇಶ್ ಜಿಗಜಿಣಗಿ ಸ್ಥಾನ ಕೊಡಲಾಗಿತ್ತು. ಆದರೆ ಎರಡನೇ ಅವಧಿಯಲ್ಲಿ ಸ್ಥಾನವನ್ನ ಕೊಟ್ಟಿರಲಿಲ್ಲ. ಹಾಗಾಗಿ ಆ ಕೋಟಾದಲ್ಲಿ ನಾರಾಯಣಸ್ವಾಮಿಗೆ ಸ್ಥಾನ ನೀಡಲಾಗಿದೆ. ಇನ್ನೂ ನಾರಾಯಣಸ್ವಾಮಿ ಅವರು ಬಿ.ಎಲ್.ಸಂತೋಷ್ ಗುಂಪಿನಲ್ಲಿ ಗುರುತಿಸಿಕೊಂಡಿದ್ದರು.
ಶೋಭಾ ಕರಂದ್ಲಾಜೆ ಕೇಂದ್ರ ಸಂಪುಟ ಸೇರ್ಪಡೆಯಾದ ರಾಜ್ಯದ ಐದನೇ ಸಂಸದೆಯಾಗಲಿದ್ದಾರೆ. ಈ ಹಿಂದೆ ಸರೋಜಿನಿ ಮಹಿಷಿ, ಬಳ್ಳಾರಿ ಸಂಸದೆಯಾಗಿದ್ದ ಬಸವರಾಜೇಶ್ಚರಿ, ಚಿಕ್ಕಮಗಳೂರು ಸಂಸದೆಯಾಗಿದ್ದ ಡಿ.ಕೆ.ತಾರದೇವಿ, ಕೆನರಾ ಸಂಸದೆಯಾಗಿದ್ದ ಮಾರ್ಗರೇಟ್ ಅಳ್ವಾ ಕೇಂದ್ರ ಸಚಿವರಾಗಿದ್ದರು. ಈಗ ಮತ್ತೆ ಉಡುಪಿ-ಚಿಕ್ಕಮಗಳೂರಿಗೆ ಅದೃಷ್ಟ ಒಲಿದು ಬಂದಿದೆ.
ಕೇಂದ್ರ ಸಂಪುಟ ಸೇರಿದ ಸಂಸದರಾದ ನಾರಾಯಣಸ್ವಾಮಿ, ಶೋಭಾ ಕರಂದ್ಲಾಜೆ?https://t.co/mX3DKEzr7B#ShobhaKarandlaje #Narayanswamy #PMModi #KannadaNews @ShobhaBJP #CabinetReshuffle
— PublicTV (@publictvnews) July 7, 2021