ತಿರುವನಂತಪುರಂ: ಸಾಮಾಜಿಕ ಜಾಲತಾಣದಲ್ಲಿ ನಿಂದನೆ ಅಥವಾ ಬೆದರಿಕೆ ಹಾಕಿದರೆ 5 ವರ್ಷ ಜೈಲು ಶಿಕ್ಷೆ ವಿಧಿಸುವ ಸುಗ್ರೀವಾಜ್ಞೆಗೆ ಕೇರಳ ರಾಜ್ಯಪಾಲರು ಸಹಿ ಹಾಕಿದ್ದಾರೆ.
ಆಡಳಿತರೂಢ ಎಲ್‌ಡಿಎಫ್ ಸರ್ಕಾರ ಕೇರಳ ಪೊಲೀಸ್ ಕಾಯ್ದೆಗೆ ಹೊಸದಾಗಿ ಸೆಕ್ಷನ್118(ಎ) ಸೇರಿಸಿದೆ. ಕೋವಿಡ್ 19 ಹಿನ್ನೆಲೆಯಲ್ಲಿ ಈಗ ಅಧಿವೇಶನ ನಡೆಯುತ್ತಿಲ್ಲ. ಹೀಗಾಗಿ ಸರ್ಕಾರ ಸುಗ್ರೀವಾಜ್ಞೆಯನ್ನು ಮೂಲಕ ಕಾಯ್ದೆಯನ್ನು ಜಾರಿಗೆ ತಂದಿದ್ದು, ಶನಿವಾರ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಸಹಿ ಹಾಕಿದ್ದಾರೆ.
Advertisement
Advertisement
ಈ ಸೆಕ್ಷನ್ ಅಡಿಯಲ್ಲಿ ವ್ಯಕ್ತಿಯೊಬ್ಬ ಬೇರೊಬ್ಬ ವ್ಯಕ್ತಿಗೆ ಯಾವುದೇ ಸಂವಹನ ವಿಧಾನದ ಮೂಲಕ ನಿಂದನೆ ಅಥವಾ ಬೆದರಿಕೆ ಹಾಕಿದರೆ ಐದು ವರ್ಷಗಳ ಜೈಲು ಶಿಕ್ಷೆ ಅಥವಾ 10 ಸಾವಿರ ರೂ. ದಂಡ ಅಥವಾ ಎರಡನ್ನೂ ವಿಧಿಸಲು ಕಾಯ್ದೆ ಅವಕಾಶ ನೀಡುತ್ತದೆ.
Advertisement
ಸಾಮಾಜಿಕ ಜಾಲತಾಣದಲ್ಲಿ ಉದ್ದೇಶಪೂರ್ವವಾಗಿ ವ್ಯಕ್ತಿಗಳ ನಿಂದನೆಯಾಗುತ್ತಿರುವ ಹಿನ್ನೆಲೆಯಲ್ಲಿ ಇವುಗಳಿಗೆ ಕಡಿವಾಣ ಹಾಕಲು ಈ ಕಾಯ್ದೆಯ ಅಗತ್ಯವಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸಮರ್ಥಿಸಿಕೊಂಡಿದ್ದಾರೆ.
Advertisement
Also shocked by the attempt to implicate Mr Ramesh Chennithala, LOP, in a case where the investigation agency had filed a closure report FOUR times
How will my friend @SitaramYechury , GS, CPI(M), defend these atrocious decisions?
— P. Chidambaram (@PChidambaram_IN) November 22, 2020
ಸಂವಿಧಾನ ನೀಡಿರುವ ವಾಕ್ ಸ್ವಾತಂತ್ರ್ಯವನ್ನು ಕೇರಳ ಸರ್ಕಾರ ಈ ಕಾಯ್ದೆಯ ದಮನಿಸಲು ಹೊರಟಿದೆ ಎಂಬ ಟೀಕೆ ಈಗ ವ್ಯಕ್ತವಾಗಿದೆ. ಕೇರಳದ ಎಲ್‌ಡಿಎಫ್ ಸರ್ಕಾರ ಸಾಮಾಜಿಕ ಜಾಲತಾಣದಲ್ಲಿ ನಿಂದನೆ ಪೋಸ್ಟ್‌ಗಳಿಗೆ 5 ವರ್ಷಗಳ ಶಿಕ್ಷೆಯ ಕಾನೂನು ಜಾರಿ ಮಾಡಿದ್ದನ್ನು ನೋಡಿ ನನಗೆ ಶಾಕ್ ಆಗಿದೆ ಎಂದು ಮಾಜಿ ಕೇಂದ್ರ ಹಣಕಾಸು ಸಚಿವ ಪಿ ಚಿದಂಬರಂ ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದಾರೆ.
ಕೇರಳ ಸರ್ಕಾರದ ಈ ಕಾಯ್ದೆಯ ಬಗ್ಗೆ ಕಮೆಂಟ್ ಮಾಡಿ ಅಭಿಪ್ರಾಯ ತಿಳಿಸಿ