ಹುಬ್ಬಳ್ಳಿ: ಗರ್ಭಿಣಿ ಶ್ವಾನವೊಂದಕ್ಕೆ ಹುಬ್ಬಳ್ಳಿಯಲ್ಲಿ ಕುಟುಂಬಸ್ಥರೆಲ್ಲಾ ಸೇರಿ ಸೀಮಂತ ಮಾಡಿ ಪ್ರೀತಿ ತೋರಿದ್ದಾರೆ.
Advertisement
ಸಾಮಾನ್ಯವಾಗಿ ಮೊದಲ ಬಾರಿಗೆ ಗರ್ಭವತಿಯಾದ ಮಹಿಳೆಯರಿಗೆ ಸೀಮಂತ ಕಾರ್ಯಕ್ರಮ ಮಾಡುವುದನ್ನು ನೋಡಿದ್ದೇವೆ. ಆದರೆ ಕುಂದಗೋಳ ತಾಲೂಕಿನ ಸಂಶಿ ಗ್ರಾಮದಲ್ಲಿರುವ ಕುಟುಂಬವೊಂದು ಮನೆಯಲ್ಲಿ ಸಾಕಿದ್ದ ಶ್ವಾನಕ್ಕೆ ಸೀಮಂತ ಕಾರ್ಯಕ್ರಮ ಮಾಡುವ ಮೂಲಕ ಇದೀಗ ಎಲ್ಲರ ಗಮನ ಸೆಳೆದಿದೆ.
Advertisement
ಗ್ರಾಮದ ಸಾರಿಗೆ ನೌಕರ ರಮೇಶ್ ಪಡತೇರ್ ಎಂಬವರು ತಮ್ಮ ಮನೆಗೆ ಕಳೆದ ವರ್ಷ ಶ್ವಾನವೊಂದನ್ನು ತಗೆದುಕೊಂಡು ಬಂದಿದ್ದರು. ಅದಕ್ಕೆ ಲೂಸಿ ಎಂದು ನಾಮಕರಣ ಮಾಡಿದ್ದರು. ಇದೀಗ ಈ ಶ್ವಾನ ಗರ್ಭವನ್ನು ಧರಿಸಿದೆ.
Advertisement
Advertisement
ಹಾಗಾಗಿ ಸಾರಿಗೆ ನೌಕರ ರಮೇಶ್ ಪಡತೇರ್ ಅವರ ಪುತ್ರ ಪೃಥ್ವಿರಾಜ್ ಪಡತೇರ್ ಮತ್ತು ಕುಟುಂಬದವರು ಮಹಿಳೆಯರಿಗೆ ಸೀಮಂತ ಮಾಡುವಂತೆ ಶ್ವಾನಕ್ಕೂ ಬಳೆ ಹಾಕಿ, ಸೀರೆ ಉಡಿಸಿ, ಹೂವಿನ ಮಾಲೆಯನ್ನು ಹಾಕಿ, ಮೊದಲ ಬಾರಿಗೆ ಗರ್ಭವತಿಯಾದ ಶ್ವಾನಕ್ಕೂ ಅದ್ದೂರಿಯಾಗಿ ಸೀಮಂತ ಮಾಡಿದರು.
ಈ ವಿಭಿನ್ನ ಸೀಮಂತ ಕಾರ್ಯಕ್ರಮವನ್ನು ವೀಕ್ಷಿಸಿದ ಬಡಾವಣೆಯ ಜನ ಸಂತಸ ವ್ಯಕ್ತಪಡಿಸಿದರು.