– ಸ್ನಾನದ ವೀಡಿಯೋ ಆನ್ಲೈನ್ನಲ್ಲಿ ಮಾರಾಟ
– ರಾಂಗ್ ನಂಬರ್ ಗೆ ಕರೆ ಮಾಡಿ ಪ್ರೀತಿಯಲ್ಲಿ ಬಿದ್ದಿದ್ರು
ಬೆಂಗಳೂರು: ಸಹೋದ್ಯೊಗಿಗಳ ಸ್ನಾನದ ವೀಡಿಯೋ ರೆಕಾರ್ಡ್ ಮಾಡಿ ಬಾಯ್ಫ್ರೆಂಡ್ಗೆ ರವಾನಿಸುತ್ತಿದ್ದ ನರ್ಸ್ ಅನ್ನು ಈ ಹಿಂದೆ ಅರೆಸ್ಟ್ ಮಾಡಲಾಗಿತ್ತು. ಇದೀಗ ಈಕೆಯ ಪ್ರಿಯಕರನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಅಶ್ವಿನಿ ಮತ್ತು ಪ್ರಭು ಎಂದು ಗುರುತಿಸಲಾಗಿದೆ. ಪೊಲೀಸರು ಪ್ರಭುನನ್ನು ತಮಿಳುನಾಡಿನ ವೆಲ್ಲೂರಿನಲ್ಲಿ ಬಂಧಿಸಿದ್ದಾರೆ. ವಿಚಾರಣೆ ವೇಳೆ ಅಶ್ವಿನಿ ಕಳುಹಿಸುತ್ತಿದ್ದ ವೀಡಿಯೊಗಳನ್ನು ಆನ್ಲೈನ್ನಲ್ಲಿ ಮಾರಾಟ ಮಾಡಲಾಗುತ್ತಿತ್ತು ಎಂದು ತಿಳಿದು ಬಂದಿದೆ.
Advertisement
Advertisement
ರಾಂಗ್ ನಂಬರ್ ಲವ್: ರಾಂಗ್ ನಂಬರ್ಗೆ ಫೋನ್ ಮಾಡಿದ ವೇಳೆ ಆಶ್ವಿನಿಗೆ ಪ್ರಭು ಪರಿಚಯವಾಗಿದ್ದನು. ನಂತರ ಸ್ನೇಹಿತರಾಗಿದ್ದರು ದಿನಕಳೆದಂತೆ ಇಬ್ಬರ ನಡುವೆ ಪ್ರೀತಿಯಾಗಿತ್ತು. ಕೆಲವು ಬಾರಿ ಇಬ್ಬರು ಭೇಟಿಯಾಗಿದ್ದರು. ಆದರೆ ಪ್ರಭುಗೆ ಅಶ್ವಿನಿ ಮದುವೆಯಾಗಿ ಸಂಬಂಧ ಮುರಿದು ಬಿದ್ದಿರುವುದು ತಿಳಿದೆ ನಂತರ ಅವಳನ್ನು ದೂರವಿಡಲು ಪ್ರಾರಂಭಿಸಿದ್ದಾನೆ. ಅಶ್ವಿನಿ ಈ ಸಂಬಂಧವನ್ನು ಹೇಗಾದರೂ ಉಳಿಸಿಕೊಳ್ಳುಬೇಕು ಎಂದು ಪ್ರಭುನ ಎಲ್ಲ ಬೇಡಿಕೆಗಳನ್ನು ಇಡೇರಿಸಲು ಪ್ರಾರಂಭಿಸಿದ್ದಾಳೆ. ಆರಂಭದಲ್ಲಿ ತನ್ನದೇ ಅಶ್ಲೀಲ ವೀಡಿಯೊಗಳನ್ನು ಕಳುಹಿಸುತ್ತಿದ್ದಳು. ನಂತರ ತನ್ನ ಸಹೋದ್ಯೋಗಿಗಳನ್ನು ಸ್ನಾನ ಮಾಡುವಾಗ ಚಿತ್ರೀಕರಣ ಮಾಡಿ ಪ್ರಭುಗೆ ಕಳುಹಿಸುಲು ಪ್ರಾರಂಭಿಸಿದ್ದಳು.
Advertisement
Advertisement
ಪ್ರಕರಣದ ಹಿನ್ನೆಲೆ:
ತಮಿಳುನಾಡು ಮೂಲದ ಅಶ್ವಿನಿ, ಸ್ನಾನದ ಕೊಠಡಿಯ ಕಿಟಕಿಯಲ್ಲಿ ಮೊಬೈಲ್ ಪೋನ್ ಇಟ್ಟು ವೀಡಿಯೋ ರೆಕಾಡ್ ಮಾಡಿ ಪ್ರಭುಗೆ ಕಳುಹಿಸುತ್ತಿದ್ದಳು. ಸಿಬ್ಬಂದಿಗೆ ಈ ವಿಚಾರ ತಿಳಿದು ವಾರ್ಡ್ನ್ ಗಮನಕ್ಕೆ ತಂದಿದ್ದನು.
ವಾರ್ಡ್ನ್ ಅಶ್ವಿನಿ ಮೊಬೈಲ್ನ ಗ್ಯಾಲರಿ ತೆಗೆದಾಗ ಇನ್ನೂ ಹಲವು ವೀಡಿಯೊಗಳು ಇದ್ದವು. ಸಿಮ್ಕಾರ್ಡ್ ಮತ್ತು ಕಾಂಟ್ಯಾಕ್ಟ್ ಲಿಸ್ಟ್ ವಿವರ ಆಧಾರದ ಮೇಲೆ ಗೊತ್ತಾಗಿದೆ. ವಾರ್ಡನ್ ಪೊಲೀಸರಲ್ಲಿ ದೂರು ದಾಖಲಿಸಿದ್ದರು.
ಆಸ್ಪತ್ರೆಯ ತುರ್ತು ವಿಭಾಗದಲ್ಲಿ ಕೆಲಸ ಮಾಡುವ ಅಶ್ವಿನಿ ಡಿ.5ರ ಸಂಜೆ ಮಹಿಳೆಯರ ಹಾಸ್ಟೆಲ್ನಲ್ಲಿ ಸಹೋದ್ಯೊಗಿ ಸ್ನಾನ ಮಾಡುತ್ತಿರುವುದನ್ನು ಮೊಬೈಲ್ ಪೋನ್ನಲ್ಲಿ ವೀಡಿಯೋ ರೆಕಾಡಿರ್ಂಗ್ ಮಾಡುತ್ತಿದ್ದಳು ಎನ್ನುವ ಆರೋಪದ ಮೇರೆಗೆ ಸ್ಟಾಫ್ ನರ್ಸ್ ಅಶ್ವಿನಿಯನ್ನು ವೈಟ್ಫೀಲ್ಡ್ ಪೊಲೀಸರು ಬಂಧಿಸಿದ್ದರು. ವೀಡಿಯೋವನ್ನು ಬಾಯ್ಫ್ರೆಂಡ್ಗೆ ಕಳುಹಿಸಿದ್ದು, ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿತ್ತು. ಆ ವಿಡಿಯೋಗಳನ್ನು ಏನು ಮಾಡುತ್ತಿದ್ದ ಎಂಬುದರ ಕುರಿತು ತನಿಖೆ ನಡೆಸುತ್ತಿದ್ದ ಪೊಲೀಸರಿಗೆ ಆರೋಪಿ ಪ್ರಭು ಸಿಕ್ಕಿ ಬಿದ್ದಿದ್ದಾನೆ.