– ಬಾಲಕನ ಮನೆಗೆ ಬಂದು ಪ್ರಕರಣ ಬಗೆಹರಿಸಿದ ಪೊಲೀಸರು
ತಿರುವಂತಪುರಂ: ನನ್ನ ಸಹೋದರಿ ಸೇರಿ ಆಕೆಯ ನಾಲ್ಕು ಜನ ಸ್ನೇಹಿತೆಯರನ್ನು ಅರೆಸ್ಟ್ ಮಾಡಿ ಎಂದು 8 ವರ್ಷದ ಬಾಲಕನೊಬ್ಬ ಪೊಲೀಸರಿಗೆ ದೂರು ನೀಡಿರುವ ಘಟನೆ ಕೇರಳದಲ್ಲಿ ನಡೆದಿದೆ.
ಕೇರಳದ ಉಮಾರ್ ನಿಧಾರ್ ಕೋವಿಡ್ 19 ಲಾಕ್‍ಡೌನ್ ವೇಳೆ ತನ್ನ ಜೊತೆ ಆಟವಾಡಲು ಬಾರದಕ್ಕೆ ಸಹೋದರಿ ಮತ್ತು ಆಕೆಯ ನಾಲ್ಕು ಜನ ಸ್ನೇಹಿತೆಯರನ್ನು ಅರೆಸ್ಟ್ ಮಾಡಿ ಎಂದು ಕಂಪ್ಲೇಟ್ ಕೊಟ್ಟಿದ್ದಾನೆ. ಇವರು ಲಾಕ್‍ಡೌನ್ ಎಂದು ನನ್ನ ಜೊತೆ ಲುಡೋ, ಶೆಟಲ್ ಕಾಕ್ ಮತ್ತು ಕಳ್ಳ ಪೊಲೀಸ್ ಆಟವಾಡಲು ಬರುತ್ತಿಲ್ಲ ಎಂದು ದೂರಿದ್ದಾನೆ.
Advertisement
Advertisement
ಲಾಕ್‍ಡೌನ್ ಇರುವ ಕಾರಣ ಉಮಾರ್ ಜೊತೆ ಯಾರು ಆಟವಾಡಲು ಬಂದಿಲ್ಲ. ಜಗಳ ನಡೆದಾಗ ನೀನು ಹುಡುಗ ನಮ್ಮ ಜೊತೆ ಆಟವಾಡಬೇಡ ಎಂದು ಆತನ ಸಹೋದರಿ ಸಿಟ್ಟಿನಲ್ಲಿ ಹೇಳಿದ್ದಾಳೆ. ಇದರಿಂದ ಕೋಪಗೊಂಡ ಉಮಾರ್ ಮೊದಲು ತನ್ನ ತಂದೆಯ ಬಳಿ ದೂರು ನೀಡಿದ್ದಾನೆ. ಈ ವೇಳೆ ತಂದೆ ತಮಾಷೆಗೆ ಅವರ ವಿರುದ್ಧ ಪೊಲೀಸರಲ್ಲಿ ದೂರು ನೀಡು ಎಂದಿದ್ದಾರೆ. ಇದನ್ನೇ ಗಂಭೀರವಾಗಿ ತೆಗೆದುಕೊಂಡ ಮುಗ್ಧ ಬಾಲಕ ಪೊಲೀಸರಿಗೆ ದೂರು ನೀಡಿದ್ದಾನೆ.
Advertisement
Advertisement
ಮೇ 10ರಂದು ಯಾವುದೋ ಬೇರೆ ಪ್ರಕರಣದ ಬಗ್ಗೆ ಮಾಹಿತಿ ಪಡೆಯಲು ಪೊಲೀಸ್ ಅಧಿಕಾರಿಗಳು ಉಮಾರ್ ನಿಧಾರ್ ಮನೆಯ ಹತ್ತಿರ ಬಂದಿದ್ದಾರೆ. ಈ ವೇಳೆ ಈ ಪೋರ ತನ್ನ ಕೈಯಾರೆ ಇಂಗ್ಲಿಷ್‍ನಲ್ಲಿ ದೂರನ್ನು ಬರೆದು ಪೊಲೀಸರಿಗೆ ನೀಡಿದ್ದಾನೆ. ಆಗ ಸ್ವಲ್ಪ ಬ್ಯುಸಿ ಇದ್ದ ಪೊಲೀಸರು ಲೆಟರ್ ತೆಗೆದುಕೊಂಡು ಹೋಗುತ್ತಾರೆ. ಆದರೆ ನಂತರ ಆ ಲೆಟರ್ ಓದಿ ಮತ್ತೆ ಆತನ ಮನೆಗೆ ಬಂದು ಅವನ ಸಮಸ್ಯೆ ಬಗೆಹರಿಸಿದ್ದಾರೆ.
ಈ ವಿಚಾರದ ಬಗ್ಗೆ ಮಾತನಾಡಿರುವ ಸಿವಿಲ್ ಪೊಲೀಸ್ ಅಧಿಕಾರಿ ಉಮೇಶ್, ಆತ ಕಂಪ್ಲೇಟ್ ಕೊಟ್ಟಾಗ ತಡವಾಗಿದ್ದ ಕಾರಣ ನಾವು ವಾಪಸ್ ಹೋಗಿದ್ದೇವು. ಆದರೆ ನಂತರ ಬೆಳಗ್ಗೆ ವಾಪಸ್ ಬಂದು ಸಮಸ್ಯೆ ಬಗೆಹರಿಸಿದ್ದೇವೆ. ಅವರ ಸಹೋದರಿ ಮತ್ತು ಆಕೆಯ ಸ್ನೇಹಿತರನ್ನು ಕರೆದು ಮುಂದಿನ ಬಾರಿ ಆಟವಾಡಲು ಹೋದಾಗ ಉಮಾರ್ ನನ್ನು ಕರೆದುಕೊಂಡು ಹೋಗಬೇಕು ಎಂದು ಹೇಳಿದ್ದೇವೆ ಎಂದು ತಿಳಿಸಿದ್ದಾರೆ.
ಆಗ ಸ್ಥಳದಲ್ಲೇ ಇದ್ದ ಉಮಾರ್ ಇಲ್ಲ ನಾನು ಬಹಳ ಬಾರಿ ಅವರಿಗೆ ನನ್ನ ಆಟವಾಡಲು ಕರೆದುಕೊಂಡು ಹೋಗಿ ಎಂದು ಹೇಳಿದ್ದೇನೆ ಆದರೆ ಅವರಂತು ಕರೆದುಕೊಂಡು ಹೋಗಲ್ಲ ಎಂದಿದ್ದಾನೆ. ಆದರೆ ಪೊಲೀಸರು ಇಲ್ಲ ನಾವು ಅವರಿಗೆ ಹೇಳಿದ್ದೇವೆ ಎಂದು ತಿಳಿಸಿದ್ದಾರೆ. ಆಗ ಅವರ ಸಹೋದರಿ ಅವನು ಈ ರೀತಿ ದೂರು ನೀಡುತ್ತಾನೆ ಎಂದು ನಾನು ಊಹಿಸಿರಲಿಲ್ಲ. ಮುಂದಿನ ಬಾರಿ ಆಟವಾಡಲು ಖಂಡಿತ ಕರೆದುಕೊಂಡು ಹೋಗುತ್ತೇವೆ ಎಂದು ಭರವಸೆ ನೀಡಿದ್ದಾಳೆ.