ಸಹಾಯ ಮಾಡುವ ಮನಸ್ಸಿರುತ್ತದೆ, ಎಲ್ಲರಿಗೂ ಸಾಧ್ಯವಾಗುವುದಿಲ್ಲ: ನಟ ಅರುಣ್ ಗೌಡ

Public TV
1 Min Read
ARUN GOWDA

ಬೆಂಗಳೂರು: ಕನ್ನಡದ ಯುವ ನಟರೊಬ್ಬರು ಕೊರೊನಾ ಸಮಯದಲ್ಲಿ ತಮ್ಮ ವಾಹವನ್ನು ಉಚಿತವಾಗಿ ಎನ್‍ಜಿಓ ಒಂದಕ್ಕೆ ನೀಡಿದ್ದು ಆಮ್ಲಜನಕ ಸಾಗಣೆ, ಔಷಧ ಸಾಗಣೆ ಇತರೆ ಕಾರಣಗಳಿಗೆ ಬಳಸಿಕೊಳ್ಳಲು ಎನ್‍ಜಿಒಗೆ ಕೊಟ್ಟಿದ್ದಾರೆ.

arunngowdaofficial 188581900 175285211166444 5318965964381238989 n 1

ಪುನೀತ್ ರಾಜ್‍ಕುಮಾರ್ ನಟನೆಯ ಯುವರತ್ನ ಸಿನಿಮಾದಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ದ ಯುವ ನಟ ಅರುಣ್ ಗೌಡ ಅವರು ತಮ್ಮ ಟಾಟಾ ಏಸ್ ವಾಹವನ್ನು ಲೆಟ್ಸ್ ಬಿ ದಿ ಚೇಂಜ್ ಹೆಸರಿನ ಎನ್‍ಜಿಓಗೆ ನೀಡಿದ್ದಾರೆ. ಆಮ್ಲಜನಕ ಸಿಲಿಂಡರ್ ಸಾಗಣೆ ಸೇರಿದಂತೆ ಹಲವು ಕಾರಣಗಳಿಗೆ ಆ ವಾಹವನ್ನು ಎನ್‍ಜಿಓ ಒಳಸಿಕೊಂಡು ಕಷ್ಟದಲ್ಲಿರುವರಿಗೆ ಸಹಾಯವಾಗಲಿ ಎಂದು ಕೊಟ್ಟಿದ್ದಾರೆ.

ಕೊರೊನಾದಂಥಹಾ ಕ್ಲಿಷ್ಕಕರ ಸನ್ನಿವೇಶದಲ್ಲಿ ಎಲ್ಲರೂ ಒಂದೊಂದು ರೀತಿಯಲ್ಲಿ ಸಹಾಯ ಮಾಡಬೇಕಿದೆ. ನನ್ನದು ಅರು ಗೌಡ ಫೌಂಡೇಶನ್ ಎಂಬ ಸೇವಾ ಸಂಸ್ಥೆ ಇದೆ. ಅದರ ಮೂಲಕ ಕೆಲವು ಸೇವಾ ಕಾರ್ಯಗಳನ್ನು ಮಾಡುತ್ತಿದ್ದೇನೆ. ಇಂದು ಲೆಟ್ಸ್ ಬಿ ದಿ ಚೇಂಜ್ ಎನ್‍ಜಿಓ ಜೊತೆಗೆ ನಾನು ಕೈಜೋಡಿಸಿ ನನ್ನ ಬಳಕೆಗೆ ಇಟ್ಟುಕೊಂಡಿದ್ದ ಟಾಟಾ ಏಸ್ ವಾಹನವನ್ನು ಅವರಿಗೆ ನೀಡಿದ್ದೇನೆ ಎಂದು ಅರುಣ್ ಗೌಡ ಅವರು ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿರುವ ವೀಡಿಯೋದಲ್ಲಿ ಹೇಳಿದ್ದಾರೆ.

arunngowdaofficial 188581900 175285211166444 5318965964381238989 n

ಕೊರೊನಾದಂಥಹಾ ಕ್ಲಿಷ್ಟಕರ ಸನ್ನಿವೇಶದಲ್ಲಿ ಎಲ್ಲರಿಗೂ ಸಹಾಯ ಮಾಡುವ ಮನಸ್ಸಿರುತ್ತದೆ. ಆದರೆ ಎಲ್ಲರಿಗೂ ಅದು ಸಾಧ್ಯವಾಗುವುದಿಲ್ಲ. ಆಗ ಚೆನ್ನಾಗಿ ಕೆಲಸ ಮಾಡುತ್ತಿರುವ ಎನ್‍ಜಿಓಗಳಿಗೆ, ಸೇವಾ ಸಂಸ್ಥೆಗಳಿಗೆ ನಾವು ಬೆಂಬಲ ನೀಡಬೇಕು. ಅವರೊಟ್ಟಿಗೆ ಕೈ ಜೋಡಿಸಬೇಕಾಗಿದೆ. ಕೊರೊನಾಕ್ಕೆ ಸಂಬಂಧಿಸಿದಂತೆ ಆಮ್ಲಜನಕ, ಬೆಡ್ ಸಮಸ್ಯೆ, ಊಟ ಏನೇ ಬೇಕಾದರು ಲೆಟ್ ಬಿ ದಿ ಚೇಂಜ್ ಸೇವಾ ಸಂಸ್ಥೆಯನ್ನು ಸಂಪರ್ಕಿಸಬಹುದು. ಈಗಾಗಲೇ ಕೊರೊನಾ ಬಂದು ವಾಸಿಯಾಗಿರುವವರು ಸಹ ತಮ್ಮ ಔಷಧಗಳು, ಆಮ್ಲಜನಕ ಸಾಂದ್ರಕ ಯಂತ್ರಗಳನ್ನು ಇವರಿಗೆ ಕೊಟ್ಟರೆ ಅಗತ್ಯ ಇರುವವರಿಗೆ ತಲುಪಿಸುತ್ತಾರೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *