– ನರೇಶ್ ನನಗೆ ಪರಿಚಯ, ನನ್ನನ್ನ ಯಾರೂ ಅಪಹರಿಸಿಲ್ಲ
– ಲೀಕ್ ಆಗಿರುವ ಆಡಿಯೋ ಕ್ಲಿಪ್ ನಿಜ
ಬೆಂಗಳೂರು: ಮಾಜಿ ಸಚಿವರ ರಾಸಲೀಲೆ ವೀಡಿಯೋದಲ್ಲಿರುವ ಎನ್ನಲಾಗಿರುವ ಯುವತಿ ಮತ್ತೊಂದು ವೀಡಿಯೋ ಹೇಳಿಕೆಯನ್ನು ಬಿಡುಗಡೆ ಮಾಡಿದ್ದಾರೆ. ಶುಕ್ರವಾರ ಸಂಜೆ ಲೀಕ್ ಆಗಿದ್ದ ಆಡಿಯೋ ಕ್ಲಿಪ್ ತಮ್ಮದೇ ಎಂದು ಒಪ್ಪಿಕೊಂಡಿರುವ ಯುವತಿ, ಸಹಾಯ ಕೇಳಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಳಿ ಹೋಗಿದ್ದು ನಿಜ ಎಂದಿದ್ದಾರೆ.
Advertisement
ಮಾರ್ಚ್ 2ರಂದು ನನ್ನ ಸಿಡಿ ರಿಲೀಸ್ ಆದಾಗ ಭಯ ಆಗಿತ್ತು. ಮಾಧ್ಯಮಗಳಲ್ಲಿ ಸುದ್ದಿ ನೋಡಿ ಆತಂಕವಾಗಿತ್ತು. ಮಾಧ್ಯಮಗಳಲ್ಲಿ ನನಗೆ ನರೇಶ್ ಒಬ್ಬರೇ ಪರಿಚಯ. ಹಾಗಾಗಿ ನರೇಶಣ್ಣನಿಗೆ ಫೋನ್ ಮಾಡಿ ಸಹಾಯ ಕೇಳಿದೆ. ಅದಕ್ಕೆ ನರೇಶ್ ಇದು ದೊಡ್ಡ ಪ್ರಕರಣ. ಇದಕ್ಕೆ ರಾಜಕೀಯ ಮುಖಂಡರ ಸಹಾಯ ಬೇಕಾಗುತ್ತೆ. ಡಿ.ಕೆ.ಶಿವಕುಮಾರ್ ಅಥವಾ ಸಿದ್ದರಾಮಯ್ಯರನ್ನ ಸಂಪರ್ಕಿಸಿ ಸಹಾಯ ಕೇಳೋಣ ಎಂದು ನರೇಶ್ ಹೇಳಿದ್ರು.
Advertisement
Advertisement
ನಾನಿರುವ ಸ್ಥಳಕ್ಕೆ ಬಂದ ನರೇಶ್ ನನ್ನನ್ನು ಪಿಕ್ ಮಾಡಿದರು. ಡಿ.ಕೆ.ಶಿವಕುಮಾರ್ ಮನೆ ಬಳಿ ಬಂದಾಗ ನನ್ನ ಕುಟುಂಬಸ್ಥರು ಪದೇ ಪದೇ ಫೋನ್ ಮಾಡುತ್ತಿದ್ದರು. ಅಮ್ಮ ಅಳುತ್ತಿದ್ದಾಗ ಸಮಾಧಾನ ಮಾಡೋಕೆ ಮುಂದಾದೆ. ಅವರು ಅಳೋದು ನೋಡಿ ನಾನು ಏನು ಮಾಡಿಲ್ಲ. ಕುಟುಂಬಸ್ಥರ ಆತಂಕ ನೋಡಿ ಭಯ ಆಗಿದ್ದರಿಂದ ಅವರ ಸಮಾಧಾನಕ್ಕೆ ಮುಂದಾಗಿ, ಡಿ.ಕೆ.ಶಿವಕುಮಾರ್ ಮನೆ ಬಳಿ ಬಂದಿದ್ದೇನೆ. ಅವರನ್ನ ಭೇಟಿಯಾಗಿ ಎಲ್ಲ ಹೇಳುತ್ತೇನೆ ಎಂದು ಹೇಳಿದೆ. ಆದ್ರೆ ನಮಗೆ ಡಿ.ಕೆ.ಶಿವಕುಮಾರ್ ಸಿಗದ ಕಾರಣ ವಾಪಸ್ ಅಲ್ಲಿಂದ ಹೊರಡಬೇಕಾಯ್ತು. ಇದನ್ನೂ ಓದಿ: ಸರ್ಕಾರವನ್ನೇ ಬೀಳಿಸಿದ್ದೀನಿ ಇದೇನು ಮಹಾ – ರಮೇಶ್ ಜಾರಕಿಹೊಳಿ
Advertisement
ನಮ್ಮ ಅಪ್ಪ-ಅಮ್ಮ ಎಲ್ಲಿದ್ದಾರೆ ಅನ್ನೋದು ನನಗೆ ಗೊತ್ತಾಗುತ್ತಿಲ್ಲ. ಎಸ್‍ಐಟಿ ರಕ್ಷಣೆ ಕೊಡುತ್ತೇವೆ ಎಂದು ಹೇಳಿದ್ದಾರೆ. ಆದ್ರೆ ಅವರ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಅಪ್ಪ-ಅಮ್ಮ, ಅಜ್ಜಿ ಹಾಗೂ ತಮ್ಮಂದಿರನ್ನ ಬೆಂಗಳೂರಿಗೆ ಕರೆದುಕೊಂಡು ಬನ್ನಿ. ನನ್ನನ್ನು ಯಾರು ಅಪಹರಿಸಿಲ್ಲ, ಸುರಕ್ಷಿತವಾಗಿದ್ದೇನೆ. ಕಳೆದ 24 ದಿನಗಳಿಂದ ಏನು ಮಾಡಬೇಕು ಅನ್ನೋದು ಗೊತ್ತಾಗುತ್ತಿಲ್ಲ. ಎಸ್‍ಐಟಿ ತನಿಖೆಯಿಂದ ನ್ಯಾಯ ಸಿಗುತ್ತೆ ಅನ್ನೋ ನಂಬಿಕೆ ಇದೆ. ಇದನ್ನೂ ಓದಿ: ನಾನು ಡಿ.ಕೆ.ಶಿವಕುಮಾರ್ ಮನೆ ಬಳಿಯೇ ಇದ್ದೇನೆ, ಯಾವುದೇ ಕಾರಣಕ್ಕೂ ಹೆದರಬೇಡಿ- ಯುವತಿಯ ಫೋನ್ ಕಾಲ್ ಲೀಕ್
ಒಂದು ದಿನದಲ್ಲಿ ಸರ್ಕಾರ ಬೀಳಿಸಿಬಲ್ಲೆ. ಎಷ್ಟೇ ಹಣ ಖರ್ಚಾದರೂ ಪರವಾಗಿಲ್ಲ. ಅವರನ್ನ ಜೈಲಿಗೆ ಹಾಕಿಸುತ್ತೇನೆ ಎಂದು ಬಹಿರಂಗವಾಗಿಯೇ ಬೆದರಿಕೆ ಹಾಕುತ್ತಾರೆ. ಎಷ್ಟೇ ಹಣ ಖರ್ಚಾಗಲಿ ಅಂದ್ರೆ ಏನರ್ಥ ಅನ್ನೋದನ ಜನರು ಅರ್ಥ ಮಾಡಿಕೊಳ್ಳಬೇಕು. ನಾಳೆ ನನ್ನನ್ನೇ ಕೊಲ್ಲಬಹುದು ಅಥವಾ ಅಪ್ಪ-ಅಮ್ಮನ ಜೀವಕ್ಕೆ ಅಪಾಯ ಉಂಟು ಮಾಡಬಹುದು. ದಯವಿಟ್ಟು ಅಪ್ಪ-ಅಮ್ಮನ ಬೆಂಗಳೂರಿಗೆ ಕರೆ ತಂದು ರಕ್ಷಣೆ ಕೊಡಿ ಎಂದು ಯುವತಿ ಮನವಿ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಡಿ.ಕೆ.ಶಿವಕುಮಾರ್ ಒಳ್ಳೆಯವರು, ರಾಜೀನಾಮೆ ನೀಡಬಾರದು: ರಮೇಶ್ ಜಾರಕಿಹೊಳಿ