– ಕೊರೊನಾ ನಿಯಂತ್ರಿಸಲು ಕ್ರಮ
– ತಮಿಳುನಾಡು ಸರ್ಕಾರದಿಂದ ಆದೇಶ
ಚೆನ್ನೈ: ಸಲೂನ್ ಅಂಗಡಿಗಳಿಂದ ಕೊರೊನಾ ಹರಡುತ್ತಿರುವ ಹಿನ್ನೆಲೆಯಲ್ಲಿ ಈಗ ತಮಿಳುನಾಡಿನಲ್ಲಿ ಗ್ರಾಹಕರಿಗೆ ಆಧಾರ್ ಕಾರ್ಡ್ ಕಡ್ಡಾಯ ಮಾಡಲಾಗಿದೆ.
ದೇಶದ ಹಲವೆಡೆ ಸಲೂನ್ ಮಾಡಿದ ವ್ಯಕ್ತಿಗಳಿಂದ ಕೊರೊನಾ ಹರಡಿದ ಪ್ರಕರಣಗಳಿಂದ ಎಚ್ಚೆತ್ತ ತಮಿಳುನಾಡು ಸರ್ಕಾರ ಈಗ ಗ್ರಾಹಕರಿಗೆ ಆಧಾರ್ ಕಡ್ಡಾಯಗೊಳಿಸಿದೆ.
Advertisement
Advertisement
ಅಂಗಡಿಯವರು ಗ್ರಾಹಕರ ಹೆಸರು, ವಿಳಾಸ, ಫೋನ್ ನಂಬರ್, ಆಧಾರ್ ಕಾರ್ಡ್ ಸಂಖ್ಯೆಯನ್ನು ಮೊದಲು ಪಡೆದು ಬಳಿಕ ಸೇವೆಯನ್ನು ನೀಡಬೇಕೆಂದು ಸರ್ಕಾರ ಆದೇಶ ಪ್ರಕಟಿಸಿದೆ.
Advertisement
ದೇಶದಲ್ಲಿ ಅತಿ ಹೆಚ್ಚು ಕೊರೊನಾ ಪ್ರಕರಣಗಳು ಕಂಡುಬಂದ ರಾಜ್ಯಗಳ ಪೈಕಿ ತಮಿಳುನಾಡು ಎರಡನೇ ಸ್ಥಾನದಲ್ಲಿದೆ. 23 ಸಾವಿರ ಪ್ರಕರಣಗಳು ಬೆಳಕಿಗೆ ಬಂದಿದ್ದು, 10 ಸಾವಿರ ಸಕ್ರಿಯ ಪ್ರಕರಣಗಳಿವೆ. 13 ಸಾವಿರಕ್ಕೂ ಹೆಚ್ಚು ಮಂದಿ ಗುಣಮುಖರಾಗಿದ್ದು, 187 ಮಂದಿ ಮೃತಪಟ್ಟಿದ್ದಾರೆ.
Advertisement
ಕರ್ನಾಟಕ ಸರ್ಕಾರ ಸಲೂನ್ ಅಂಗಡಿ ತೆರೆಯಲು ಅನುಮತಿ ನೀಡಿದೆ. ಕಡ್ಡಾಯವಾಗಿ ಅಂಗಡಿಯವರು 14 ಮಾರ್ಗಸೂಚಿಗಳನ್ನು ಪಾಲಿಸಬೇಕೆಂದು ಸೂಚಿಸಿದೆ.
ಮಾರ್ಗಸೂಚಿಯಲ್ಲಿ ಏನಿದೆ?
1. ಜ್ವರ, ಕೆಮ್ಮು, ನೆಗಡಿ, ಉಸಿರಾಟ ಸಮಸ್ಯೆ ಇರುವ ಗ್ರಾಹಕರಿಗೆ ನಿರ್ಬಂಧ.
2. ಮಾಸ್ಕ್ ಹಾಕದೇ ಬರುವ ಗ್ರಾಹಕರ ಪ್ರವೇಶಕ್ಕೆ ಅನುಮತಿ ನೀಡಬಾರದು.
3. ಹೇರ್ ಕಟ್ ಮಾಡುವವರು ಕಡ್ಡಾಯವಾಗಿ ಗ್ಲೌಸ್, ಟೋಪಿ, ಏಪ್ರನ್, ಮಾಸ್ಕ್ ಧರಿಸಿರಬೇಕು.
4. ಅಂಗಡಿಯ ಮುಂಭಾಗ ಸ್ಯಾನಿಟೈಸರ್ ಇಟ್ಟಿರಬೇಕು. ಹೇರ್ ಕಟ್ ಮಾಡಿದ ಸಿಬ್ಬಂದಿ ಪ್ರತೀ ಸಲವೂ ಕೈಗಳನ್ನು ಸ್ಯಾನಿಟೈಸ್ ಮಾಡಬೇಕು.
5. ಪ್ರತಿ ಗ್ರಾಹಕನಿಗೂ ಒಮ್ಮೆ ಬಳಸುವ ಟವೆಲ್/ಪೇಪರ್ ಶೀಟ್ ಬಳಕೆ ಮಾಡಬೇಕು.
6. ಪ್ರತೀ ಸಿಬ್ಬಂದಿ ಎರಡು ಸೆಟ್ ಹೇರ್ ಕಟಿಂಗ್/ ಶೇವಿಂಗ್ ಪರಿಕರಗಳನ್ನು ಇಟ್ಟುಕೊಂಡಿರಬೇಕು.
7. ಒಬ್ಬ ಗ್ರಾಹಕರಿಗೆ ಬಳಕೆ ಮಾಡಿದ ಬಳಿಕ ಎಲ್ಲ ಸಾಧನಗಳನ್ನು 30 ನಿಮಿಷಗಳ ಕಾಲ ಶೇ.7ರ ಲೈಸೋಲ್ ಬಳಸಿ ಸೋಂಕು ನಿವಾರಣೆ ಮಾಡಬೇಕು.
8. ಗ್ರಾಹಕರ ದಟ್ಟಣೆ ತಡೆಯಲು ಟೋಕನ್ ವ್ಯವಸ್ಥೆ ಅಥವಾ ಸಮಯ ಕಾಯ್ದಿರಿಸುವ ವ್ಯವಸ್ಥೆ ಮಾಡಬೇಕು.
9. ಗ್ರಾಹಕರ ಮಧ್ಯೆ ಕನಿಷ್ಠ ಒಂದು ಮೀಟರ್ ಅಂತರ ಇರಬೇಕು.
10. ಬ್ಲೇಡ್ ಎಸೆಯಬಹುದಾದ ರೇಜರ್ ಸೇರಿದಂತೆ ಇತ್ಯಾದಿ ಚೂಪಾದ ತ್ಯಾಜ್ಯಗಳನ್ನು ಶೇ.1ರ ಸೋಡಿಯಂ ಹೈಪೋಕ್ಲೊರೈಟ್ ದ್ರಾವಣದೊಂದಿಗೆ ಒಡೆದು ಹೋಗದ, ಸೋರಿಕೆಯಾಗದ ಬಿಳಿ ಕಂಟೇನರ್ ನಲ್ಲಿ ಸಂಗ್ರಹಿಸಬೇಕು. ಕಂಟೇನರ್ ನ 3/4ರಷ್ಟು ಭಾಗ ತುಂಬಿದ ಬಳಿಕ ಬಯೋಮೆಡಿಕಲ್ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಒಪ್ಪಿಸಬೇಕು.
12. ಪ್ರವೇಶ ದ್ವಾರದಲ್ಲಿ ಕೆಮ್ಮು ಮತ್ತು ಸಾಮಾಜಿಕ ಅಂತರದ ಬಗೆಗಿನ ಶಿಷ್ಟಾಚಾರಗಳಿಗೆ ಸಂಬಂಧಿಸಿದ ಪೋಸ್ಟರ್ ಅಂಟಿಸಬೇಕು.
13. ಮಾಸ್ಕ್ ಮತ್ತು ಕೆಮ್ಮಿಗೆ ಸಂಬಂಧಿಸಿದ ಶಿಷ್ಟಾಚಾರ ಬಗ್ಗೆ ಎಲ್ಲ ಸಿಬ್ಬಂದಿ ಮತ್ತು ಸಹಾಯಕರಿಗೆ ಮಾರ್ಗದರ್ಶನ ನೀಡಬೇಕು. ಅವರಲ್ಲಿ ಕೋವಿಡ್ 19ಗೆ ಸಂಬಂಧಿಸಿದ ರೋಗ ಲಕ್ಷಣಗಳು ಕಂಡು ಬಂದರೆ ಅವರನ್ನು ತಕ್ಷಣ ಫೀವರ್ ಕ್ಲಿನಿಕ್‍ಗೆ ಕಳುಹಿಸಬೇಕು. ಅಥವಾ ಆಪ್ತಮಿತ್ರ ಸಹಾಯವಾಣಿ 14410 ಸಂಖ್ಯೆಗೆ ಕರೆ ಮಾಡಬೇಕು. ಸಿಬ್ಬಂದಿ ಸಂಪೂರ್ಣ ಗುಣಮುಖರಾಗುವ ತನಕ ಅವರು ಆವರಣ ಪ್ರವೇಶಿಸಲು ಅನುಮತಿ ನೀಡಬಾರದು.
14. ಕಾರ್ಪೆಟ್ ಮತ್ತು ಕೊಠಡಿಯ ನೆಲ ಭಾಗವನ್ನು ಆಗಾಗ ಸ್ವಚ್ಛಗೊಳಿಸಬೇಕು.