ನೆಲಮಂಗಲ: ರಾಷ್ಟ್ರೀಯ ಹೆದ್ದಾರಿಯ ಸರ್ವಿಸ್ ರಸ್ತೆಗೆ ತಡೆಗೋಡೆ ನಿರ್ಮಿಸಲಾಗುತ್ತಿದ್ದು, ಕೆಲ ಪಂಚಾಯ್ತಿ ಸದಸ್ಯರು ಟೋಲ್ ಕಂಪನಿ ಪರ ನಿಂತಿರುವುದು ಇದೀಗ ಆಕ್ರೋಶಕ್ಕೆ ಕಾರಣವಾಗಿದೆ.
Advertisement
ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸವಾರರಿಂದ ಟೋಲ್ ಸುಂಕವನ್ನ ಪಡೆಯುವ, ಟೋಲ್ ಕಂಪನಿಗಳು ಸ್ಥಳೀಯ ಓಡಾಟಕ್ಕೆ ಸರ್ವೀಸ್ ರಸ್ತೆಯನ್ನ ಅನುವು ಮಾಡಿಕೊಡಬೇಕು. ಆದರೆ ಟೋಲ್ ನಿರ್ಮಾಣವಾದ ದಿನದಿಂದ ಸರ್ವೀಸ್ ರಸ್ತೆಯನ್ನ ನೀಡಿರಲಿಲ್ಲ. ಇತ್ತೀಚೆಗೆ ಸ್ಥಳೀಯರು ಸರ್ವೀಸ್ ರಸ್ತೆಗೆ ಹಾಕಿದ್ದ ತಡೆಗೋಡೆಯನ್ನ ಜೆಸಿಬಿ ಮೂಲಕ ತೆರವು ಮಾಡಿ ಸ್ಥಳೀಯರಿಗೆ ಅನುಕೂಲ ಮಾಡಿದ್ದರು. ಈ ರಸ್ತೆ ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಯಂಟಗಾನಹಳ್ಳಿ ಬಳಿ ಇರುವ, ನೆಲಮಂಗಲ ದೇವಿಹಳ್ಳಿ ಟೋಲ್ ಎಕ್ಸ್ಪ್ರೆಸ್ ಕಂಪನಿ ವಿರುದ್ಧ ಕೆಲವು ದಿನಗಳ ಹಿಂದೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ಮನೆ ಕನ್‍ಸ್ಟ್ರಕ್ಷನ್ ಉಸ್ತುವಾರಿಗೆ ಬಂದವ ಸ್ನೇಹಿತನ ಪತ್ನಿಯ ಜೊತೆ ಪರಾರಿ
Advertisement
Advertisement
ಆದರೆ ಈಗ ಕೆಲ ಗ್ರಾಮ ಪಂಚಾಯ್ತಿ ಸದಸ್ಯರು ಟೋಲ್ ಕಂಪನಿ ಪರ ನಿಂತು ಮತ್ತೆ ತಡೆಗೋಡೆ ನಿರ್ಮಾಣ ಮಾಡಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಇತ್ತ ಸ್ಥಳೀಯರ ಜಮೀನು ಪಡೆದು ಅವರಿಗೆ ಟೋಲ್ ಕಂಟಕ ಎದುರಾಗಿದ್ದು, ಕೆಲವು ಗ್ರಾಮ ಪಂಚಾಯ್ತಿ ಸದಸ್ಯರು ಗ್ರಾಮದ ಸಮಸ್ಯೆ ಬಗೆಹರಿಸುವ ಬದಲು ಟೋಲ್ ಕಂಪನಿ ಪರ ನಿಂತಿರುವುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದ್ದು, ಸದಸ್ಯರ ನಡೆ ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ.
Advertisement