– ಸಿವಿಲ್ ಡಿಫೆನ್ಸ್‌ನಲ್ಲಿ ಕಾರ್ಯ
ಬೆಂಗಳೂರು: ಡಿಜೆ ಹಳ್ಳಿ ಗಲಭೆಯ ಮಾಸ್ಟರ್ ಮೈಂಡ್ ಎನ್ನಲಾಗಿದ್ದ ಫೈರೋಜ್ ಖಾನ್‍ನನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಇದೀಗ ಈತ ಸಿವಿಲ್ ಡಿಫೆನ್ಸ್‌ನಲ್ಲಿ (ನಾಗರಿಕ ರಕ್ಷಣಾ) ಕಾರ್ಯನಿರ್ವಹಿಸುತ್ತಿದ್ದ ಎಂಬುದು ತನಿಖೆಯ ವೇಳೆ ತಿಳಿದು ಬಂದಿದೆ. ಇದನ್ನೂ ಓದಿ: ಬೆಂಗಳೂರು ಗಲಭೆ – ಟಿಪ್ಪು ಆರ್ಮಿ ಸಂಘಟನೆಯ ಮುಖಂಡ ಅರೆಸ್ಟ್
ಮಾಸ್ಟರ್ ಮೈಂಡ್ ಫೈರೋಜ್ ಖಾನ್ ಸಿವಿಲ್ ಡಿಫೆನ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದನು. ಕಳೆದ ವರ್ಷ ಕಾರ್ಗಿಲ್ ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದ.
Advertisement
Advertisement
ಏನಿದು ಸಿವಿಲ್ ಡಿಫೆನ್ಸ್?
ಪೊಲೀಸ್ ಇಲಾಖೆಯ ಅವಿಭಾಜ್ಯ ಅಂಗ ಸಿವಿಲ್ ಡಿಫೆನ್ಸ್. ಜನರಿಗೆ ಜಾಗೃತಿ, ತುರ್ತು ಸಂದರ್ಭದಲ್ಲಿ ಸ್ಪಂದನೆ ಮಾಡುವುದೇ ಇವರ ಕಾರ್ಯವಾಗಿದೆ. ತುರ್ತು ಸಂದರ್ಭದಲ್ಲಿ ಈ ತಂಡವನ್ನು ಅಗತ್ಯ ಕೆಲಸಗಳಿಗೆ ಬಳಕೆ ಮಾಡಲಾಗುತ್ತೆ. ಬೆಂಗಳೂರಿನಲ್ಲಿ ಸುಮಾರು 20 ಏರಿಯಾ ಡಿವೈಡ್ ಮಾಡಿ ಈ ಸಿವಿಲ್ ಡಿಫೆನ್ಸ್‌ಗಳನ್ನು ಆಯಾಯ ವಲಯಗಳನ್ನು ಮಾನಿಟರ್ ಮಾಡಲು ಕೊಟ್ಟಿರುತ್ತಾರೆ.
Advertisement
Advertisement
ಜನರಿಗೆ ಜಾಗೃತಿ ತುರ್ತು ಸಂದರ್ಭದಲ್ಲಿ ಸ್ಪಂದಿಸೋದು, ಸೆಲ್ಫ್ ಡಿಫೆನ್ಸ್ ನಂತಹ ಟ್ರೈನಿಂಗ್ ಅಗ್ನಿ ಅವಘಡ ಆದಾಗ ಕಾರ್ಯನಿರ್ವಹಿಸುವ ವಿಧಾನವನ್ನು ಈ ಸಿವಿಲ್ ಡಿಫೆನ್ಸ್ ನವರು ಹೇಳಿಕೊಡುತ್ತಾರೆ. ಆದರೆ ಇವರ ಆಯ್ಕೆ ಮಾಡಿಕೊಳ್ಳುವ ಮುನ್ನ ಕಟ್ಟುನಿಟ್ಟಾದ ಪರಿಶೀಲನೆ ನಡೆಯುತ್ತೆ. ನಂತರ ಆಯಾಯ ಠಾಣೆಯ ವ್ಯಾಪ್ತಿಯಲ್ಲಿ ಕ್ಲಿಯರ್ ಮಾಡಿದಷ್ಟೇ ಕಮೀಷನರ್ ಇವರಿಗೆ ಸರ್ಟಿಫಿಕೇಟ್ ಕೊಡುತ್ತಾರೆ.
ಕೊಂಚ ಕ್ರಿಮಿನಲ್ ಬ್ಯಾಕ್ ಗ್ರೌಂಡ್ ಅಥವಾ ಸಂಶಯ ಬಂದರೂ ಇವರಿಗೆ ಅನುವು ಮಾಡಿಕೊಡಲ್ಲ. ಹೀಗಾಗಿ ಇಂತಹ ಕಠಿಣ ನಿಯಮ ಇರುವಾಗ ಸಿವಿಲ್ ಡಿಫೆನ್ಸ್‌ಗೆ ಫೈರೋಜ್ ಸೇರಿದ್ದೇಗೆ? ಎಂಬ ಪ್ರಶ್ನೆ ಮೂಡಿದೆ.
ಸಿವಿಲ್ ಡಿಫೆನ್ಸ್‌ನಲ್ಲಿ ಕೆಲಸ ಮಾಡುವುದರಿಂದ ಫೈರೋಜ್‍ಗೆ ಇಡೀ ರಸ್ತೆಗಳ ಮಾಹಿತಿ ಇತ್ತು. ಮ್ಯಾಪಿಂಗ್ ಕೆಲಸಕ್ಕೆ ಈ ಸಿವಿಲ್ ಡಿಫೆನ್ಸ್ ಬಳಕೆ ಮಾಡಿಕೊಂಡ್ನಾ ಎಂಬ ಅನುಮಾನ ಬರುತ್ತಿದೆ. ಪೊಲೀಸ್ ಇಲಾಖೆಯ ಅವಿಭಾಜ್ಯ ಅಂಗವಾಗಿರುವ ವಿಭಾಗದಲ್ಲಿ ಉದ್ದೇಶ ಪೂರ್ವಕವಾಗಿ ಸೇರಿಕೊಂಡು ಇಷ್ಟೆಲ್ಲ ಅವಾಂತರ ಸೃಷ್ಟಿಸಿದ್ದಾನೆ ಎನ್ನಲಾಗಿದೆ.