ಬೆಂಗಳೂರು: ಸಿನಿಮಾ ನಟ-ನಟಿಯರು ಶಾಲೆಗಳನ್ನು ದತ್ತು ಪಡೆಯುವುದು ಹಾಗೂ ಶಾಲೆಗಳಿಗೆ ಒಂದಲ್ಲ ಒಂದು ರೀತಿಯಲ್ಲಿ ಸಹಾಯ ಮಾಡುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಇದೀಗ ಇವರ ಸಾಲಿಗೆ ಡಾಲಿ ಧನಂಜಯ್ ಕೂಡ ಸೇರಿಕೊಂಡಿದ್ದಾರೆ.
ಹೌದು. ಸದ್ಯ ಸ್ಯಾಂಡಲ್‍ವುಡ್ ನಲ್ಲಿ ಬ್ಯುಸಿ ನಟರಲ್ಲಿ ಡಾಲಿ ಧನಂಜಯ್ ಕೂಡ ಒಬ್ಬರು. ತಮ್ಮ ವೈವಿಧ್ಯಮಯ ನಟನೆಯಿಂದಲೇ ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಡಾಲಿ, ಹಳ್ಳಿಯ ಸರ್ಕಾರಿ ಶಾಲೆಯೊಂದಕ್ಕೆ ಪ್ರೊಜೆಕ್ಟರ್ ನೀಡುವ ಮೂಲಕ ಸಹಾಯ ಮಾಡಿದ್ದಾರೆ.
Advertisement
Advertisement
ನಂಜನಗೂಡು ತಾಲೂಕಿನ ಸುತ್ತೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಪ್ರೊಜೆಕ್ಟರ್ ಕೊಡಿಸಿದ್ದಾರೆ. ಈ ಮೂಲಕ ಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದ್ದಾರೆ. ಹೀಗಾಗಿ ಅಲ್ಲಿನ ಶಾಲಾ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ನಟನಿಗೆ ಧನ್ಯವಾದ ಅರ್ಪಿಸಿದ್ದಾರೆ.
Advertisement
ಈ ಸಂಬಂಧ ಪ್ರತಿಕ್ರಿಯಿಸಿರುವ ಡಾಲಿ, ನಾನು ಹಳ್ಳಿಯಿಂದ ಬಂದವನು. ನಮ್ಮ ತಂದೆ ಸರ್ಕಾರಿ ಶಾಲೆಯ ಶಿಕ್ಷಕ. ಹೀಗಾಗಿ ನನಗೆ ಅಲ್ಲಿನ ಪರಿಸ್ಥಿತಿಯ ಬಗ್ಗೆ ಕೊಂಚ ಅರಿವಿದೆ. ಹಳ್ಳಿಯ ಶಾಲೆಗಳಲ್ಲಿ ತಂತ್ರಜ್ಞಾನ ಹೆಚ್ಚಾದರೆ ಮಕ್ಕಳು ಸಹ ಎಲ್ಲ ರೀತಿಯ ಕೋರ್ಸ್‍ಗಳನ್ನು ಮಾಡಿ ಉನ್ನತ ಮಟ್ಟಕ್ಕೆ ಬೆಳೆಯುತ್ತಾರೆ. ಆ ನಿಟ್ಟಿನಲ್ಲಿ ನನ್ನದು ಬಹಳ ಚಿಕ್ಕ ಕೊಡುಗೆ ಎಂದು ಹೇಳಿದ್ದಾರೆ.
Advertisement
ಡಾಲಿ ಸಹಾಯ ಇದೇ ಮೊದಲಲ್ಲ, ಈ ಹಿಂದೆ ಅಂದರೆ ಕೊರೊನಾ ಸಮಯದಲ್ಲಿ ಕೂಡ ಮುಖ್ಯಮಂತ್ರಿ ನಿಧಿಗೆ ಸಹಾಯ ಮಾಡಿದ್ದರು. ಲಾಕ್‍ಡೌನ್ ಸಮಯದಲ್ಲಿ ಸಾಕಷ್ಟು ಮಂದಿಗೆ ಅಗತ್ಯ ವಸ್ತುಗಳನ್ನು ವಿತರಣೆ ಮಾಡಿದ್ದರು. ಅಲ್ಲದೆ ಕಷ್ಟದಲ್ಲಿರುವವರಿಗೆ ಫುಡ್ ಪ್ಯಾಕೆಟ್, ಅನ್ನದಾನ ಮಾಡಿದ್ದರು.
ಒಟ್ಟಿನಲ್ಲಿ ಕೇವಲ ನಟನೆ ಮಾಡಿಕೊಂಡು ಶೋಕಿ ಜೀವನ ನಡೆಸದೆ ತಮ್ಮನ್ನು ತಾವು ಸಾಮಾಜಿಕ ಸೇವೆಯಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಡಾಲಿಯ ಈ ಕಾರ್ಯ ಅಭಿಮಾನಿಗಳು ಹಾಗೂ ಜನರ ಮೆಚ್ಚುಗೆಗೆ ಪಾತ್ರವಾಗಿದೆ.
View this post on Instagram