ಕೋಲಾರ: ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಸಿಗದೆ ಗರ್ಭಿಣಿ ನರಳಾಡಿದ ಘಟನೆ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ನಡೆದಿದೆ.
ಕೋಲಾರ ತಾಲೂಕಿನ ಶಿವರಾಮಪುರ ಗ್ರಾಮ ಮಹಿಳೆ ಹೆರಿಗೆ ನೋವಿನಿಂದ ಬೆಳಿಗ್ಗೆ 6 ಗಂಟೆಯಿಂದಲೂ ನರಳಾಡುತ್ತಿದ್ದಳು. ತುಂಬು ಗರ್ಭಿಣಿ ಸುಮ ಹೊಟ್ಟೆಯಲ್ಲಿ ಮಗು ಸತ್ತು ಹೋಗಿತ್ತು. ಮಗು ತೀರಿ ಹೋಗಿದೆ, ತಾಯಿ ಆದರೂ ಬದುಕಿಸಿ ಎಂದು ಗರ್ಭೀಣಿ ಪೋಷಕರು ಹಾಗೂ ಪತಿ ಸುಬ್ರಮಣಿ ಕೇಳಿಕೊಳ್ಳುತ್ತಿದ್ದರು. ಆದರೆ ಆಸ್ಪತ್ರೆ ಸಿಬ್ಬಂದಿ ಮಾತ್ರ ಕ್ಯಾರೆ ಅಂದಿಲ್ಲ. ಇದನ್ನೂ ಓದಿ: ಸೋಕಿನಿಂದ ಹಲವು ಕುಟುಂಬಗಳು ವಿನಾಶದ ಅಂಚಿನಲ್ಲಿವೆ – ಸಂಸದ ಎ.ನಾರಾಯಣ ಸ್ವಾಮಿ
ನಮ್ಮಲ್ಲಿ ಚಿಕಿತ್ಸೆ ಲಭ್ಯವಿಲ್ಲ ಹಾಗಾಗಿ ನೀವು ಮೆಡಿಕಲ್ ಕಾಲೇಜಿಗೆ ಕರೆದುಕೊಂಡು ಹೋಗಿ ಎಂದು ಸಿಬ್ಬಂದಿ ಹೇಳಿದ್ದಾರೆ. ನಮಗೆ ಇಲ್ಲೇ ಅಂದ್ರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿ ಎಂದು ಸಂಬಂಧಿಕರು ಪಟ್ಟು ಹಿಡಿದಿದ್ದರು. ಹೊಟ್ಟೆಯಲ್ಲಿ ಮಗು ಮೃತಪಟ್ಟಿರುವ ವಿಚಾರವನ್ನ ತಾಯಿಗೂ ತಿಳಿಸದೆ ಪತಿ ಹಾಗೂ ಪೋಷಕರು ಆಕೆಯನ್ನ ಕಾಯಿಸುತ್ತಿದ್ದರು. ಆದರೆ ಗರ್ಭೀಣಿ ಮಾತ್ರ ನನ್ನ ಮಗು ಇನ್ನು ಬದುಕಿದೆ ಎಂದು ಆಸೆಯಲ್ಲಿ ಇದ್ದಳು.
ಗರ್ಭೀಣಿ ನರಳಾಟ ಎಂತಹ ಕಲ್ಲು ಮನಸ್ಸನ್ನು ಮೃದು ಮಾಡುವಂತ್ತಿದ್ದು, ಆಸ್ಪತ್ರೆ ಸಿಬ್ಬಂದಿ ಹಾಗೂ ವೈದ್ಯರು ಚಿಕಿತ್ಸೆ ನೀಡದೆ ತಡ ಮಾಡಿದ್ದಾರೆ. ಈ ಘಟನೆ ಆಸ್ಪತ್ರೆಗೆ ಬಂದಿದ್ದ ಸಾಕಷ್ಟು ಜನರ ಕೆಂಗಣ್ಣಿಗೆ ಗುರಿಯಾಗಿತ್ತು. ನಂತರ ಮಹಿಳೆಯನ್ನು ಅರ್.ಎಲ್.ಜಾಲಪ್ಪ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.