ನವೆದಹಲಿ: ಕೇಂದ್ರ ಸರ್ಕಾರ 100 ಕಂಪ್ಯೂಟರ್‌ಗಳು ಮಾಲ್ವೇರ್‌ಗೆ ತುತ್ತಾಗಿದ್ದ ವಿಷಯ ತಡವಾಗಿ ಬೆಳಕಿಗೆ ಬಂದಿದೆ. ವಿಶೇಷ ಏನೆಂದರೆ ಬೆಂಗಳೂರು ಮೂಲದ ಐಟಿ ಕಂಪನಿಯಿಂದ ಈ ಮಾಲ್ವೇರ್‌ಗಳು ಬಂದಿರುವುದು ಪ್ರಾಥಮಿಕ ತನಿಖೆಯಿಂದ ದೃಢಪಟ್ಟಿದೆ.
ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಬರುವ ನ್ಯಾಷನಲ್ ಇನ್ಫಾರ್ಮೆಟಿಕ್ಸ್ ಸೆಂಟರ್(ಎನ್‌ಐಸಿ) 100 ಕಂಪ್ಯೂಟರ್‌ಗಳ ಮೇಳೆ ಮಾಲ್ವೇರ್ ದಾಳಿ ನಡೆದಿತ್ತು.
Advertisement
Advertisement
ಸೆಪ್ಟೆಂಬರ್ ಮೊದಲ ವಾರದಲ್ಲಿ ಎನ್‌ಐಸಿಯ ಉದ್ಯೋಗಿಯೊಬ್ಬರು ಮೇಲ್ ಸ್ವೀಕರಿಸಿದ್ದರು. ಇಮೇಲ್ ತೆರೆದಾಗ ಈ ಸಿಸ್ಟಂನಲ್ಲಿ ಸ್ಟೋರ್ ಆಗಿದ್ದ ಡೇಟಾಗಳು ಡಿಲೀಟ್ ಆಗಿದೆ.
Advertisement
ಈ ವಿಚಾರ ಗಮನಕ್ಕೆ ಬಂದ ಕೂಡಲೇ ಎನ್‌ಐಸಿ ಮತ್ತು ಸಚಿವಾಲಯದ 100ಕ್ಕೂ ಹೆಚ್ಚು ಕಂಪ್ಯೂಟರ್‌ಗಳು ಮಾಲ್ವೇರ್‌ಗೆ ತುತ್ತಾಗಿರುವ ವಿಚಾರ ಗೊತ್ತಾಗಿದೆ.
Advertisement
ದೆಹಲಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆಗೆ ಇಳಿದಾಗ ಈ ಸೈಬರ್ ಕ್ರೈಂ ಬೆಂಗಳೂರಿನ ಐಟಿ ಕಂಪನಿಯಿಂದ ನಡೆದಿದೆ ಎನ್ನುವುದು ಗೊತ್ತಾಗಿದೆ. ಪ್ರಾಕ್ಸಿ ಸರ್ವರ್ ಮೂಲಕ ಮೇಲ್ ಕಳುಹಿಸಿ ಈ ಕೃತ್ಯ ಎಸಗಲಾಗಿದೆ.
ಪ್ರಧಾನಮಂತ್ರಿ, ಭದ್ರತೆ ಸೇರಿದಂತೆ ಸರ್ಕಾರದ ಇಲಾಖೆಯ ಸೂಕ್ಷ್ಮ ಡೇಟಾಗಳು ಎನ್‌ಐಸಿ ಸಂಗ್ರಹದಲ್ಲಿರುತ್ತದೆ. ರಾಜಕೀಯ ವ್ಯಕ್ತಿಗಳು, ಮಿಲಿಟರಿ ನಾಯಕರು, ಪತ್ರಕರ್ತರು ಸೇರಿದಂತೆ ಹಲವರ ಮೇಲೆ ಚೀನಾ ಬೇಹುಗಾರಿಕೆ ಮಾಡುತ್ತಿದೆ ಎಂಬ ವರದಿಯ ಬೆನ್ನಲ್ಲೇ ಈ ಸೈಬರ್ ದಾಳಿ ವಿಚಾರ ಪ್ರಕಟವಾಗಿದೆ.