ಸರ್ಕಾರದ ಮುಂದೆ ಹೊಸ ಬೇಡಿಕೆಗಳನ್ನಿಟ್ಟ ಆಟೋ, ಟ್ಯಾಕ್ಸಿ ಚಾಲಕರ ಸಂಘ

Public TV
2 Min Read
AUTO 3

– ಗ್ರೀನ್ ಸಿಗ್ನಲ್ ಸಿಕ್ರೂ ಆಟೋ ರೋಡಿಗಿಳಿಯೋದು ಡೌಟು

ಬೆಂಗಳೂರು: ಕೊರೊನಾ ವೈರಸ್ ಭೀತಿಯಿಂದ ಹೇರಲಾಗಿದ್ದ 3ನೇ ಹಂತದ ಲಾಕ್ ಡೌನ್ ಮೇ 17ಕ್ಕೆ ಅಂತ್ಯವಾಗಲಿದ್ದು, ನಾಳೆಯಿಂದ ಆಟೋ ಸಂಚಾರಕ್ಕೆ ಸರ್ಕಾರ ಗ್ರೀನ್ ಸಿಗ್ನಲ್ ಕೊಟ್ರೂ ಆಟೋಗಳು ಮಾತ್ರ ರೋಡಿಗಿಳಿಯೋದು ಬಹುತೇಕ ಡೌಟ್ ಆಗಿದೆ.

ಹಲವು ಆಟೋ ಚಾಲಕರು ಕರ್ತವ್ಯಕ್ಕೆ ಮರಳೋದು ಅನಿವಾರ್ಯ ಆದರೂ ಸುರಕ್ಷಿತ ದೃಷ್ಟಿಕೋನದಿಂದ ಇನ್ನೂ ಸ್ವಲ್ಪ ದಿನ ಆಟೋ ಸಂಚಾರ ಮಾಡದಿರಲು ನಿರ್ಧಾರ ಮಾಡಿದ್ದಾರೆ. ಈ ಮಧ್ಯೆ ಆಟೋ ಚಾಲಕರ ಸಂಘಟನೆಗಳು, ಯೂನಿಯನ್ ಗಳು ಸರ್ಕಾರದ ಮುಂದೆ ಹೊಸ ಬೇಡಿಕೆಗಳನ್ನಿಟ್ಟಿದ್ದಾರೆ.

AUTO

ಅನಿವಾರ್ಯ ಪರಸ್ಥಿತಿ ಇದ್ದವರು ಆಟೋಗಳನ್ನ ಓಡಿಸಬಹುದು ಅಂತ ಆಟೋ ಚಾಲಕರ ಯೂನಿಯನ್ ಗಳ ಪದಾಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ. ನಗರದಲ್ಲಿ ಆಟೋಗಳ ಓಡಾಟದ ವೇಳೆ ಕೆಲ ನಿಯಮಗಳನ್ನ ಪಾಲಿಸುವಂತೆ ಆಟೋ ಚಾಲಕರಿಗೆ ಸೂಚಿಸಿದ್ದು, ಕೆಲವು ಹೊಸ ಬೇಡಿಕೆಗಳನ್ನ ಸರ್ಕಾರದ ಮುಂದಿಟ್ಟಿದ್ದಾರೆ.

ಆಟೋ ಚಾಲಕರ ಬೇಡಿಕೆಗಳೆನು..?
1) ಒಂದು ಆಟೋದಲ್ಲಿ ಒಬ್ಬ ಪ್ರಯಾಣಿಕನಿಗೆ ಮಾತ್ರ ಸಂಚಾರ ಮಾಡಲು ಸರ್ಕಾರ ಅವಕಾಶ ನೀಡಿದೆ. ಅನಿವಾರ್ಯ ಪರಸ್ಥಿತಿ ಇದ್ದರೆ ಇನ್ನೊಬ್ಬರಿಗೆ ಅವಕಾಶ ಮಾಡಿಕೊಡಬೇಕು. (ಉದಾ: ಒಂದು ಆಟೊದಲ್ಲಿ ಆಸ್ಪತ್ರೆಗೆ, ತುರ್ತು ಕೆಲಸಕ್ಕೆ ಹೋಗುವಾಗ ಒಬ್ಬರಿಗೆ ಇನ್ನೊಬ್ಬರ ಸಹಾಯ ಬೇಕು. ಇಂತಹ ಸಮಯದಲ್ಲಿ ಮತ್ತೊಬ್ಬರಿಗೆ ಅವಕಾಶ ಮಾಡಿಕೊಡಬೇಕು)
2) ಡಿಜಿಟಲ್ ಪೇಮೆಂಟ್ ಕಡ್ಡಾಯಗೊಳಿಸಲು ಸರ್ಕಾರಕ್ಕೆ ಒತ್ತಾಯ.

AUTO 1

3) ಆಟೋಗಳು ಕಾರ್ಯಾಚರಣೆ ಮಾಡಲು ಪ್ರತ್ಯೇಕ ಮಾರ್ಗಸೂಚಿಗಳನ್ನ ಸರ್ಕಾರ ನೀಡಬೇಕು.
4) ಪ್ರತಿಯೊಬ್ಬ ಆಟೋ ಚಾಲಕರಿಗೆ ಸಾರಿಗೆ ಇಲಾಖೆ ಅಥವಾ ಬಿಬಿಎಂಪಿಯಿಂದ ಸ್ಯಾನಿಟೈಸರ್ ಗಳನ್ನ ವಿತರಣೆ ಮಾಡಬೇಕು.
5) ಪ್ರಯಾಣಿಕರು ಆಟೋ ಹತ್ತಿಳಿದ ತಕ್ಷಣ ಅಟೊಮ್ಯಾಟಿಕ್ ಸ್ಯಾನಿಟೈಸ್ ಆಗುವಂತಹ ವ್ಯವಸ್ಥೆ ಮಾಡಿಕೊಡಬೇಕು.(ಇದಕ್ಕೆ ಅಂದಾಜು ಮೂರು ಸಾವಿರ ಖರ್ಚಾಗುತ್ತೆ. ಈ ಹಣವನ್ನ ಸರ್ಕಾರವೇ ಭರಿಸಬೇಕು).

ಈ ಸ್ಥಳಗಳಿಗೆ ಆಟೋ ಸಂಚಾರ ಇಲ್ಲ:
1) ಕಂಟೈನ್ಮೆಂಟ್ ಝೋನ್ ಗಳಿಗೆ ಆಟೋ ಸಂಚಾರವಿಲ್ಲ.
2) ಪ್ರಯಾಣಿಕನ ಮನೆ ಹತ್ತಿರವೇ ಡ್ರಾಪ್ ಮಾಡಲ್ಲ. ಬದಲಾಗಿ ಆ ಏರಿಯಾದ ಪ್ರಮುಖ ರಸ್ತೆಯ ತನಕ ಆಟೋ ಸಂಚಾರ.
3) ಕ್ವಾರಂಟೈನ್ ಕೇಂದ್ರಗಳಿಗೂ ಆಟೋ ಸಂಚಾರವಿಲ್ಲ. ಆ ಸ್ಥಳದಿಂದ ಸ್ವಲ್ಪ ದೂರದವರೆಗೆ ಮಾತ್ರ ಡ್ರಾಪ್ ಕೊಡಲಾಗುವುದು.

AUTO 2

Share This Article
Leave a Comment

Leave a Reply

Your email address will not be published. Required fields are marked *