– ಕೊರೊನಾದಿಂದ ರೈತರಿಗಾದ ನಷ್ಟಕ್ಕೆ ಪರಿಹಾರ ಸಿಕ್ಕಿಲ್ಲ
ಬೆಂಗಳೂರು: ಕೆಲವೊಂದು ಮಾಹಿತಿಗಳನ್ನು ಬಿಡುಗಡೆ ಮಾಡಿ ಅಂತ ನಾವು ಕೇಳಿದ್ದು ತಪ್ಪಾ?, ಸರ್ಕಾರದ ಭ್ರಷ್ಟಾಚಾರಕ್ಕೆ ನಾವು ಸಹಕಾರ ಕೊಡಬೇಕಾ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರಶ್ನಿಸಿದ್ದಾರೆ.
ನಗರದಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನೆರೆ ಸಂತ್ರಸ್ತರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಪ್ರವಾಹದ ಹಾನಿ ಸುಮಾರು 30 ಸಾವಿರ ಕೋಟಿ ಆಗಿತ್ತು. ಆದರೆ ಕೇಂದ್ರ ಕೊಟ್ಟಿದ್ದು ಎಷ್ಟು?. ಅಮಿತ್ ಶಾ ಬಳಿ 5 ಸಾವಿರ ಕೋಟಿ ಪರಿಹಾರ ಕೇಳಿದ್ರು. 10 ನಿಮಿಷಗಳಲ್ಲಿ ಯಡಿಯೂರಪ್ಪ, ಅಮಿತ್ ಶಾ ಭೇಟಿ ಮುಕ್ತಾಯವಾಗಿತ್ತು ಎಂದು ಗರಂ ಆದರು.
Advertisement
Advertisement
ಕೊರೊನಾ ಸಂದರ್ಭದಲ್ಲಿ ಘೋಷಣೆ ಮಾಡಿದ ಪರಿಹಾರ ಸಹ ಕೊಡಲಿಲ್ಲ. ರೈತರಿಗೆ ಸಾವಿರಾರು ಕೋಟಿ ನಷ್ಟವಾಗಿದೆ. ರೈತರಿಗೆ ಕೊಟ್ಟ ಪರಿಹಾರದ ಬಗ್ಗೆ ಪತ್ರ ಬಿಡುಗಡೆ ಮಾಡಿ. ವೈಟ್ ಪೇಪರ್ ಬಿಡುಗಡೆ ಮಾಡಿ ಅಂತ ಕೇಳಿದ್ರೆ ತಪ್ಪಾ?, ನಿಮ್ಮ ಭ್ರಷ್ಟಾಚಾರಕ್ಕೆ ಬೆಂಬಲ ಕೊಡಬೇಕಾ ಎಂದಿ ಡಿಕೆಶಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ‘ಒಂದು ವರ್ಷದ ಬಿಎಸ್‍ವೈ ಆಟ’- ತಮ್ಮದೇ ಶೈಲಿಯಲ್ಲಿ ಡಿಕೆಶಿ ವಿವರಣೆ
Advertisement
10 ವರ್ಸೆಂಟ್ ಸರ್ಕಾರ ಅಂತ ಟೀಕೆ ಮಾಡಿದ್ರಿ. ಈಗ ನೂರಾರು ಪಟ್ಟು ಜಾಸ್ತಿ ಹಣ ಕೊಟ್ಟು ವೈದ್ಯಕೀಯ ಉಪಕರಣಗಳನ್ನ ಖರೀದಿ ಮಾಡಿದ್ದೀರಿ. ಇದನ್ನು ತನಿಖೆಗೆ ಕೊಡಿ. ನಮ್ಮ ಅವಧಿಯಲ್ಲಿ ಭ್ರಷ್ಟಾಚಾರ ನಡೆದಿದೆ ಅಂತ ಹೇಳ್ತಿದ್ದೀರಿ. ಅದನ್ನೂ ತನಿಖೆ ನಡೆಸಿ ಬೇಡ ಅಂದವರು ಯಾರು. ನಾವು ತಪ್ಪು ಮಾಡಿದ್ರೆ ಶಿಕ್ಷೆ ಕೊಡಿ, ಗಲ್ಲಿಗೆ ಹಾಕಿಸಿ ಎಂದು ಹೇಳಿದರು.
Advertisement
1600 ಕೋಟಿ ಕೊರೊನಾ ಪ್ಯಾಕೇಜ್ ಕೇವಲ ಘೋಷಣೆ ಮಾಡಿದ್ದಾರೆ. ಯಾರು, ಯಾರಿಗೆ ಎಷ್ಟು ಕೊಟ್ಟಿದ್ದೀರಾ ಅನ್ನೋ ಮಾಹಿತಿ ಬಿಡುಗಡೆ ಮಾಡಲಿ. ಶ್ವೇತಪತ್ರ ಹೊರಡಿಸಿ ಅಂತ ಕೇಳಿದ್ರೆ ತಪ್ಪಾ?, ಸರ್ಕಾರದ ಭ್ರಷ್ಟಾಚಾರಕ್ಕೆ ನಾವು ಸಹಕಾರ ಕೊಡಬೇಕಾ ಎಂದು ಮತ್ತೆ ಪ್ರಶ್ನೆ ಮಾಡಿದರು. ಇದನ್ನೂ ಓದಿ: ನಮ್ಮ ಸಾಧನೆ ಬಗ್ಗೆ ಪ್ರಧಾನಿ ಸಂಸದರಿಂದ ಚಪ್ಪಾಳೆ ಹೊಡೆಸಿದ್ರು – ಸಿಎಂ
ನಮ್ಮ ಕಾಂಗ್ರೆಸ್ ಸರ್ಕಾರವನ್ನ 10 ಪರ್ಸೆಂಟ್ ಕಮಿಷನ್ ಸರ್ಕಾರ ಎಂದು ಪ್ರಧಾನಿ ಹೇಳಿದ್ದರು. ಇದು ಎಷ್ಟು ಪರ್ಸೆಂಟ್ ಕಮಿಷನ್ ಸರ್ಕಾರ. ಕೊರೊನಾ ಸಂದರ್ಭದಲ್ಲಿ ಎಲ್ಲ ಇಲಾಖೆಯಲ್ಲೂ ಭ್ರಷ್ಟಾಚಾರ ನಡೆದಿದೆ. ಶೇ.200, 300 ರಷ್ಟು ಭ್ರಷ್ಟಾಚಾರ ಆಗಿದೆ. ನಮ್ಮ ಅವಧಿಯಲ್ಲೂ ಭ್ರಷ್ಟಾಚಾರ ಆಗಿದೆ ಎನ್ನುತ್ತಾರೆ. ಬೇಕಾದ್ರೆ ನಮ್ಮ ಅವಧಿ, ಮೈತ್ರಿ ಸರ್ಕಾರದ ಅವಧಿ ಬಗ್ಗೆ ತನಿಖೆಯಾಗಲಿ. ನಾವು ಯಾವುದೇ ತನಿಖೆಗೂ ಸಿದ್ಧರಿದ್ದೇವೆ ಎಂದು ಆಗ್ರಹಿಸಿದರು.
ಕಳೆದ 5 ತಿಂಗಳಿನಿಂದ ಪಿಂಚಣಿ ಹಣ ಸಿಗುತ್ತಿಲ್ಲ. ಒಂದು ಮಾಸ್ಕ್ ಗೆ 281 ರೂಪಾಯಿ ಕೊಟ್ಟು ಖರೀದಿ ಮಾಡಿದ್ದಾರೆ. ಎನ್ 95 10 ಲಕ್ಷ ಮಾಸ್ಕ್ ವೈದ್ಯಕೀಯ ಶಿಕ್ಷಣ ಇಲಾಖೆಯಿಂದ ಖರೀದಿ ಮಾಡಿದ್ದಾರೆ. ನಾನು ಆ ಇಲಾಖೆಯ ಮಂತ್ರಿಯಾಗಿದ್ದೆ. ನನಗೇನೂ ಮಾಹಿತಿ ಸಿಗಲ್ವಾ..?, ಈ ಭ್ರಷ್ಟಾಚಾರಕ್ಕೆ ನಾವು ನಿಮ್ಗೆ ಸಹಕಾರ ಕೊಡಬೇಕಾ ಎಂದು ಡಿಕೆಶಿ ಕಿಡಿಕಾರಿದ್ದಾರೆ. ಇದನ್ನೂ ಓದಿ: 24 ಬಿಜೆಪಿ ಶಾಸಕರಿಗೆ ಒನ್ ಇಯರ್ ಗಿಫ್ಟ್ ನೀಡಿದ ಸಿಎಂ