ಬೆಂಗಳೂರು: ಸಾರಿಗೆ ನೌಕರರ ಮುಷ್ಕರ ಇಂದು ಎರಡನೇ ದಿನ್ಕಕೆ ಕಾಲಿಟ್ಟಿದ್ದು, ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಆದರೂ ಅಲ್ಲೊಮದು ಇಲ್ಲೊಂದು ಬಸ್ಸುಗಳು ಓಡಾಡುತ್ತಿವೆ. ಈ ಹಿನ್ನೆಲೆಯಲ್ಲಿ ಸಾರಿಗೆ ನೌಕರರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಜೀಪ್, ಕ್ಯಾಬ್ ಚಾಲಕರಿಂದ ಬಸ್ ಓಡಿಸುತ್ತಿದ್ದಾರೆ. ಈಗ ಬಸ್ ಓಡಿಸ್ತಿರೋರು ನಮ್ಮವರಲ್ಲ. ನಾವು ಬಸ್ ಓಡಿಸೋಕೆ ಬಿಡಲ್ಲ ಎಂದು ಸರ್ಕಾರಕ್ಕೆ ಖಡಕ್ ಸೂಚನೆ ತಿರುಗೇಟು ನೀಡಿದ್ದಾರೆ.
ರಾಜ್ಯ ಸಾರಿಗೆ ನೌಕರರು ಮುಷ್ಕರ ಮುಂದುವರಿಕೆ ಮಾಡಿರುವ ಹಿನ್ನೆಲೆಯಲ್ಲಿ ನೌಕರರಿಗೆ ಸೆಡ್ಡು ಹೊಡೆಯಲು ಸರ್ಕಾರ ಮಾಸ್ಟರ್ ಪ್ಲಾನ್ ಮಾಡಿದ್ದು, ಖಾಸಗಿ ಚಾಲಕ ಹಾಗೂ ನಿರ್ವಾಹಕರ ಮೂಲಕ ಬಸ್ ಓಡಿಸಲಾಗುತ್ತಿದೆ. ಮುಷ್ಕರದಿಂದ ಸಾರ್ವಜನಿಕರಿಗೆ ಅನಾನುಕೂಲ ಹಿನ್ನೆಲೆ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಸದ್ಯ ಪೀಣ್ಯ ಬಸ್ ನಿಲ್ದಾಣದಿಂದ ಕಾರ್ಯಚರಣೆ ಮಾಡಿರುವ ಬಿಎಂಟಿಸಿ ಗೋರಗುಂಟೆ ಪಾಳ್ಯ ಸಿಗ್ನಲ್ ಬಿಇಎಲ್ ಕಡೆ ಒಂದು ಬಸ್ ಹೊರಟಿದೆ. ಯಶವಂತಪುರ ಬಸ್ ಡಿಪೋ 26, ಉತ್ತರ ವಿಭಾಗದಿಂದ ಬಸ್ ಸಂಚಾರ ಆರಂಭಗೊಂಡಿದೆ. ಇನ್ನು ಯಶವಂತಪುರ ಬಸ್ ನಿಲ್ದಾಣದಿಂದ ನಾಲ್ಕು ಬಸ್ಸುಗಳು ಬಸ್ ಡಿಪೋದಿಂದ ಹೊರ ಬಂದಿವೆ.