ಚಿಕ್ಕೋಡಿ: ಲಾಕ್‍ಡೌನ್ ಆಗುವ ಮೊದಲು ಬೆಳಗಾವಿ ಜಿಲ್ಲೆ ಚಿಕ್ಕೋಡಿ ಪಟ್ಟಣದಲ್ಲಿ ಸರ್ಕಸ್ ಪ್ರದರ್ಶಿಸಲು ಸರ್ಕಸ್ ಕಲಾವಿದರು ಆಗಮಿಸಿದ್ದರು. ಲಾಕ್‍ಡೌನ್ ಹಿನ್ನೆಲೆಯಲ್ಲಿ ಪ್ರದರ್ಶನ ಇಲ್ಲದೆ ಹಣ, ಊಟವಿಲ್ಲದೆ ಕೊರಗುತ್ತಿದ್ದ ಸರ್ಕಸ್ ಕಲಾವಿದರಿಗೆ ಶಾಸಕ ಗಣೆಶ್ ಹುಕ್ಕೇರಿ ದಿನಸಿ ಸಾಮಾಗ್ರಿ ವಿತರಿಸಿದ್ದಾರೆ.
Advertisement
ಸರ್ಕಸ್ ಕಂಪನಿಯ ಕಲಾವಿದರು ಸಂಕಷ್ಟದಲ್ಲಿ ಇರುವುದನ್ನು ಮನಗಂಡು, ಚಿಕ್ಕೋಡಿ-ಸದಲಗಾ ಕ್ಷೇತ್ರದ ಶಾಸಕ ಗಣೇಶ ಹುಕ್ಕೇರಿ ಸುಮಾರು ಆರವತ್ತಕ್ಕೂ ಹೆಚ್ಚು ಕಲಾವಿದರಿಗೆ ಒಂದು ತಿಂಗಳಿಗೆ ಸಾಕಾಗುವಷ್ಟು ರೇಶನ್ ಹಾಗೂ ಗೃಹಪಯೋಗಿ ಸಾಮಗ್ರಿಗಳನ್ನು ವಿತರಿಸಿದ್ದಾರೆ. ಇದನ್ನೂ ಓದಿ: ಮಂಗಳಮುಖಿಯರಿಗೆ ಲಸಿಕೆಯೊಂದಿಗೆ ದಿನಸಿ ಕಿಟ್ ವಿತರಣೆ
Advertisement
ಕೊರೊನಾ ಹಾಗೂ ಲಾಕಡೌನ್ ಹಿನ್ನೆಲೆ ಅನೇಕ ಕಲಾವಿದರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಒಂದು ದಿನದ ಜೀವನ ಸಾಗಿಸುವುದು ಕೂಡ ಕಷ್ಟವಾಗಿದೆ. ಹಿಗಾಗಿ ನಮ್ಮ ಕ್ಷೇತ್ರದಲ್ಲಿ ಸಮಸ್ಯೆ ಗೊಳಗಾದ ಕಲಾವಿದರ ತಂಡಕ್ಕೆ, ಒಂದು ತಿಂಗಳಿಗೆ ಸಾಕಾಗುವಷ್ಟು ಗೃಹಪಯೋಗಿ ಸಾಮಗ್ರಿಗಳನ್ನು ಹಂಚಿದ್ದೇವೆ. ಈ ಮೂಲಕ ಕಲಾವಿದರ ಸಂಕಷ್ಟದಲ್ಲಿ ಭಾಗಿಯಾಗುವ ಕೆಲಸವನ್ನ ನಾವು ಮಾಡುತ್ತೀದ್ದೇವೆ ಎಂದು ಶಾಸಕ ಗಣೇಶ್ ಹುಕ್ಕೇರಿ ಹೇಳಿದ್ದಾರೆ. ಈ ವೇಳೆ ಚಿಕ್ಕೋಡಿ ಪುರಸಭೆ ಸದಸ್ಯರು, ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
Advertisement
Advertisement