-ಮದ್ವೆಯಾಗಿದ್ರೂ ಯುವಕನ ಜೊತೆ ಅಕ್ರಮ ಸಂಬಂಧ
-ಯುವಕನಿಗೆ 5 ಲಕ್ಷ ರೂ. ದಂಡ
ರಾಂಚಿ: ಜೋಡಿಯನ್ನು ಬೆತ್ತಲೆಗೊಳಿಸಿ ಗ್ರಾಮದಲ್ಲಿ ಮೆರವಣಿಗೆ ನಡೆಸಿರುವ ಅಮಾನವೀಯ ಘಟನೆ ಜಾರ್ಖಂಡ್ ರಾಜ್ಯದ ಸಾಹಿಬ್‍ಗಂಜ್ ಜಿಲ್ಲೆಯ ಎಂಜಿಆರ್ ರೈಲ್ವೇಲೈನ್ ಗ್ರಾಮದಲ್ಲಿ ನಡೆದಿದೆ. ಮೆರವಣಿಗೆ ಎಲ್ಲ ದೃಶ್ಯಗಳನ್ನು ಗ್ರಾಮಸ್ಥರ ಮೊಬೈಲ್ ಗಳಲ್ಲಿ ಸೆರೆಯಾಗಿದ್ದು, ಸ್ಥಳೀಯ ಮಟ್ಟದಲ್ಲಿ ವೈರಲ್ ಆಗಿದೆ.
ಬಾಕುಡಿ ಗ್ರಾಮದ ವಿವಾಹಿತ ಮಹಿಳೆ ಸಂಬಂಧಿಯೊಬ್ಬರ ಮನೆಯಲ್ಲಿದ್ದಳು. ಮದುವೆಯಾಗಿದ್ದರೂ ಯುವಕನೊಬ್ಬನ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ಎಂಜಿಆರ್ ರೈಲ್ವೇಲೈನ್ ಗ್ರಾಮದ ಮನೆಯೊಂದರಲ್ಲಿ ಇಬ್ಬರು ಸರಸ ಸಲ್ಲಾಪದಲ್ಲಿ ತೊಡಗಿದ್ದ ವೇಳೆ ಗ್ರಾಮಸ್ಥರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಜೋಡಿಯನ್ನ ಗ್ರಾಮದ ಕೇಂದ್ರಭಾಗಕ್ಕೆ ಕರೆ ತಂದು ವಿವಸ್ತ್ರಗೊಳಿಸಿ, ಕೊರಳಿಗೆ ಚಪ್ಪಲಿಗೆ ಹಾರ ಹಾಕಿ ಮೆರವಣಿಗೆ ಮಾಡಿ, ಥಳಿಸಿದ್ದಾರೆ. ಕೊನೆಗೆ ಯುವಕನ ಕುಟುಂಬಸ್ಥರನ್ನು ಕರೆಸಿ ಮಾಹಿತಿ ನೀಡಿದ್ದಾರೆ. ಕುಟುಂಬಸ್ಥರ ಸಮ್ಮುಖದಲ್ಲಿ ಪಂಚಾಯ್ತಿ ನಡೆಸಿ ಯುವಕನ ಕುಟುಂಬಕ್ಕೆ 5 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ.
ಘಟನೆಯ ಮಾಹಿತಿ ತಿಳಿಯತ್ತಿದ್ದಂತೆ ಸ್ಥಳಕ್ಕೆ ಎಸ್‍ಡಿಪಿಐ ಪ್ರಮೋದ್ ಕುಮಾರ್ ಮಿಶ್ರಾ ನೇತೃತ್ವದಲ್ಲಿ ರಾಂಗಾ, ಬರಹರವಾ, ರಾಧಾ ಮತ್ತು ಬರ್ಹೆಟ್ ಠಾಣೆಯ ಪೊಲೀಸರು ಹೋಗಿದ್ದಾರೆ. ಹಲ್ಲೆಗೊಳಗಾಗುತ್ತಿದ್ದ ಜೋಡಿಯನ್ನು ರಕ್ಷಿಸಿ ಠಾಣೆಗೆ ಕರೆತಂದಿದ್ದಾರೆ. ಗ್ರಾಮದಲ್ಲಿ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಪೊಲೀಸರನ್ನು ನಿಯೋಜಿಸಲಾಗಿದೆ. ಹಲ್ಲೆಗೆ ಸಂಬಂಧಿಸಿದಂತೆ ಪೊಲೀಸರು ಇದುವರೆಗೂ ಯಾರನ್ನು ಬಂಧಿಸಿಲ್ಲ.