ಸರಳವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಡ್ಯಾನಿಶ್ ಸೇಠ್

Public TV
1 Min Read
DANISH SAIT 3

ಬೆಂಗಳೂರು: ಕಾಮಿಡಿಯನ್ ಮತ್ತು ನಟ ಡ್ಯಾನಿಶ್ ಸೇಠ್ ಅನ್ಯಾ ರಂಗಸ್ವಾಮಿ ಜೊತೆ ಸಿಂಪಲ್ ಆಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ಇಂಡಿಯನ್ ಪ್ರಿಮಿಯರ್ ಲೀಗ್ ಪಂದ್ಯದ ವೇಳೆ ಆರ್​ಸಿಬಿ ತಂಡದ ಜೊತೆ ಇದ್ದು, ಕ್ರಿಕೆಟಿಗರ ಕಾಲೆಳೆಯುತ್ತ ಅಭಿಮಾನಿಗಳಿಗೆ ನಗುವಿನ ಕಚಗುಳಿ ನೀಡುವ ಮೂಲಕ ಕನ್ನಡಿಗರ ಮನಗೆದ್ದಿದ್ದ ಡ್ಯಾನಿಶ್ ಸೇಠ್ ತಮ್ಮ ಬಹುಕಾಲದ ಗೆಳತಿ ಕೈ ಹಿಡಿದಿದ್ದಾರೆ.

DANISH SAIT 2 medium

ಸದ್ಯ ವಿವಾಹದ ಫೋಟೋವನ್ನು ಡ್ಯಾನಿಶ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಫೋಟೋದಲ್ಲಿ ಡ್ಯಾನಿಶ್ ಹಾಗೂ ಅನ್ಯಾ ರಂಗಸ್ವಾಮಿ ಆಡಂಬರದ ಮದುವೆಗೆ ಬ್ರೇಕ್ ಹಾಕಿ ಕೊರೊನಾ ಮಧ್ಯೆ ಬಹಳ ಸರಳವಾಗಿ ರಿಜಿಸ್ಟರ್ ಮ್ಯಾರೇಜ್ ಆಗಿರುವುದನ್ನು ಕಾಣಬಹುದಾಗಿದೆ. ಇನ್ನೂ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ಡ್ಯಾನಿಶ್ ಅಭಿಮಾನಿಗಳು ಸೇರಿದಂತೆ ಅನೇಕ ಸೆಲೆಬ್ರೆಟಿಗಳು ಶುಭ ಹಾರೈಸುತ್ತಿದ್ದಾರೆ.

DANISH SAIT 1 medium

ಫೋಟೋ ಜೊತೆಗೆ ಡ್ಯಾನಿಶ್, ನಾನು ಮತ್ತು ಅನ್ಯಾ ನಿನ್ನೆ ನಮ್ಮ ಕುಟುಂಬದವರು ಹಾಗೂ ಆಪ್ತರು ಎಂದೆನೆಸಿಕೊಂಡಿರುವ 15 ಜನರ ಸಮ್ಮುಖದಲ್ಲಿ ಉಂಗುರವನ್ನು ಬದಲಾಯಿಸಿಕೊಂಡಿದ್ದೇವೆ. ಜೂನ್ 9ರಂದು ಮದುವೆ ನೋಂದಣಿ ಮಾಡಿಕೊಂಡಿದ್ದೇವೆ. ನಮ್ಮ ಪ್ರೀತಿಯ ಪ್ರಯಾಣವನ್ನು ಒಟ್ಟಿಗೆ ಆರಂಭಿಸಿದ್ದೇವೆ. ದಯವಿಟ್ಟು ನಿಮ್ಮ ಪ್ರೀತಿ ಮತ್ತು ಆಶೀರ್ವಾದ ನಮ್ಮ ಮೇಲೆ ಇರಲಿ ಎಂದು ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದ್ದಾರೆ.

FotoJet 34 medium

2018ರಲ್ಲಿ ಡ್ಯಾನಿಶ್ ಸೇಠ್ ಕನ್ನಡದ ಹಂಬಲ್ ಪೊಲಿಟಿಷಿಯನ್ ನಾಗರಾಜ್ ಸಿನಿಮಾದಲ್ಲಿ ಅಭಿನಯಿಸಿದ್ದರು. ಕಳೆದ ವರ್ಷಫ್ರೆಂಚ್ ಬಿರಿಯಾನಿ ಸಿನಿಮಾದಲ್ಲಿ ನಟಿಸುವ ಮೂಲಕ ಪ್ರೇಕ್ಷಕರನ್ನು ಹಾಸ್ಯದ ಹೊನಲಿನಲ್ಲಿ ತೇಲಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *