ಮುಂಬೈ: ಹನಿಮೂನ್ ಪ್ರವಾಸಕ್ಕೆ ಮಾಲ್ಡೀವ್ಸ್ ಗೆ ಹೋಗಿರುವ ನಟಿ ಕಾಜಲ್ ಅಗರ್ ವಾಲ್ ಸ್ಕೂಬಾ ಡೈವಿಂಗ್ ಮಾಡುವ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಕಳೆದ ಅಕ್ಟೋಬರ್ 30 ರಂದು ಗೌತಮ್ ಕಿಚ್ಲು ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟಿ ಕಾಜಲ್ ಅಗರ್ ವಾಲ್ ಮಾಲ್ಡೀವ್ಸ್ ನಲ್ಲಿ ಸಖತ್ ಎಂಜಾಯ್ ಮಾಡುತ್ತಿರುವ ಫೋಟೋಗಳನ್ನ ಹಂಚಿಕೊಳ್ಳುತ್ತಿದ್ದಾರೆ.
ನನಗೆ ಸಾಗರವೆಂದರೆ ಇಷ್ಟ. ನಾನು ನೀರನ್ನು ಯಾವಾಗಲೂ ಇಷ್ಟ ಪಡುತ್ತೇನೆ. ಶಾಂತಿ, ನೆಮ್ಮದಿಯಿದೆ ಎಂದು ಕಾಜಲ್ ಬರೆದುಕೊಂಡು ಫೋಟೋಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸಮುದ್ರದಾಳದಲ್ಲಿ ಗಂಡನ ಜೊತೆ ಸ್ಕೂಬಾ ಡೈವಿಂಗ್ ಮಾಡಿರುವ ಕಾಜಲ್ ಫೋಟೋಗಳು ಸಖತ್ ವೈರಲ್ ಆಗುತ್ತಿವೆ.
ಮದುವೆ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟೀವ್ ಆಗಿರುವ ಕಾಜಲ್ ಅಗರ್ ವಾಲ್ ಒಂದರ ಹಿಂದೆ ಒಂದರಂತೆ ಫೋಟೋಗಳನ್ನು ಶೇರ್ ಮಾಡುತ್ತಿದ್ದಾರೆ. ಕಾಜಲ್ ಅಗರ್ವಾಲ್ ತಮ್ಮ ಸಂತೋಷ ಕ್ಷಣದ ಪ್ರತಿಯೊಂದು ಫೋಟೋವನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ಇದೀಗ ಹನಿಮೂನ್ ಗೆಂದು ಮಾಲ್ಡೀವ್ಸ್ ಗೆ ತೆರಳಿದ್ದಾರೆ. ಪತಿ ಜೊತೆಗೆ ಸಮುದ್ರದಾಳದಲ್ಲಿ ಕ್ಯಾಮೆರಾಗೆ ಪೋಸ್ ನೀಡಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.