ಉಡುಪಿ: ಮೀನು ಲೋಡ್ ಮಾಡಲು ಬಂದರಿಗೆ ಬಂದ ಗೂಡ್ಸ್ ಟೆಂಪೋ ನೀರಿನೊಳಗೆ ಬಿದ್ದ ಘಟನೆ ಉಡುಪಿಯ ಮಲ್ಪೆಯಲ್ಲಿ ನಡೆದಿದೆ.
ಅರಬ್ಬಿ ಸಮುದ್ರದಲ್ಲಿ ಹಿಡಿದ ಮೀನನ್ನು ಮಲ್ಪೆ ಬಂದರಿನಲ್ಲಿ ಖಾಲಿ ಮಾಡಲಾಗುತ್ತದೆ. ಬೋಟ್‍ಗಳು ಲಂಗರು ಹಾಕುವ ಪಕ್ಕದಲ್ಲೇ ಗೂಡ್ಸ್ ಟೆಂಪೋ ತಂದು ನಿಲ್ಲಿಸಿ ಮೀನು ಖಾಲಿ ಮಾಡಲಾಗುತ್ತದೆ. ಎಂದಿನಂತೆ ಈ ಪ್ರಕ್ರಿಯೆ ನಡೆಯುತ್ತಿದ್ದಾಗ ನೀರಿನಲ್ಲಿ ಇದ್ದ ಬೋಟು ನಿಧಾನಕ್ಕೆ ಹಿಂದಕ್ಕೆ ಬಂದಿದೆ.
Advertisement
Advertisement
ಮೀನು ಖಾಲಿ ಮಾಡುವ ಸಂದರ್ಭ ಗೂಡ್ಸ್ ಟೆಂಪೋವನ್ನು ಬೋಟಿಗೆ ಸಿಕ್ಕಿಸಲಾಗಿತ್ತು. ಟೆಂಪೋ ಹಿಂದಕ್ಕೆ ಹೋಗಿ, ನೀರಿಗೆ ಬಿದ್ದಿದೆ. ಅಲ್ಲದೇ ಟೆಂಪೋ ಸಂಪೂರ್ಣವಾಗಿ ಮುಳುಗಿದೆ. ಮುಳುಗಿದ್ದ ಟೆಂಪೋವನ್ನು ಕ್ರೇನ್‌ಗೆ ಸರಪಳಿಯಲ್ಲಿ ಕಟ್ಟಿ ಮೇಲಕ್ಕೆತ್ತಲಾಗಿದೆ.
Advertisement
ವಿಠ್ಠಲ ಪೂಜಾರಿ ಎಂಬವರಿಗೆ ಸೇರಿದ ಟೆಂಪೋ ಇದಾಗಿದ್ದು, ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಟೆಂಪೋದ ಎಂಜಿನ್ ಒಳಗೆ ನೀರು ಹೋಗಿದ್ದು, ಸಾವಿರಾರು ರೂಪಾಯಿ ನಷ್ಟವಾಗಿದೆ.