ಸಮಾಜಕ್ಕೆ ತುಡಿಯುವ, ಮಿಡಿಯುವ ಹೃದಯವಂತ ಸೋಮಶೇಖರ್ – ಶಿವಮೂರ್ತಿ ಮುರುಘಾ ಶರಣರಿಂದ ಶ್ಲಾಘನೆ

Public TV
5 Min Read
muruga shree somashekar 3 e1621861799415

– ಕೊರೊನಾವನ್ನು ಮುಚ್ಚಿಡಬೇಡಿ; ಸಚಿವ ಸೋಮಶೇಖರ್ ಕಿವಿಮಾತು
– ಕೋವಿಡ್ ಮಾಹಿತಿಗೆ ಟ್ರಯಾಜ್ ಸೆಂಟರ್: ಎಸ್ ಟಿ ಎಸ್
– ನಾವು.. ನಾವು ಎಂಬ ಎಸ್ ಟಿ ಎಸ್ ಸೇವೆ ಶ್ಲಾಘನೀಯ: ಶ್ರೀ ಶ್ರೀ ರವಿಶಂಕರ್ ಗುರೂಜಿ

ಬೆಂಗಳೂರು: ಇಂದು ಸಹಾಯಪಡೆದುಕೊಳ್ಳುವವರ ಸಂಖ್ಯೆ ಹೆಚ್ಚಿದ್ದು, ಸಹಾಯ ಮಾಡುವವರ ಸಂಖ್ಯೆ ಕಡಿಮೆ ಇದೆ. ಇದು ಕೊರೋನಾ ಸಂದಿಗ್ದ ಕಾಲವಾಗಿದ್ದು, ಸ್ಪಂದನೆಯನ್ನು ನೀಡುವಂತಹ ಕಾಲವಾಗಿದೆ. ಇಂಥ ಸಂದರ್ಭದಲ್ಲಿ ತಮ್ಮ ಕ್ಷೇತ್ರದಲ್ಲಿ ಮೃತಪಟ್ಟ ಕುಟುಂಬದವರಿಗೆ 1 ಲಕ್ಷ ರೂಪಾಯಿ ವೈಯಕ್ತಿಕ ನೆರವು ನೀಡುತ್ತಿರುವ ಕ್ರಮ ಮಾದರಿಯಾಗಿದೆ ಎಂದು ಚಿತ್ರದುರ್ಗದ ಮುರುಘಾ ಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಡಾ. ಶಿವಮೂರ್ತಿ ಮುರುಘಾ ಶರಣರು ಸ್ವಾಮೀಜಿ ರವರು ಹೇಳಿದರು.

ಯಶವಂತಪುರ ವಿಧಾನಸಭಾ ಕ್ಷೇತ್ರದ ಉಲ್ಲಾಳು ವಾರ್ಡ್‍ನಲ್ಲಿ ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಸಹಕಾರ ಸಚಿವರಾದ ಶ್ರೀ ಎಸ್.ಟಿ. ಸೋಮಶೇಖರ್ ಅವರು ಕೋವಿಡ್ 19ರಿಂದ ಮೃತಪಟ್ಟವರ 27 ಕುಟುಂಬದವರಿಗೆ ವೈಯಕ್ತಿಕವಾಗಿ ಕೊಡಮಾಡುವ 1 ಲಕ್ಷ ರೂಪಾಯಿ ಸಹಾಯಧನ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸ್ವಾಮೀಜಿಯವರು ಮಾತನಾಡಿ, ಸಚಿವರಾದ ಸೋಮಶೇಖರ್ ಅವರದ್ದು, ಸಮಾಜಕ್ಕೆ ತುಡಿಯುವಂತಹ ಹಾಗೂ ಮಿಡಿಯುವಂತಹ ಹೃದಯ ಎಂದು ಬಣ್ಣಿಸಿದರು.

muruga shree somashekar 2

ಸೋಮಶೇಖರ್ ಅವರು ಸಚಿವರಾಗುವ ಮೊದಲಿನಿಂದಲೇ ಸಾಮಾಜಿಕ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹತ್ತು ವರ್ಷಗಳ ಹಿಂದಿನಿಂದಲೂ ಸಾಮೂಹಿಕ ವಿವಾಹಗಳಂತಹ ಕಾರ್ಯಕ್ರಮಗಳನ್ನು ಆಯೋಜಿಸಿ ತಮ್ಮನ್ನು ಚಾಲನೆಗೆ ಕರೆಸಿಕೊಳ್ಳುತ್ತಿದ್ದರು. ಇಂತಹ ಸಮಾಜಮುಖಿ ಗುಣ ಇರುವ ಅವರದ್ದು ಸೇವಾ ಮನೋಭಾವ ಎಂದು ಸ್ವಾಮೀಜಿಗಳು ಶ್ಲಾಘನೆ ವ್ಯಕ್ತಪಡಿಸಿದರು.

ಯಾರೂ ಸಹ ಖಿನ್ನತೆಗೊಳಗಾಬಾರದು. ಆದರೆ, ಇಂದು ಕೊರೋನಾ ರೋಗಕ್ಕಿಂತ ಭಯಕ್ಕೆ ಮೃತಪಡುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಭಯವನ್ನು ಇಟ್ಟುಕೊಂಡವರು ಬದುಕನ್ನು ಕಳೆದುಕೊಳ್ಳುತ್ತಾರೆ. ಎಲ್ಲರೂ ತಮ್ಮಲ್ಲಿರುವ ಶಿಕ್ಷಣ, ಹಣ, ಅಂತಸ್ತು ಸೇರಿದಂತೆ ಯಾವುದೇ ಇದ್ದರೂ ಸರಿ, ಅವುಗಳಲ್ಲಿ ಒಂದನ್ನು ಬಳಸಿಕೊಂಡು ಪ್ರಾಣವನ್ನು ಉಳಿಸಿಕೊಂಡರೆ ಸಾಕು. ಮಾನವ ಎಲ್ಲವನ್ನೂ ಸಂಪಾದಿಸಿಕೊಳ್ಳಬಹುದು. ಆದರೆ, ನಮ್ಮ ಪ್ರಾಣವಿದ್ದರೆ ಮಾತ್ರ. ನಮ್ಮ ಪ್ರಾಣವನ್ನು ನಾವೇ ಉಳಿಸಿಕೊಂಡು ಬೇರೆಯವರ ಪ್ರಾಣವನ್ನು ಉಳಿಸುವ ಕೆಲಸ ಮಾಡಬೇಕು ಎಂದು ಸ್ವಾಮೀಜಿಗಳು ತಿಳಿಸಿದರು.

muruga shree somashekar 1

ಮೊದಲನೇ ಅಲೆಗಿಂತ ಎರಡನೇ ಅಲೆ ಭೀಕರವಾಗಿದೆ. ಇದಕ್ಕಾಗಿ ಜನತೆ ಜಾಗ್ರತೆ ವಹಿಸಬೇಕು. ಅಲ್ಲದೆ, ಕೇಂದ್ರ ಸರ್ಕಾರದ ಮುಂದಾಳತ್ವದಲ್ಲಿ ಕಂಡುಹಿಡಿಯಲಾದ ಕೊರೋನಾ ಲಸಿಕೆಯನ್ನು ಎಲ್ಲರೂ ಪಡೆದುಕೊಳ್ಳುವ ಮುಖಾಂತರ ಕೊರೋನಾವನ್ನು ಜಯಿಸಬೇಕು. ಲಸಿಕೆಯನ್ನು ಹಾಕಿಸಿಕೊಂಡರೆ ಏನಾಗುತ್ತದೆ ಎಂಬ ಭಯ ಬೇಡ. ಹೀಗೆ ಮಾಡುವವರಿಗೆ ಹೆಚ್ಚಾಗಿ ಸೋಂಕು ತಗುಲುತ್ತಿದೆ. ಹೀಗಾಗಿ ಎಲ್ಲರೂ ಎಚ್ಚರಿಕೆ ವಹಿಸಬೇಕಿದೆ. ಈ ನಿಟ್ಟಿನಲ್ಲಿ ತಾವು ಸಹ ಲಸಿಕೆಯನ್ನು ಹಾಕಿಸಿಕೊಂಡಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಲಸಿಕೆ ಹಾಕಿಸಿಕೊಳ್ಳುವ ಮುಂಚೆಯೇ ಹಾಕಿಸಿಕೊಂಡಿದ್ದಾಗಿ ಸ್ವಾಮೀಜಿಗಳು ತಿಳಿಸಿದರು.

ಮುಕ್ತ ಶಿಕ್ಷಣ :
ಚಿತ್ರದುರ್ಗದಲ್ಲಿ ಶ್ರೀಮಠದ ಆಸ್ಪತ್ರೆಯಲ್ಲಿ ಕೊರೋನಾ ರೋಗಿಗಳಿಗಾಗಿಯೇ 200 ಬೆಡ್ ಗಳನ್ನು ಬಿಟ್ಟುಕೊಟ್ಟಿದ್ದೇವೆ. ಅನಾಥಾಶ್ರಮ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ನಮ್ಮ ಚಿತ್ರದುರ್ಗ ಮಠ ಹಮ್ಮಿಕೊಳ್ಳುತ್ತಿದ್ದು, ಕೋವಿಡ್ ನಿಂದ ಮೃತಪಟ್ಟವರ ಕುಟುಂಬದ ಮಕ್ಕಳಿಗೆ ಸಹ ಮುಕ್ತವಾಗಿ ಶಿಕ್ಷಣವನ್ನು ಶ್ರೀಮಠ ಕೊಡಲಿದೆ ಎಂದು ಸ್ವಾಮೀಜಿಯವರು ತಿಳಿಸಿದರು.

somashekar ravishankar guruji

ಕೊರೋನಾವನ್ನು ಮುಚ್ಚಿಡಬೇಡಿ:
ಕೊರೋನಾ ಬಂದರೆ ಹೇಳಿಕೊಳ್ಳಲು ನಾಚಿಕೆ ಪಡುವ ಸನ್ನಿವೇಶಗಳು ಬಂದಿದೆ. ಜನರು ಭಯಪಡುತ್ತಿದ್ದು, ಮುಚ್ಚಿಡುತ್ತಿದ್ದಾರೆ. ನಾವು ಆಹಾರ ಕಿಟ್ ಗಳನ್ನು ಕೊಡಲು ಹೋದಂತಹ ಸಂದರ್ಭದಲ್ಲಿ ಇಂತಹ ಪ್ರಕರಣಗಳು ಬೆಳಕಿಗೆ ಬಂದಿದೆ. ಅಕ್ಕಪಕ್ಕದವರಿಗೆ ಗೊತ್ತಾದರೆ ಎಂಬ ಆತಂಕವನ್ನು ಹೊಂದಿದ್ದಾರೆ. ಆದರೆ, ಯಾವುದೇ ಕಾರಣಕ್ಕೂ ಆ ಆತಂಕ ಬೇಡ. ಕೊರೋನಾ ಇಡೀ ವಿಶ್ವಕ್ಕೇ ಆವರಿಸಿದೆ. ಹೀಗಾಗಿ ಧೈರ್ಯದಿಂದ ಚಿಕಿತ್ಸೆ ಪಡೆದು ಗುಣಮುಖರಾಗಿ ಎಂದು ಯಶವಂತಪುರ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಸಹಕಾರ ಸಚಿವರಾದ ಶ್ರೀ ಎಸ್.ಟಿ. ಸೋಮಶೇಖರ್ ಅವರು ತಿಳಿಸಿದರು.

ಟ್ರಯಾಜ್ ಸೆಂಟರ್:
ಚೆನ್ನೇನಹಳ್ಳಿಯಲ್ಲಿ ಕೋವಿಡ್ ಕೇರ್ ಸೆಂಟರ್ ಮಾಡಿ ಸುಮಾರು 100 ಬೆಡ್ ಗಳ ವ್ಯವಸ್ಥೆ ಮಾಡಿದ್ದೇವೆ. ಜ್ಞಾನಭಾರತಿ ಕೋವಿಡ್ ಕೇರ್ ಸೆಂಟರ್ ನಲ್ಲಿ ಸುಮಾರು 370 ಬೆಡ್ ಗಳನ್ನು ವ್ಯವಸ್ಥೆ ಮಾಡಲಾಗಿದೆ. ಇದರಲ್ಲಿ 45 ಆಕ್ಸಿಜನ್ ಕಾನ್ಸಂಟ್ರೇಟರ್ ಗಳಿವೆ. ಕೆಂಗೇರಿ ಮತ್ತು ಹೇರೋಹಳ್ಳಿಯಲ್ಲಿ ಟ್ರಯಾಜ್ ಸೆಂಟರ್ ಗಳನ್ನು ತೆರೆಯಲಾಗಿದೆ. ಇಲ್ಲಿ ಪಾಸಿಟಿವ್ ಬಂದವರು ತಕ್ಷಣ ಭೇಟಿ ಕೊಟ್ಟರೆ, ಯಾವ ಪ್ರಮಾಣದಲ್ಲಿ ಸೋಂಕಿದೆ, ಚಿಕಿತ್ಸೆಯನ್ನು ಮನೆಯಲ್ಲಿ ತೆಗೆದುಕೊಳ್ಳಬೇಕಾ? ಕೋವಿಡ್ ಕೇರ್ ಸೆಂಟರ್ ಗೆ ಸೇರಿಸಬೇಕಾ? ಇಲ್ಲವೇ ಆಸ್ಪತ್ರೆಗೆ ದಾಖಲಿಸಬೇಕಾ ಎಂಬ ಬಗ್ಗೆ ತಿಳಿಸಿಕೊಡುತ್ತಾರೆ ಎಂದು ಸಚಿವರಾದ ಸೋಮಶೇಖರ್ ತಿಳಿಸಿದರು.

ನೀವಿದ್ದಲ್ಲಿಗೆ ಸೌಲಭ್ಯ:
ಪಾಸಿಟಿವ್ ಬಂದವರು ಕೋವಿಡ್ ಕೇರ್ ಸೆಂಟರ್ ಗೆ ಮುಕ್ತವಾಗಿ ಪ್ರವೇಶ ಪಡೆಯಬಹುದಾಗಿದ್ದು, ಯಾವುದೇ ಪ್ರಭಾವವನ್ನು ಬಳಸುವುದ ಸಹ ಬೇಡ. ಅಲ್ಲಿಗೆ ನೇರವಾಗಿ ಹೋಗಿ ದಾಖಲಾದರೆ, 10 ದಿನಗಳ ಕಾಲ ಅಗತ್ಯ ಔಷೋಧಪಾರಗಳು ಲಭ್ಯವಾಗಿ ಗುಣಮುಖರಾಗಿ ಹಿಂದಿರುಗಬಹುದು. ಇನ್ನು ಹೋಂ ಐಸೋಲೇಶನ್ ನಲ್ಲಿರುವವರು, ಆಸ್ಪತ್ರೆಗಳಿಗೆ ದಾಖಲಿದ್ದರೆ ತಮಗೆ ಮಾಹಿತಿ ನೀಡಿದರೆ ಮನೆಗೆ ಆಹಾರ ಕಿಟ್ ಗಳನ್ನು ತಂದುಕೊಡಲಾಗುವುದು. ಆಸ್ಪತ್ರೆಗಳಿಗೆ ಅಗತ್ಯತೆಗಳನ್ನು ಪೂರೈಸಲಾಗುವುದು ಎಂದು ಸಚಿವರಾದ ಎಸ್ ಟಿ ಎಸ್ ತಿಳಿಸಿದರು.

somashekar ravishankar guruji 2

ಯಾರೂ ಭಯ ಪಡಬೇಡಿ:
ತಾವು ನಮ್ಮ ಕ್ಷೇತ್ರಕ್ಕೆ ಬಂದು ಜನತೆಗೆ ಸಂದೇಶವನ್ನು ಕೊಡಬೇಕು. ಆ ಮೂಲಕ ಕೊರೋನಾ ಬಗ್ಗೆ ಧೈರ್ಯವನ್ನು ಹೇಳಬೇಕು ಎಂಬ ನಿಟ್ಟಿನಲ್ಲಿ ಕೋರಿಕೊಂಡಿದ್ದೆ. ಈ ಹಿನ್ನೆಲೆಯಲ್ಲಿ ಅವರು ಇಲ್ಲಿಗೆ ಆಗಮಿಸಿ ಜನತೆಗೆ ಆತ್ಮಸ್ಥೈರ್ಯವನ್ನು ತುಂಬುವ ಕೆಲಸವನ್ನು ಮಾಡಿದ್ದಾರೆ. ಹೀಗಾಗಿ ಯಾರೂ ಸಹ ಭಯಗೊಳ್ಳಬೇಡಿ ಎಂದು ಸಚಿವರು ತಿಳಿಸಿದರು.

ಜೊತೆಗಿದ್ದವರೇ ಇರುತ್ತಿಲ್ಲ:
ನನ್ನ ಜೊತೆಗೆ 10-20 ವರ್ಷಗಳಿಂದ ಕೆಲಸ ಮಾಡಿದ ಅನೇಕ ಆಪ್ತರು ಕೋವಿಡ್ ಗೆ ಬಲಿಯಾಗುತ್ತಿದ್ದಾರೆ. ಹಿಂದಿನ ದಿನ ರಾತ್ರಿ ಕರೆ ಮಾಡಿ ಗುಣಮುಖನಾಗಿದ್ದೇನೆ. ಅನ್ನುವವರು ಮರುದಿನ ಇರುವುದಿಲ್ಲ. ಇದು ನನ್ನನ್ನು ಆತಂಕಕ್ಕೆ ದೂಡಿದೆ. ಹೀಗಾಗಿ ನನ್ನ ಕ್ಷೇತ್ರದ ಜನರಿಗೆ ಕೈಲಾದಷ್ಟು ಸಹಾಯವನ್ನು ಮಾಡುವ ಮೂಲಕ ಅವರಿಗೆ ಸ್ಪಂದಿಸುವ ಕೆಲಸವನ್ನು ನಾನು ಮಾಡುತ್ತಿದ್ದೇನೆ ಎಂದು ಸಚಿವರಾದ ಎಸ್.ಟಿ. ಸೋಮಶೇಖರ್ ತಿಳಿಸಿದರು.

ಎಸ್‍ಟಿಎಸ್ ಸೇವೆ ಶ್ಲಾಘನೀಯ: ರವಿಶಂಕರ್ ಗುರೂಜಿ
ನಾನು.. ನಾನು ಎಂದು ಕುಳಿತುಕೊಳ್ಳದೆ, ನಾವು.. ನಾವು ಎಂದು ನಾವುಗಳು ಬದುಕಬೇಕಿದೆ. ಈ ನಿಟ್ಟಿನಲ್ಲಿ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ನಿರ್ವಹಿಸುತ್ತಿರುವ ಕಾರ್ಯ ಶ್ಲಾಘನೀಯ ಎಂದು ಆರ್ಟ್ ಆಫ್ ಲಿವಿಂಗ್‍ನ ಶ್ರೀ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರು ತಿಳಿಸಿದರು.

somashekar ravishankar guruji 1

ಕಗ್ಗಲೀಪುರ ಗ್ರಾಮ ಪಂಚಾಯಿತಿ ಮತ್ತು ಅಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಶಾಸಕರು ಹಾಗೂ ಸಹಕಾರ ಸಚಿವರಾದ ಶ್ರೀ ಎಸ್.ಟಿ. ಸೋಮಶೇಖರ್ ಅವರು ಕೋವಿಡ್ 19ರಿಂದ ಮೃತಪಟ್ಟವರ 20 ಕುಟುಂಬದವರಿಗೆ ವೈಯಕ್ತಿಕವಾಗಿ ನೀಡಲಿರುವ 1 ಲಕ್ಷ ರೂಪಾಯಿ ಸಹಾಯಧನ ವಿತರಣಾ ಕಾರ್ಯಕ್ರಮಕ್ಕೆ ಶ್ರೀ ರವಿಶಂಕರ್ ಗುರೂಜಿ ಅವರು ಚಾಲನೆ ನೀಡಿ ಮಾತನಾಡಿದರು.

ನಮ್ಮ ದೇಶಕ್ಕೆ ಎಷ್ಟೋ ಕಷ್ಟಗಳು ಎದುರಾಗಿವೆ. ಈಗ ಬಂದಿರುವ ಕಷ್ಟ ನಮ್ಮ ದೇಶಕ್ಕೆ ಮಾತ್ರವಲ್ಲಿ ಇಡೀ ಪ್ರಪಂಚಕ್ಕೆ ಎದುರಾಗಿದೆ. ಶರೀರವನ್ನು ಸ್ವಸ್ಥವಾಗಿಟ್ಟುಕೊಳ್ಳಬೇಕಿದ್ದು, ಮನೋಬಲವನ್ನು ಕಳೆದುಕೊಳ್ಳಬಾರದು. ಇದು ಸ್ವಾರ್ಥಕ್ಕೆ ಸಮಯವಲ್ಲ. ನಮ್ಮಿಂದ ಇನ್ನೊಬ್ಬರಿಗೆ ಎಷ್ಟು ಸಹಾಯ ಮಾಡಲು ಸಾಧ್ಯ ಎಂಬುದನ್ನು ನಾವು ನೋಡಬೇಕಿದೆ. ಹೀಗಾಗಿ ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕಿದೆ ಎಂದು ಶ್ರೀ ರವಿಶಂಕರ್ ಗುರೂಜಿ ಅವರು ತಿಳಿಸಿದರು.

ನಾವು ಎಲ್ಲದಕ್ಕೂ ಸರ್ಕಾರವನ್ನು ಬೈಯುವುದಲ್ಲ. ನಾವು ನಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸೋಣ. ನಾಡಿನ ಜನತೆ ಮುಂಜಾಗ್ರತೆಯನ್ನು ಪಡೆದುಕೊಂಡು, ಪಾಸಿಟಿವ್ ಬಂದ ತಕ್ಷಣ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕಿದೆ ಎಂದು ಶ್ರೀ ರವಿಶಂಕರ್ ಗುರೂಜಿಯವರು ಕಿವಿಮಾತು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *