ಚಾಮರಾಜನಗರ: ಜಿಲ್ಲೆಯ ಬಿ.ಆರ್.ಟಿ. ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿ ವೇಳೆ ಮೂರು ಹುಲಿಗಳು ಒಟ್ಟಾಗಿ ಹೆಜ್ಜೆ ಹಾಕುತ್ತಿರುವ ವೀಡಿಯೋವನ್ನು ಪ್ರವಾಸಿಗರು ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ.
ಚಾಮರಾಜನಗರ ಜಿಲ್ಲೆಯ ಬಿಳಿಗಿರಿರಂಗನಾಥ ಬೆಟ್ಟದ ಹುಲಿ ಸಂರಕ್ಷಿತ ಪ್ರದೇಶದಲ್ಲಿರುವ ಕೆ.ಗುಡಿ ಸಮೀಪದ ಆನೆಕೆರೆಯಲ್ಲಿ ಸಫಾರಿ ವೇಳೆ ಮೂರು ಹುಲಿಗಳ ದರ್ಶನದಿಂದ ಪ್ರವಾಸಿಗರು ಫುಲ್ ಫಿದಾ ಆಗಿದ್ದಾರೆ. ಮೂರು ಹುಲಿಗಳನ್ನು ಒಟ್ಟಿಗೆ ನೋಡಿದ ಪ್ರವಾಸಿಗರು ಸಂತೋಷ ಪಟ್ಟಿದ್ದಾರೆ.
ಬಿ.ಆರ್.ಟಿ. ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿಗಳ ಸಂತತಿ ಹೆಚ್ಚಾಗ್ತಿರೋ ಸಂಗತಿ ಹುಲಿಗಳ ದರ್ಶನದಿಂದ ತಿಳಿದು ಬಂದಿದೆ. ಕೆ.ಗುಡಿ ಸಫಾರಿ ರಸ್ತೆಯಲ್ಲಿ ರಾಜ ಗಾಂಭೀರ್ಯದಲ್ಲಿ ಮೂರು ಹುಲಿಗಳ ನಡಿಗೆ ಕಂಡು ಪ್ರವಾಸಿಗರು ಪುಳಕಿತರಾಗಿದ್ದಾರೆ.