– ಮೈಜುಂ ಎನಿಸುವ ವೀಡಿಯೋ
ಚಾಮರಾಜನಗರ: ಬಿಳಿಗಿರಿರಂಗನ ಬೆಟ್ಟದ ಹುಲಿ ಸಂರಕ್ಷಿತಾರಣ್ಯದಲ್ಲಿ ಸಫಾರಿಗೆ ತೆರಳಿದ್ದ ವೇಳೆ ಪ್ರವಾಸಿಗರ ಮೇಲೆ ಎರಡು ಆನೆ ದಾಳಿ ಮಾಡಿದ ಘಟನೆ ನಡೆದಿದೆ.
ಸಫಾರಿ ವಾಹನದ ಹಿಂದೆ ಒಂದು, ಮುಂದೆ ಒಂದು ಕಾಡಾನೆ ದಾಳಿ ಮಾಡಿದೆ. ಸಫಾರಿ ವಾಹನ ಚಾಲಕನ ಸಮಯ ಪ್ರಜ್ಞೆಯಿಂದ ಅನಾಹುತ ತಪ್ಪಿದೆ. ಈ ಆನೆ ದಾಳಿ ಮಾಡಿದ ವೀಡಿಯೋ ಎಂಥವರನ್ನು ಒಮ್ಮೆ ಮೈಜುಂ ಎನಿಸುತ್ತದೆ.
ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನ ಬೆಟ್ಟದ ಹುಲಿ ಸಂರಕ್ಷಿತಾರಣ್ಯದ ಕೆ.ಗುಡಿ ಸಫಾರಿ ಜೋನ್‍ನ ಭತ್ತದ ಗದ್ದೆ ಎಂಬಲ್ಲಿ ಸಫಾರಿಗೆ ಹೋಗಿದ್ದ ಪ್ರವಾಸಿಗರಿಗೆ ಎರಡು ಕಾಡಾನೆ ದಾಳಿ ಮಾಡಿವೆ. ಸಫಾರಿ ವಾಹನ ಚಾಲಕ ನಾಗರಾಜು ಆನೆ ದಾಳಿಗೆ ಅಂಜದೆ ನಿಧಾನವಾಗಿ ವಾಹನ ಚಲಾಯಿಸಿಕೊಂಡು ಬಂದು ಕಾಡಾನೆಗಳಿಂದ ತಪ್ಪಿಸಿಕೊಂಡಿದ್ದಾರೆ.
ಸಫಾರಿ ವಾಹನದ ಹಿಂದೆ,ಮುಂದೆ ಆನೆ ಅಟ್ಯಾಕ್ ಮಾಡಿದ್ದು, ಹೆದರದೆ ಮುಂದೆ ಬರುತ್ತಿದ್ದ ಆನೆಯನ್ನು ಹಿಮ್ಮೆಟ್ಟಿಸಿ ವಾಹನ ಚಲಾಯಿಸಿದ ನಾಗರಾಜು ಕರ್ತವ್ಯ ನಿರ್ವಹಣೆಗೆ ಪ್ರವಾಸಿಗರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಮ್ಮನ್ನ ನಂಬಿ ಸಫಾರಿಗೆ ಪ್ರವಾಸಿಗರು ಬರುತ್ತಾರೆ. ನಮ್ಮ ಪ್ರಾಣ ಹೋದರೂ ಕೂಡ ಪ್ರವಾಸಿಗರ ರಕ್ಷಣೆ ನಮ್ಮ ಹೊಣೆ ಎಂದು ಚಾಲಕ ನಾಗರಾಜು ಹೇಳಿದ್ದಾರೆ.