– ಬಿಜೆಪಿ ಸೇರ್ಪಡೆಯಾದ ಕಂಗನಾ ಕುಟುಂಬ
ಮುಂಬೈ: ಜನರು ಕಂಗನಾ ರಣಾವತ್ ಅವರನ್ನು ಬೆಂಬಲಿಸುತ್ತಿರುವುದನ್ನು ಕಂಡು ತುಂಬಾ ಸಂತೋಷವಾಯಿತು. ಸತ್ಯಕ್ಕಾಗಿ ಸರ್ಕಾರವನ್ನೇ ಎದರು ಹಾಕಿಕೊಂಡು ಅವಳು ಮಾಡುತ್ತಿರುವ ಹೋರಾಟವನ್ನು ಕಂಡು ಹೆಮ್ಮೆಯಾಗುತ್ತಿದೆ ಎಂದು ಬಾಲಿವುಡ್ ನಟಿ ಕಂಗನಾ ರಣಾವತ್ ತಾಯಿ ಆಶಾ ರಣಾವತ್ ಹಾಗೂ ತಂದೆ ಅಮರ್‍ದೀಪ್ ರಣಾವತ್ ಭಾವುಕರಾದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇವಲ ಜನರು ಮಾತ್ರವಲ್ಲ ಕರ್ಣಿ ಸೇನೆ ಹಾಗೂ ಬಿಜೆಪಿ ಸೇರಿ ಹಲವು ರಾಜಕೀಯ ಪಕ್ಷಗಳು ಸಹ ಕಂಗನಾ ರಣಾವತ್ ಅವರಿಗೆ ಬೆಂಬಲ ನೀಡುತ್ತಿರುವುದನ್ನು ಕಂಡು ಸಂತೋಷವಾಗುತ್ತಿದೆ. ಸತ್ಯಕ್ಕಾಗಿ ಹೋರಾಡುತ್ತಿರುವ ಮಗಳ ಕುರಿತು ಹೆಮ್ಮೆಯಿದೆ ಎಂದು ತಿಳಿಸಿದರು. ಇದನ್ನೂ ಓದಿ: ಕಂಗನಾ ಮನೆ, ಆಫೀಸ್ ಕೆಡವಿದ ಬಿಎಂಸಿ – ನನ್ನ ಮುಂಬೈ ಪಿಓಕೆ ಆಗಿದೆಯೆಂದ ನಟಿ
Advertisement
Advertisement
ದಶಕಗಳಿಂದ ನಮ್ಮ ಕುಟುಂಬ ಕಾಂಗ್ರೆಸ್‍ಗೆ ಬೆಂಬಲ ನೀಡುತ್ತಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ನಮಗೆ ತುಂಬಾ ಸಹಾಯ ಮಾಡಿದ್ದಾರೆ. ಹೀಗಾಗಿ ಅವರಿಗೆ ಕೃತಜ್ಞರಾಗಿದ್ದೇವೆ. ಹೀಗಾಗಿ ನಾವು ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತಿದ್ದೇವೆ ಎಂದು ಆಶಾ ರಣಾವತ್ ಘೋಷಿಸಿದ್ದಾರೆ.
Advertisement
ವಿಡಿಯೋ ನೋಡಿದ ಕಂಗನಾ ರಣಾವತ್ ಅವರು ತುಂಬಾ ಭಾವಕರಾಗಿದ್ದು, ರೀಟ್ವೀಟ್ ಮಾಡಿ, ಅವರು ನನ್ನ ಕಚೇರಿ ಧ್ವಂಸಗೊಳಿಸಿದಾಗ ಅಮ್ಮನ ಎಚ್ಚರಿಕೆ ನೀಡುತ್ತಿದ್ದ ಸಂದರ್ಭ ನನ್ನ ಕಣ್ಣ ಮುಂದೆ ಬಂತು. ಅಂದಿನಿಂದ ಅವಳ ಕರೆಗಳನ್ನು ನಾನು ಸ್ವೀಕರಿಸಿರಲಿಲ್ಲ. ಇದು ನನಗೆ ಒಂದು ಕ್ಷಣ ಕಣ್ಣ ಮುಂದೆ ಬಂದು ಹೋಯಿತು. ಇಡೀ ವಿಷಯವನ್ನು ಅವರು ಕೊಂಡೊಯ್ದ ರೀತಿ ತುಂಬಾ ಆಶ್ಚರ್ಯವಾಯಿತು ಎಂದು ಟ್ವೀಟ್‍ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಕಂಗನಾ ಕಟ್ಟಡ ನೆಲಸಮಕ್ಕೂ ಸರ್ಕಾರಕ್ಕೂ ಸಂಬಂಧವಿಲ್ಲ. ಕಂಗನಾ ಮೇಲೆ ವೈಯಕ್ತಿಕ ದ್ವೇಷವಿಲ್ಲ: ಶಿವಸೇನೆ
Advertisement
When they broke my office, mom’s warning face flashed before my eyes “ KAHA THA MAINE” haven’t taken her calls ever since, this just flashed on my timeline, pleasantly surprised by her refreshing take on this whole matter #KanganaVsUddhav https://t.co/jHnr46FKfd
— Kangana Ranaut (@KanganaTeam) September 10, 2020
ಕಂಗನಾ ರಣಾವತ್ ಅವರ ಕಚೇರಿಯನ್ನು ಧ್ವಂಸಗೊಳಿಸಿದ್ದಕ್ಕೆ ಬುಧವಾರವಷ್ಟೇ ಟ್ವೀಟ್ ಮಾಡಿದ್ದ ಆಶಾ ರಣಾವತ್, ಉದ್ಧವ್ ಠಾಕ್ರೆ ಇಂದು ನನ್ನ ಮಗಳು ಕಂಗನಾಳ ಕಚೇರಿಯನ್ನು ಮಾತ್ರ ನೀವು ಪುಡಿ ಮಾಡಿಲ್ಲ. ದಿವಂಗತ ಬಾಳಾ ಸಾಹೇಬ್ ಠಾಕ್ರೆಯವರ ಆತ್ಮವನ್ನು ಪುಡಿ ಮಾಡಿದ್ದೀರಿ ಎಂದು ಕಿಡಿ ಕಾರಿದ್ದರು.
ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಕಟ್ಟಡ ನೆಲಸಮಕ್ಕೆ ಸಂಬಂಧಿಸಿದ ಅರ್ಜಿ ವಿಚಾರಣೆಯನ್ನ ಬಾಂಬೆ ಹೈಕೋರ್ಟ್ ಸೆಪ್ಟೆಂಬರ್ 22ಕ್ಕೆ ಮುಂದೂಡಿದೆ. ಅರ್ಜಿ ವಿಚಾರಣೆ ಆರಂಭವಾಗುತ್ತಿದ್ದಂತೆ ಬಿಎಂಸಿ(ಬೃಹತ್ ಮುಂಬೈ ಕಾರ್ಪೋರೇಷನ್) ಪರ ವಕೀಲರು, ನ್ಯಾಯಾಲಯ ಬುಧವಾರ ಆದೇಶ ನೀಡಿದ ನಂತರ ಕಟ್ಟಡ ನೆಲಸಮ ಮಾಡುವ ಕೆಲಸಗಳನ್ನು ನಿಲ್ಲಿಸಲಾಗಿದೆ. ಆದ್ರೆ ಸದ್ಯವಿರುವ ಸ್ಥಿತಿಯಲ್ಲಿಯೇ ಕಟ್ಟಡವಿರುವಂತೆ ಇರಬೇಕು ಎಂದರು. ಇತ್ತ ಕಂಗನಾ ಪರ ವಕೀಲರಾದ ರಿಜ್ವಾನ್ ಸಿದ್ಧಿಕಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲ ದಾಖಲೆಗಳನ್ನ ಒಟ್ಟಾಗಿಸಬೇಕಿದೆ. ನನ್ನ ಕಕ್ಷಿದಾರರು ಬುಧವರ ಮುಂಬೈಗೆ ಆಗಮಿಸಿದ್ದಾರೆ. ಫೈಲ್ ಸಿದ್ಧ ಮಾಡಿಕೊಳ್ಳಲು ನ್ಯಾಯಾಲಯ ಸಮಯ ನೀಡಬೇಕು ಎಂದು ನ್ಯಾಯಾಲಯದ ಮುಂದೆ ಮನವಿ ಮಾಡಿಕೊಂಡರು.
ಕಂಗನಾ ಪರ ವಕೀಲರ ವಾದ ಪ್ರತಿವಾದ ಮಂಡಿಸಿದ ಬಿಎಂಸಿ ಪರ ವಕೀಲರು, ಸೋಮವಾರದೊಳಗೆ ತಮ್ಮ ಅರ್ಜಿಯಲ್ಲಿ ಕೆಲ ಬದಲಾವಣೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಹಾಗಾಗಿ ರಿಜ್ವಾನ್ ಸಿದ್ಧಿಕಿ, ಬದಲಾವಣೆ ಕುರಿತು ಪಿಸಿಶನ್ ಫೈಲ್ ಮಾಡಬೇಕು ಎಂದರು. ವಕೀಲ ಸಿದ್ಧಿಕಿ, ಕಂಗನಾ ವರ ಮನೆಗೆ ನೀರು ಮತ್ತು ವಿದ್ಯುತ್ ಸಂಪರ್ಕವಿಲ್ಲ ಎಂದರು. ಕೊನೆನೆಗೆ ನ್ಯಾಯಾಲಯದ ಅರ್ಜಿ ವಿಚಾರಣೆಯನ್ನ ಸೆ.22ಕ್ಕೆ ಮುಂದೂಡಿ, ಮುಂದಿನ ಆದೇಶದವರೆಗೂ ಕಟ್ಟಡ ನೆಲಸಮ ಮಾಡುವಂತಿಲ್ಲ ಎಂದು ನ್ಯಾಯಾಲಯ ಆದೇಶ ನೀಡಿದೆ. ಇದನ್ನೂ ಓದಿ:
ಕಟ್ಟಡದ ಒಳವಿನ್ಯಾಸ ನೆಲಸಮ ಬಳಿಕ ಇಂದು ತಮ್ಮ ಕಚೇರಿಗೆ ಕಂಗನಾ ಭೇಟಿ ನೀಡಿದ್ದರು. 10 ನಿಮಿಷ ಕಚೇರಿಯೊಳಗಿದ್ದ ಕಂಗನಾ ನಿರಾಶೆಗೊಂಡು ಹೊರ ಬಂದಿದ್ದರು. ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡದೇ ಕಾರ್ ಹತ್ತಿ ಹೊರಟರು. ಇದನ್ನೂ ಓದಿ: ಶಿವಸೇನೆ ಧಮ್ಕಿ -ನಟಿ ಕಂಗನಾ ರಣಾವತ್‍ಗೆ ವೈ ದರ್ಜೆಯ ಭದ್ರತೆ
ಇತ್ತ ಶಿವಸೇನೆಯ ಸಂಸದ ಸಂಜಯ್ ರಾವತ್, ಈ ಘಟನೆಗೂ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ಪಕ್ಷಕ್ಕೆ ಮತ್ತು ಕಂಗನಾಗೂ ಯಾವುದೇ ವೈಯಕ್ತಿಕ ದ್ವೇಷಗಳಿಲ್ಲ. ಬಿಎಂಸಿ ತನ್ನ ವ್ಯಾಪ್ತಿಯಲ್ಲಿ ಕೆಲಸ ಮಾಡುತ್ತದೆ ಎಂದು ಹೇಳುವ ಮೂಲಕ ಪಕ್ಷ ಮತ್ತು ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಕೇಳಿ ಬಂದ ಆರೋಪಗಳನ್ನು ತಳ್ಳಿ ಹಾಕಿದ್ದಾರೆ.
ಅಹಂಕಾರ ನೆಲಸಮ ಆಗುತ್ತೆ: ಬುಧವಾರ ಮುಂಬೈಗೆ ವೈ ದರ್ಜೆಯಲ್ಲಿ ಬಂದಿಳಿದ ಕಂಗನಾ ರಣಾವತ್ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದರು. ಉದ್ಧವ್ ಠಾಕ್ರೆ ಫಿಲಂ ಮಾಫಿಯಾ ಜೊತೆ ಶಾಮೀಲಾಗಿ ಮನೆ ನಾಶ ಮಾಡಿ ನನ್ನ ವಿರುದ್ಧ ಸೇಡು ತೀರಿಸಿಕೊಂಡೆ ಎಂದು ತಿಳಿದುಕೊಂಡಿದ್ದೀಯಾ?. ಇಂದು ನನ್ನ ಮನೆ ನೆಲಸಮ ಆಗಿರಬಹುದು, ನಾಳೆ ನಿನ್ನ ಅಹಂಕಾರ ನೆಲಸಮ ಆಗುತ್ತೆ. ಇದು ಸಮಯದಾಟ, ಪ್ರತಿ ಬಾರಿ ಒಂದೇ ಆಗಿರಲ್ಲ. ಕಾಶ್ಮೀರಿ ಪಂಡಿತರ ಮೇಲೆ ಏನಾಗುತ್ತಿತ್ತು ಎಂಬುವುದು ಇಂದು ನನಗೆ ಅರ್ಥವಾಗಿದೆ. ನಾನು ಕೇವಲ ಅಯೋಧ್ಯೆ ಮಾತ್ರವಲ್ಲ, ಕಾಶ್ಮೀರದ ಕುರಿತು ಸಿನಿಮಾ ನಿರ್ಮಾಣ ಮಾಡುತ್ತೇನೆ ಎಂದು ಮಾತು ನೀಡುತ್ತಾನೆ. ಸಿನಿಮಾಗಳ ಮೂಲಕ ದೇಶದ ಜನರನ್ನ ಎಚ್ಚರಿಸುವ ಕೆಲಸ ಮಾಡುತ್ತೇನೆ. ಈ ರೀತಿ ಕೆಲಸಗಳ ನಡೆಯುತ್ತಿರುವ ಬಗ್ಗೆ ಕೇಳಿದ್ದೆ. ಆದ್ರೆ ಇಂದು ನನ್ನೊಂದಿಗೆ ನಡೆದಿದೆ. ಉದ್ಧವ್ ಠಾಕ್ರೆಯ ಕ್ರೂರತ್ವದ ಭಯೋತ್ಪಾದನೆ ನನ್ನೊಂದಿಗೆ ನಡೆದಿರೋದು ಒಳ್ಳೆಯದು ಆಯ್ತು. ಕಾರಣ ಇದಕ್ಕೆ ಕೆಲ ಮಹತ್ವದ ಕಾರಣವಿದೆ. ಜೈ ಹಿಂದ್, ಜೈ ಮಹಾರಾಷ್ಟ್ರ.
https://www.youtube.com/watch?v=NTzTq3q2OAA