ಬೆಂಗಳೂರು: ಶಾಸಕ ಸತೀಶ್ ರೆಡ್ಡಿ ಕಾರಿಗೆ ಬೆಂಕಿ ಇಟ್ಟ ಪ್ರಕರಣ ಮೇಲ್ನೋಟಕ್ಕೆ ಚಿಕ್ಕದು ಅನಿಸಿದರೂ ಅದರ ವ್ಯಾಪ್ತಿ ದೊಡ್ಡದಿದೆ. ಈ ಸಂಬಂಧ ಈಗಾಗಲೇ ನಮಗೆ ಒಂದಿಷ್ಟು ಕ್ಲ್ಯೂ ಸಿಕ್ಕಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಹೇಳಿದ್ದಾರೆ.
Advertisement
ಇಂದು ನಗರದ ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆರೋಪಿಗಳನ್ನು 24 ಗಂಟೆಯಲ್ಲಿ ಹಿಡಿಯುವ ಗಡುವು ಎಲ್ಲಿಂದ ಬಂತು? ಸಿಆರ್‌ಪಿಸಿಯಲ್ಲಿ ಈ ಗಡುವು ಎಲ್ಲಿಯೂ ಇಲ್ಲ. ಮೇಲ್ನೋಟಕ್ಕೆ ಈ ಪ್ರಕರಣ ಚಿಕ್ಕದು ಅನಿಸಿದರೂ. ಇದರ ವ್ಯಾಪ್ತಿ ದೊಡ್ಡದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನೂರು ಮಂದಿ ಪೊಲೀಸರು, ತಜ್ಞರು ಕೆಲಸ ಮಾಡುತ್ತಿದ್ದಾರೆ. ಜೊತೆಗೆ ಸಿಸಿಟಿವಿ ತಜ್ಞರು ಎಲ್ಲರೂ ಕೆಲಸ ಮಾಡುತ್ತಿದ್ದಾರೆ. ಅಲ್ಲದೇ ನಮಗೆ ಒಂದಿಷ್ಟು ಕ್ಲ್ಯೂ ಸಿಕ್ಕಿದೆ. ಆರೋಪಿಗಳನ್ನು ವಶಕ್ಕೆ ಪಡೆದ ಬಳಿಕ ಸ್ಪಷ್ಟ ಕಾರಣ ತಿಳಿಯುತ್ತದೆ ಎಂದಿದ್ದಾರೆ.
Advertisement
Advertisement
ಯಾವ ಕಾರಣಕ್ಕೆ ಈ ಕೃತ್ಯ ಎಸಗಲಾಗಿದೆ ಎನ್ನುವುದು ತಿಳಿದು ಬಂದಿಲ್ಲ. ಆದರೆ ಬೇಗೂರು ಕೆರೆಯಲ್ಲಿ ಶಿವನ ಮೂರ್ತಿ ಅನಾವರಣ ಸಂಬಂಧ ಗಲಾಟೆ ಎಬ್ಬಿಸಲು ಈ ಕೃತ್ಯ ನಡೆದಿರಬಹುದೇ ಎಂಬ ಶಂಕೆ ಎದ್ದಿದೆ. ಈ ಬಗ್ಗೆ ಸತೀಶ್ ರೆಡ್ಡಿ ಚಾಲಕ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಎಫ್‍ಐಆರ್ ದಾಖಲಿಸಿಕೊಂಡಿದ್ದರು. ಸಿಸಿಬಿ ಪೊಲೀಸರು ಇದೇ ಆಯಾಮದಲ್ಲಿ ತನಿಖೆ ಕೂಡ ನಡೆಸಿದ್ದು, ಈಗಾಗಲೇ ಹಲವು ಅನುಮಾನಿತರನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಇದನ್ನೂ ಓದಿ: ಬೇಗೂರು ಕೆರೆಯಲ್ಲಿ ಶಿವನ ಪ್ರತಿಮೆ ಸ್ಥಾಪನೆ ಬೆಂಬಲಿಸಿದ್ದಕ್ಕೆ ಸತೀಶ್ ರೆಡ್ಡಿ ಕಾರಿಗೆ ಬೆಂಕಿ?
Advertisement
ಈ ಘಟನೆ ಸಂಬಂಧ ಶಾಸಕ ಸತೀಶ್ ರೆಡ್ಡಿ ಪಬ್ಲಿಕ್ ಟಿವಿ ಜೊತೆ ಮಾತನಾಡಿ, 25ಕ್ಕೂ ಹೆಚ್ಚು ಮಂದಿಯನ್ನು ವಿಚಾರಣೆ ಮಾಡಲಾಗಿದೆ. ಅದರಲ್ಲಿ ಮೂವರನ್ನು ಕೃತ್ಯದಲ್ಲಿ ಭಾಗಿಯಾಗಿರೋದು ಮನವರಿಕೆಯಾಗಿದೆ. ಬೇರೆ ಬೇರೆ ಆಯಾಮಾಗಳಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದು, ಇಂದು ಸಂಜೆಯೊಳಗೆ ಕಾರುಗಳಿಗೆ ಬೆಂಕಿ ಹಚ್ಚಿದವರ ಬಂಧನ ಮಾಡುವ ಸಾಧ್ಯತೆಗಳಿವೆ ಎಂದು ಹೇಳಿದ್ದರು. ಇದನ್ನೂ ಓದಿ:ಕಾರುಗಳಿಗೆ ಬೆಂಕಿ ಹಚ್ಚಿದವರನ್ನು ಸಂಜೆಯೊಳಗೆ ಬಂಧನ ಮಾಡೋ ಸಾಧ್ಯತೆ: ಸತೀಶ್ ರೆಡ್ಡಿ