ನವದೆಹಲಿ: ಸತತ 21ನೇ ದಿನವೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿದೆ. ಇಂದಿನ ಬೆಲೆ ಪರಿಷ್ಕರಣೆಯ ನಂತರ ದೇಶದ ಪ್ರಮುಖ ನಗರಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್‍ಗೆ 25 ಪೈಸೆ ಹೆಚ್ಚಾದರೆ, ಡೀಸೆಲ್‍ಗೆ 21 ಪೈಸೆ ಏರಿಕೆಯಾಗಿದೆ.
ರಾಷ್ಟ್ರೀಯ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್‌ಗೆ 80.38 ರೂ. ಹಾಗೂ ಡೀಸೆಲ್ ಬೆಲೆ ಕೂಡ ದಾಖಲೆಯ ಗರಿಷ್ಠ 80.40 ರೂ. ಇದೆ. ದೆಹಲಿ ಸರ್ಕಾರವು ಮೇ ತಿಂಗಳಲ್ಲಿ ಸ್ಥಳೀಯ ಮಾರಾಟ ತೆರಿಗೆ ಅಥವಾ ಮೌಲ್ಯವರ್ಧಿತ ತೆರಿಗೆಯನ್ನು (ವ್ಯಾಟ್) ತೀವ್ರವಾಗಿ ಏರಿಸಿದ್ದರಿಂದ ಡೀಸೆಲ್ ಈಗ ರಾಷ್ಟ್ರ ರಾಜಧಾನಿಯಲ್ಲಿ ಪೆಟ್ರೋಲ್‍ಗಿಂತ ದುಬಾರಿಯಾಗಿದೆ. ಮೇ 5ರಂದು ದೆಹಲಿ ಸರ್ಕಾರವು ಡೀಸೆಲ್ ಮೇಲಿನ ವ್ಯಾಟ್ ಅನ್ನು ಶೇ.16.75ರಿಂದ ಶೇ.30ಕ್ಕೆ ಮತ್ತು ಪೆಟ್ರೋಲ್ ಅನ್ನು ಶೇ.27ರಿಂದ 30ಕ್ಕೆ ಏರಿಸಿತ್ತು.
Advertisement
Advertisement
ಮಹಾನಗರಗಳಲ್ಲಿ ಇಂಧನ ದರ:
ಬೆಂಗಳೂರಿನಲ್ಲಿ ಇಂದು ಪ್ರತಿ ಲೀಟರ್ ಪೆಟ್ರೋಲ್‍ಗೆ 82.99 ರೂ. ಇದ್ದರೆ, ಡೀಸೆಲ್ ಬೆಲೆ 76.45 ರೂ. ಆಗಿದೆ. ಮುಂಬೈನಲ್ಲೂ ಪೆಟ್ರೋಲ್ ಬೆಲೆ 87 ರೂ. ಗಡಿ ದಾಟಿದೆ. ಇಂದು ಪ್ರತಿ ಲೀಟರ್ 87.14 ರೂ.ಗೆ ಮಾರಾಟವಾಗುತ್ತಿದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ 82.05 ರೂ. ಹಾಗೂ ಡೀಸೆಲ್ ದರ 75.52 ರೂ. ಇದೆ. ಚೆನ್ನೈನಲ್ಲಿ ಇಂದು ಪ್ರತಿ ಲೀಟರ್ ಪೆಟ್ರೋಲ್‍ಗೆ 83.59 ರೂ. ಇದ್ದರೆ, ಬೆಲೆ 77.44 ರೂ. ಆಗಿದೆ.
Advertisement
Advertisement
ತೈಲ ಕಂಪನಿಗಳು 82 ದಿನಗಳ ಬಳಿಕ ಅಂದ್ರೆ ಜೂನ್ 7ರಂದು ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆ ಮಾಡಲು ಆರಂಭಿಸಿವು. ಶುಕ್ರವಾರ ಬೆಲೆ ಏರಿಕೆಯ ಬಳಿಕ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಎರಡು ವರ್ಷಗಳಲ್ಲಿ ಮೊದಲ ಬಾರಿಗೆ 80 ರೂ. ಗಡಿ ದಾಟಿದೆ. ಕೊನೆಯದಾಗಿ 2018ರ ಸೆಪ್ಟೆಂಬರ್ ನಲ್ಲಿ ಪೆಟ್ರೋಲ್ ಬೆಲೆ 80 ರೂ. ದಾಟಿತ್ತು.