ಒಂದು ದಿನ ಲಾಕ್‍ಡೌನ್ ಮಾಡಿದರೆ ಪ್ರಯೋಜನಾ ಇಲ್ಲ, ಕಂಪ್ಲೀಟ್ ಮಾಡಿ: ರಾಮಲಿಂಗಾರೆಡ್ಡಿ

Public TV
1 Min Read
Ramalinga Reddy

ಬೆಂಗಳೂರು: ಕೇಂದ್ರ ಹಾಗೂ ರಾಜ್ಯಗಳು ಕೊರೊನಾದೊಂದಿಗೆ ಬದುಕಿ ಎಂದು ಹೇಳುವ ಮೂಲಕ ನಮ್ಮ ಕೈಯಲ್ಲಿ ಸೋಂಕಿನ ನಿಯಂತ್ರಣ ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿವೆ. ಶನಿವಾರ, ಭಾನುವಾರದ ಲಾಕ್‍ಡೌನ್ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಮಾಡಿದರೇ ಕಂಪ್ಲೀಟ್ ಲಾಕ್‍ಡೌನ್ ಮಾಡಬೇಕಿದೆ ಎಂದು ಮಾಜಿಸ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

Bengaluru Lockdown Police 7

ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರಾಮಲಿಂಗಾ ರೆಡ್ಡಿ ಅವರು, ಈ ಹಿಂದೆ ಲಾಕ್‍ಡೌನ್ ತೆಗೆದು ಹಾಕಿದಾಗ ಕೋವಿಡ್ ಹೆಚ್ಚಳ ಆಗಿತ್ತು. ಆದರೆ ಆಗ ಲಾಕ್‍ಡೌನ್ ಮುಂದುವರಿಸಬೇಕಿತ್ತು. ಅವೈಜ್ಞಾನಿಕವಾಗಿ ಕೇಂದ್ರ ಸರ್ಕಾರ ತಪ್ಪು ನಿರ್ಧಾರ ಮಾಡಿತ್ತು. ಈಗ ಸಣ್ಣ ಪ್ರಮಾಣದ ಲಾಕ್‍ಡೌನ್ ಮಾಡಿದರೆ ಏನು ಪ್ರಯೋಜನಾ? ಸೋಂಕು ವ್ಯಾಪಕವಾಗಿ ಹರಡಿದೆ, ಒಂದು ದಿನ ಲಾಕ್‍ಡೌನ್ ಮಾಡಿದರೆ ಪ್ರಯೋಜನಾ ಇಲ್ಲ, ಕಂಪ್ಲೀಟ್ ಲಾಕ್‍ಡೌನ್ ಮಾಡಿ ಎಂದು ತಿಳಿಸಿದರು.

MB Patil

ಇದೇ ವೇಳೆ ಮಾತನಾಡಿದ ಮಾಜಿ ಸಚಿವ ಎಂ.ಬಿ.ಪಾಟೀಲ್, ಮೊದಲು ಲಾಕ್‍ಡೌನ್ ಮಾಡುವಾಗ ನೋಟ್ ಬ್ಯಾನ್ ಮಾಡಿದಂತೆ ಏಕಾಏಕಿ ಮಾಡಿದರು. ಆದರೆ ಸಣ್ಣ ದೇಶ ಸಿಂಗಪೂರ್ ನಲ್ಲಿ ನೋಟಿಸ್ ಕೊಟ್ಟು ಎಚ್ಚರಿಸಿ ಆ ಬಳಿಕ ಲಾಕ್‍ಡೌನ್ ಮಾಡಿದರು. ಈಗ ಸೋಂಕು ಹೆಚ್ಚಾಗಿದ್ದು, ಹಳ್ಳಿಗಳಲ್ಲಿ ಜನ ಮಾಸ್ಕ್ ಹಾಕೋದನ್ನೇ ಬಿಟ್ಟಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗಿದೆ. ನಗರದಿಂದ ಈಗ ಕೊರೊನಾ ಹಳ್ಳಿಗಳಿಗೆ ತಲುಪಿದೆ. ಆದರೆ ಈಗ ಮತ್ತೆ ಲಾಕ್ ಡೌನ್ ವಿಚಾರವಾಗಿ ಚರ್ಚೆಯ ಅಗತ್ಯವಿದೆ. ಹಳ್ಳಿಗಳನ್ನು ಲಾಕ್‍ಡೌನ್ ಮಾಡಬೇಕಾ ಅಥವಾ ಹೆಚ್ಚು ಜನಸಾಂದ್ರತೆ ಇರುವ ಕಡೆ ಲಾಕ್‍ಡೌನ್ ಮಾಡಬೇಕಾ ಎಂಬ ಬಗ್ಗೆ ಚರ್ಚೆಯ ಅಗತ್ಯವಿದೆ ಎಂದರು.

Share This Article