ಚಿಕ್ಕಮಗಳೂರು: ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿಕೆ ಖಂಡಿಸಿ ಚಿಕ್ಕಮಗಳೂರು ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಬ್ಯಾಟರಿ ಪ್ರೊಟೆಸ್ಟ್ ನಡೆಸಿದರು. ಎರಡು ದಿನಗಳ ಹಿಂದೆ ಸಚಿವ ಸಿ.ಟಿ.ರವಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದರು.
ಸಂಘ ಪರಿವಾರದವರು ಕೊಲೆ ಆರೋಪಿಗಳು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಸಂಘ ಪರಿವಾರ ಯಾವುದಾದರೂ ಹತ್ಯೆಯಲ್ಲಿ ಭಾಗಿಯಾಗಿದ್ರೆ, ನೀವೇ ಐದು ವರ್ಷ ಅಧಿಕಾರದಲ್ಲಿದ್ರಿ ಸಂಘವನ್ನ ನಿಷೇಧ ಮಾಡಲು ಶಿಫಾರಸ್ಸು ಮಾಡಬಹುದಿತ್ತು. ಬ್ಯಾಟರಿ ಇರಲಿಲ್ವಾ ಎಂದು ಸಚಿವ ಸಿ.ಟಿ.ರವಿ ಮಾಜಿ ಸಿಎಂ ಸಿದ್ದರಾಮಯ್ಯರನ್ನ ವ್ಯಂಗ್ಯವಾಡಿದ್ದರು. ಸಚಿವ ಸಿ.ಟಿ ರವಿಯ ಈ ಹೇಳಿಕೆಯನ್ನ ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ರಸ್ತೆ ಮಧ್ಯೆ ಬ್ಯಾಟರಿಗಳನ್ನ ಇಟ್ಟುಕೊಂಡು ಪ್ರತಿಭಟನೆ ನಡೆಸಿದರು.
ಸಿದ್ದರಾಮಯ್ಯನವರಿಗೆ ಬ್ಯಾಟರಿ ಇಲ್ಲ ಎಂದು ಹೇಳಿದ್ದೀರಾ? ನೀವು ಚಾರ್ಜ್ ಮಾಡ್ತೀರಾ ಎಂದು ಪ್ರಶ್ನಿಸಿದ್ದಾರೆ. ಆಯ್ತು ಸ್ವಾಮಿ, ನೀವು ಹೇಳಿದ್ದೆಲ್ಲವನ್ನ ಕೇಳ್ತೀವಿ. ನಿಮ್ಮ ಬ್ಯಾಟರಿಯ ಬ್ಯಾಟರಿ ಎಲ್ಲಿದೆ ಹೇಳಿ. ನಾವು ಬಂದು ಚಾರ್ಜ್ ಮಾಡಿಕೊಂಡು ಆಮೇಲೆ ನಿಮಗೆ ಏನ್ ಮಾಡಬೇಕೋ ಅದನ್ನೇ ಮಾಡ್ತೀವಿ ಎಂದು ಸಚಿವರ ವಿರುದ್ಧ ವ್ಯಂಗ್ಯವಾಗಿದ್ದಾರೆ. ಸಿ.ಟಿ.ರವಿ ಬ್ಯಾಟರಿ ಸೆಂಟರ್ ಅನ್ನೋ ಕಟೌಟ್‍ಗಳನ್ನು ಹಿಡಿದುಕೊಂಡು ಸಚಿವರ ವಿರುದ್ಧ ಆಕ್ರೋಶ ಹೊರಹಾಕಿದರು. ಸಚಿವರು ಕೂಡಲೇ ತಮ್ಮ ಹೇಳಿಕೆಯನ್ನ ಹಿಂಪಡೆದು ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಕ್ಷಮೆ ಕೇಳಬೇಕೆಂದು ಆಗ್ರಹಿಸಿದರು.
ಸಿದ್ದರಾಮಯ್ಯನವರೇ, ನಿಮಗೆ ಅವತ್ತು ಬ್ಯಾಟರಿ ಇರಲಿಲ್ವಾ: ಸಿ.ಟಿ.ರವಿhttps://t.co/3ZQ69RYMJS#Siddaramaiah #CTRavi #Congress #BJP @CTRavi_BJP @siddaramaiah
— PublicTV (@publictvnews) August 22, 2020