ಬೆಂಗಳೂರು: ಬಿ.ಎಸ್ ಯಡಿಯೂರಪ್ಪ ಬದಲಾವಣೆ ಆದ ಬಳಿಕ ಸಚಿವ ಸ್ಥಾನ ಗಿಟ್ಟಿಸಿಕೊಳ್ಳೋದಕ್ಕೆ ಸತತ ಪ್ರಯತ್ನ ಮಾಡ್ತಾ ಇರೋ ಬಿಜೆಪಿ ಶಾಸಕ ರೇಣುಕಾಚಾರ್ಯಗೆ ಈಗ ಸಿಡಿ ಶುರುವಾಗಿದೆ. ಇದೀಗ ಅವರು ಕೋರ್ಟ್ ಮೊರೆ ಹೋಗಿದ್ದಾರೆ.
Advertisement
ರೇಣುಕಾಚಾರ್ಯ ವಿರುದ್ಧ ಯಾವುದೇ ಸಿಡಿಯನ್ನು ಪ್ರಸಾರ ಮಾಡದಂತೆ ಕೋರ್ಟ್ ಮೊರೆ ಹೋಗಿದ್ದಾರೆ.ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಗೆ ತಡೆಯಾಜ್ಞೆಗೆ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿ ವಿಚಾರಣೆ ಮಾಡಿದ ನ್ಯಾಯಾಲಯ ಮಧ್ಯಂತರ ತಡೆಯಾಜ್ಞೆಯನ್ನು ನೀಡಿದ್ದು, ರೇಣುಕಾಚಾರ್ಯ ಮಾನಹಾನಿಯಾಗುವಂತಹ ಯಾವುದೇ ಸಿಡಿಯನ್ನು ದೃಶ್ಯಾವಳಿಗಳನ್ನು ಪ್ರಸಾರ ಮಾಡದಂತೆ ಆದೇಶ ನೀಡಿದೆ.
Advertisement
Advertisement
ಆದರೆ ಹದಿನೈದು ದಿನಗಳ ಹಿಂದೆ ಸಿಡಿ ವಿಚಾರ ಕೇಳಿದಾಗ ನನಗೇನೂ ಗೊತ್ತಿಲ್ಲ. ನನ್ನದು ಯಾವುದೇ ಸಿಡಿ ಇಲ್ಲ ಅಂತ ಮಾಧ್ಯಮಗಳ ಜೊತೆ ವಾದ ಮಾಡಿದ್ದರು. ಇದೀಗ ಸೈಲೆಂಟ್ ಆಗಿ ಕೋರ್ಟ್ ಗೆ ಹೋಗಿ ಮಧ್ಯಂತರ ತಡೆಯಾಜ್ಞೆ ತಂದಿದ್ದಾರೆ. ಇದನ್ನೂ ಓದಿ: ನಾನು ತಪ್ಪು ಮಾಡಿಲ್ಲ, ಗ್ರಾಫಿಕ್ಸ್‌ನಲ್ಲಿ ಏನು ಬೇಕಾದರೂ ಮಾಡಬಹುದು: ರೇಣುಕಾಚಾರ್ಯ
Advertisement
ವಾರದ ಹಿಂದೆ ರೇಣುಕಾಚಾರ್ಯ ಅವರು ದಿಢೀರ್ ದೆಹಲಿಗೆ ತೆರಳಿ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದರು. ಈ ವೇಳೆ ಸಿಡಿ ಸಂಬಂಧ ಪಬ್ಲಿಕ್ ಟಿವಿ ಪ್ರಶ್ನಿಸಿದಾಗ, ಸಿಡಿ ಬಗ್ಗೆ ನಂಗೇನೂ ಗೊತ್ತಿಲ್ಲ. ಈ ಬಗ್ಗೆ ಹೈಕಮಾಂಡ್ ಭೇಟಿ ಮಾಡುವಷ್ಟು ದೊಡ್ಡವನಲ್ಲ. ಕ್ಷೇತ್ರದ ಕಾರ್ಯಕ್ಕೆ ದೆಹಲಿಗೆ ಬಂದಿದ್ದೇನೆ. ನಂಗೇ ಯಾವುದೇ ಮಾಹಿತಿ ಇಲ್ಲ ಎಂದು ಹೇಳುವ ಮೂಲಕ ಪ್ರತಿಕ್ರಿಯಿಸಲು ನಿರಾಕರಿಸಿದ್ದರು. ಆದರೆ ರೇಣುಕಾಚಾರ್ಯ ಅವರು ಹೈಕಮಾಂಡ್ ನಾಯಕರಿಂದ ಸಿಡಿ ಬಿಡುಗಡೆ ತಡೆ ತರಲು ಪ್ಲ್ಯಾನ್ ಮಾಡಿಕೊಂಡು ದೆಹಲಿಗೆ ಹೋಗಿದ್ದರು. ಬಿಜೆಪಿ ನಾಯಕರ ಬಳಿಯೇ ಸಿ.ಡಿ ಇರುವ ಬಗ್ಗೆ ಮಾಹಿತಿ ಇದ್ದು, ಹೈಕಮಾಂಡ್ ಮೂಲಕ ಒತ್ತಡ ಹಾಕಿ ಸಿ.ಡಿ ವಿಚಾರಕ್ಕೆ ಬ್ರೇಕ್ ಹಾಕಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳಲಾಗಿತ್ತು.