ವಿಜಯಪುರ: ಸಚಿವ ಸ್ಥಾನದ ಕುರಿತು ಆಗಾಗ ಸರ್ಕಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಇದೀಗ ಮತ್ತೆ ಹರಿಹಾಯ್ದಿದ್ದು, ಸಚಿವನಾಗುವುದಕ್ಕೆ ಯಾರದ್ದೋ ಕಾಲು, ತಲೆ ಹಿಡಿಯುವ ಕೆಲಸ ಮಾಡಿಲ್ಲ ಎಂದು ಕಿಡಿಕಾರಿದ್ದಾರೆ.
Advertisement
ಟ್ವೀಟ್ ಮೂಲಕ ಮತ್ತೆ ಅಸಮಾಧಾನ ಹೊರಹಾಕಿರುವ ಯತ್ನಾಳ್, ಸಿಎಂಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ಕರ್ನಾಟಕದ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಕೆಲಸ ಮಾಡುತ್ತಿದ್ದೇನೆ. ಆತ್ಮಸಾಕ್ಷಿಯಾಗಿ ಜನಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದೇನೆ. ಸಚಿವನಾಗುವುದಕ್ಕೆ ಯಾರದ್ದೋ ಕಾಲು, ತಲೆ ಹಿಡಿಯುವ ಕೆಲಸ ಮಾಡಿಲ್ಲ. ಅದು ನನ್ನ ಜಾಯಮಾನವೂ ಅಲ್ಲ ಎಂದು ಟ್ವಿಟ್‍ನಲ್ಲಿ ಮತ್ತೆ ನೇರವಾಗಿ ಬರೆದುಕೊಂಡಿದ್ದಾರೆ.
Advertisement
ಕರ್ನಾಟಕದ ಅಭಿವೃದ್ಧಿ ಹಾಗೂ ಜನರ ಧ್ವನಿಯಾಗಿ ಆತ್ಮಸಾಕ್ಷಿಯಿಂದ ಜನಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದೆನೆ ಹೊರತು ಸಚಿವನಾಗುವದಕ್ಕೆ ಯಾರದೋ ಕಾಲು ಹಿಡಿದು ತಲೆ ಹಿಡಿಯುವ ಕೆಲಸ ಮಾಡಿಲ್ಲ ಅದು ನನ್ನ ಜಾಯಮಾನ ಅಲ್ಲ.
— B R Patil Yatnal (@BRPatil_BJP) October 21, 2020
Advertisement
ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಬಹಳ ದಿನ ಉಳಿಯಲ್ಲ ಎಂದು ಸಿಎಂ ವಿರುದ್ಧ ಬಸನಗೌಡ ಪಾಟೀಲ್ ಯತ್ನಾಳ್ ಅಸಮಾಧಾನ ವ್ಯಕ್ತಪಡಿಸಿದ್ದರು. ಯತ್ನಾಳ್ ಹೇಳಿಕೆ ಬಿಜೆಪಿಯಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಸಿಎಂ ಬಿ.ಎಸ್‍ವೈ ಅವರಿಗೂ ಈ ಹೇಳಿಕೆ ಇರಿಸು ಮುರಿಸು ಉಂಟು ಮಾಡಿತ್ತು.
Advertisement
ಯತ್ನಾಳ್ ಜೊತೆ ಮಾತನಾಡುತ್ತೇನೆ ಎಂದು ಸಿಎಂ ಹೇಳಿದ್ದರು. ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಆರ್.ಸಂತೋಷ್ ಸಹ ಶಾಸಕರ ಭವನದಲ್ಲಿ ಯತ್ನಾಳ್ ರನ್ನ ಭೇಟಿಯಾಗಿದ್ದರು. ಯತ್ನಾಳ್ ಹೇಳಿಕೆ ಬೆನ್ನಲ್ಲೇ ಯತ್ನಾಳರನ್ನ ಭೇಟಿಯಾಗಿ ಮಾತನಾಡಿದ್ದರು.
ನಂತರ ಸಿಎಂ ಯತ್ನಾಳ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು. ಇದಾದ ಬೆನ್ನಲ್ಲೇ ರಾತ್ರಿ ಮತ್ತೆ ಟ್ವೀಟ್ ಮಾಡಿ ಯತ್ನಾಳ್ ಸಿಎಂ ಕಾಲೆಳೆದಿದ್ದಾರೆ. ಇದೀಗ ಈ ಕುರಿತು ಸಾಕಷ್ಟು ಚರ್ಚೆಯಾಗುತ್ತಿದ್ದು, ಸಿಎಂ ಸಹ ತಲೆಕೆಡಿಸಿಕೊಂಡಿದ್ದಾರೆ.