ಯಾದಗಿರಿ: ಜಿಲ್ಲೆಯ ವಡಗೇರ ತಾಲೂಕಿನ ತುಮಕೂರು ಗ್ರಾಮದ ಸಮೀಪದ ಕೋರ್ ಗ್ರೀನ್ ಸಕ್ಕರೆ ಕಾರ್ಖಾನೆಯಿಂದ ವಿಷಪೂರಿತ ನೀರನ್ನು ಕೃಷ್ಣಾ ನದಿ ಹೀನ್ನಿರಿಗೆ ಹರಿಬಿಟ್ಟ ಹಿನ್ನಲೆ ನದಿ ದಡದಲ್ಲಿ ಲಕ್ಷಾಂತರ ಮೀನುಗಳು ಸತ್ತುಬಿದ್ದಿವೆ.
ಸದ್ಯ ಫ್ಯಾಕ್ಟರಿ ಸ್ವಚ್ಛಗೊಳಿಸುತ್ತಿದ್ದು, ಸಕ್ಕರೆ ತಯಾರಿಸಲು ಬಳಸುವ ವಿವಿಧ ರಾಸಾಯನಿಕ ವಸ್ತುಗಳನ್ನು ನದಿಯ ನೀರಿಗೆ ಹರಿಬಿಡಲಾಗುತ್ತಿದೆ. ಇದರಿಂದಾಗಿ ನದಿಯ ನೀರು ಕಲುಷಿತಗೊಂಡು ಈ ಮೀನುಗಳು ಸತ್ತಿರಬಹುದೆಂದು ಊಹಿಸಲಾಗಿದೆ.
ಯಾದಗಿರಿ ಜಿಲ್ಲೆಯಲ್ಲಿರುವ ಏಕೈಕ ಶುಗರ್ ಫ್ಯಾಕ್ಟರಿ ಇದಾಗಿದ್ದು, ಕಾರ್ಖಾನೆಯ ಆಡಳಿತ ಮಂಡಳಿಯಿ ನಿರ್ಲಕ್ಷ್ಯದಿಂದ ಪಕ್ಕದ ಗ್ರಾಮಗಳ ಪರಿಸರ ಹದಗೆಟ್ಟು, ಸುತ್ತಲಿನ ಗ್ರಾಮಸ್ಥರು ನಾನಾ ಸಂಕಷ್ಟ ಎದುರಿಸುವಂತಾಗಿದೆ. ಫ್ಯಾಕ್ಟರಿಯವರು ಪದೇ ಪದೇ ಈ ರೀತಿಯ ನಿರ್ಲಕ್ಷ್ಯ ವಹಿಸುತ್ತಿದ್ದರೂ ಅಧಿಕಾರಿಗಳು ಮಾತ್ರ ಕಣ್ಣುಮಚ್ಚಿ ಕುಳಿತ್ತಿದ್ದಾರೆ.