ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಕಾಂಗ್ರೆಸ್ ಮುಸ್ಲಿಮ್ ಶಾಸಕ

Public TV
1 Min Read
shakeel ahmad khan

ಪಾಟ್ನಾ: ಬಿಹಾರದ ಕಾಂಗ್ರೆಸ್‍ನ ಮುಸ್ಲಿಂ ಶಾಸಕ ಶಕೀಲ್ ಅಹ್ಮದ್ ಖಾನ್ ಅವರು ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿ ರಾಜಕೀಯ ನಾಯಕರಿಗೆ ಅಚ್ಚರಿ ಮೂಡಿಸಿದ್ದಾರೆ.

CongressFlags1

ಚುನಾವಣೆಯಲ್ಲಿ ಗೆದ್ದ ನಾಯಕರು ಇಂದು ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರು. 5 ದಿನಗಳ ಕಾಲ ಈ ಅಧಿವೇಶ ನಡೆಯಲಿದ್ದು ಮೊದಲ ದಿನ ವಿವಿಧತೆಯಲ್ಲಿ ಏಕತೆಗೆ ಸಾಕ್ಷಿಯಾಯಿತು. ಸದಸ್ಯರು ಪಕ್ಷದ ವ್ಯಾಪ್ತಿಯನ್ನು ಮಿರಿ ಮೈಥಿಲಿ, ಉರ್ದು, ಹಿಂದಿ ಸೇರಿದಂತೆ ತಮ್ಮ ಪ್ರಾದೇಶಿಕ ಭಾಷೆಗಳಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

ಇದೇ ವೇಳೆ ಬಿಹಾರದ ಕಡ್ವಾ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿರುವ ಕಾಂಗ್ರೆಸ್‍ನ ಮುಸ್ಲಿಂ ಶಾಸಕ ಶಕೀಲ್ ಅಹ್ಮದ್ ಖಾನ್ ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. ಜೆಎನ್‍ಯು ಹಳೆಯ ವಿದ್ಯಾರ್ಥಿಯಾಗಿರುವ ಖಾನ್, ಬಿಜೆಪಿ ಹಾಗೂ ಎಐಎಂಐಎಂ ಪಕ್ಷಗಳಿಗೆ ಈ ಮೂಲಕ ಸ್ಪಷ್ಟಪಡಿಸಲು ಬಯಸುತ್ತೇನೆ ಎಂದು ತಿಳಿಸಿದರು. ಇದೇ ವೇಳೆ ಸೀತಾಮಾರಿ ಕ್ಷೇತ್ರದ ಬಿಜೆಪಿ ಶಾಸಕ ಮಿಥಿಲೇಶ್ ಕುಮಾರ್ ಸಹ ಸಂಸ್ಕೃತದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

shakeel ahmad khan 2

ಹಲವು ಸದಸ್ಯರು ಉರ್ದುನಲ್ಲಿ ಪ್ರಮಾಣ ವಚನ ಸ್ವೀಕರಿಸಿದರೆ, ಶಿಯೋಹರ್ ಕ್ಷೇತ್ರದ ಆರ್‍ಜೆಡಿ ಶಾಸಕ, ಆನಂದ್ ಮೋಹನ್ ಸಿಂಗ್ ಪುತ್ರ ಚೇತನ್ ಆನಂದ್ ಅವರು ಇಂಗ್ಲಿಷ್‍ನಲ್ಲಿ ಪ್ರಮಾಣ ವಚನ ಸ್ವೀಕರಿಸಿದರು.

Share This Article