ಮೈಸೂರು: ಸಂಸದ ಶ್ರೀನಿವಾಸ್ ಪ್ರಸಾದ್ ಆಪ್ತ ಸಹಾಯಕರೊಬ್ಬರು ಮಹಾಮಾರಿ ಕೊರೊನಾಗೆ ಬಲಿಯಾಗಿದ್ದಾರೆ.
ಶಂಕರ್(78) ಕೊರೊನಾಗೆ ಬಲಿಯಾದ ಆಪ್ತ ಸಹಾಯಕ. ಇವರು ಕಳೆದ 40 ವರ್ಷಗಳಿಂದ ಶ್ರೀನಿವಾಸ್ ಪ್ರಸಾದ್ ಬಳಿ ಆಪ್ತ ಸಹಾಯಕರಾಗಿದ್ದರು.
Advertisement
ಶಂಕರ್ ಅವರಲ್ಲಿ ಒಂದು ವಾರದ ಹಿಂದೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಕೂಡಲೇ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಆಪ್ತ ಸಹಾಯಕನ ಸಾವಿಗೆ ಸಂಸದರು ಕಂಬನಿ ಮಿಡಿದಿದ್ದಾರೆ.
Advertisement
Advertisement
ಸಕಾಲದಲ್ಲಿ ಆಕ್ಸಿಜನ್ ಸಿಗದ ಕಾರಣ ಸೋಮವಾರ ಬೆಳಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಆಪ್ತ ಸಹಾಯಕ ರಮೇಶ್ ಮೃತಪಟ್ಟಿದ್ದರು. ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ರಮೇಶ್ ಅವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು.
Advertisement
ಏ.13ರಿಂದ ಚಿಕಿತ್ಸೆ ಪಡೆಯುತ್ತಿದ್ದ ಅವರಿಗೆ ಉಸಿರಾಟದ ಸಮಸ್ಯೆ ಮಾತ್ರ ಅಲ್ಲದೇ ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ವೆಂಟಿಲೇಟರ್ ಬೆಡ್ ನಲ್ಲಿ ಚಿಕಿತ್ಸೆ ಪಡೆಯುತ್ತದ್ದ ರಮೇಶ್ ಅವರಿಗೆ ನಿನ್ನೆ ಆಕ್ಸಿಜನ್ ಕೊರತೆಯಾಗಿತ್ತು. ಸರಿಯಾದ ಸಮಯದಲ್ಲಿ ಆಕ್ಸಿಜನ್ ಆಸ್ಪತ್ರೆಯಲ್ಲಿ ದೊರೆಯದ ಕಾರಣ ರಮೇಶ್ ನಿನ್ನೆ ಬೆಳಗ್ಗೆ ಸಾವನ್ನಪ್ಪಿದ್ದರು.