ಬೆಂಗಳೂರು: ಸೌತ್ ಝೋನ್‍ನಲ್ಲಿ ಬೆಡ್‍ಬ್ಲಾಕ್ ದಂಧೆ ಪ್ರಕರಣದಲ್ಲಿ ಕೋಮು ವೈಷಮ್ಯ ಬಿತ್ತುವ ಯತ್ನ ಆರೋಪ ಕೇಳಿ ಬಂದಿದೆ.
ಐಎಎಸ್ ಅಧಿಕಾರಿ ಮೇಲಿನ ದೌರ್ಜನ್ಯ, ಬೆಡ್‍ಗಳ ಪ್ರಕರಣಕ್ಕೆ ಕೋಮು ಬಣ್ಣ ಹಚ್ಚಿದ ತೇಜಸ್ವಿ ಸೂರ್ಯ ಹಾಗೂ ಸತೀಶ್ ರೆಡ್ಡಿ ವಿರುದ್ಧ ಪೊಲೀಸ್ ಆಯುಕ್ತರು, ಬಿಬಿಎಂಪಿ ಚೀಪ್ ಗೌರವ್ ಗುಪ್ತಾಗೆ ಕಾಂಗ್ರೆಸ್ ನಿಯೋಗ ದೂರು ಕೊಟ್ಟಿದೆ.
Advertisement
Advertisement
ಇನ್ನೊಂದೆಡೆ ತೇಜಸ್ವಿ ಸೂರ್ಯ ವಿರುದ್ಧ ಎಫ್‍ಐಆರ್‍ಗೆ ಕೋರಿ ಜೆಡಿಎಸ್ ಸ್ಟೇಟ್ ಕಮಿಟಿ ಅಬ್ಸರ್ವರ್ ನಜ್ಮಾ ಜನೀರ್ ಬಾನು ಅವರು ಬೆಂಗಳೂರು ಪೊಲೀಸ್ ಕಮಿಷನರ್ ಕಮಲ್ ಪಂತ್‍ಗೆ ದೂರು ನೀಡಿದ್ದಾರೆ. ಅಲ್ಲದೆ ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ, ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ, ಚಿಕ್ಕಪೇಟೆ ಶಾಸಕ ಉದಯ್ ಗರುಡಾಚಾರ್ ವಿರುದ್ಧ ದೂರು ನೀಡಿದ್ದಾರೆ.
Advertisement
Advertisement
ಬೆಡ್ ಬ್ಲಾಕ್ ದಂಧೆ ಬಯಲಿಗೆಳೆದ ತೇಜಸ್ವಿ ಸೂರ್ಯಗೆ ಶಾಸಕ ರೇಣುಕಾಚಾರ್ಯ, ಎಂಎಲ್‍ಸಿ ವಿಶ್ವನಾಥ್ ಬೆಂಬಲ ನೀಡಿದ್ದಾರೆ. ಈ ಮಧ್ಯೆ ತಮ್ಮನ್ನು ಹೀಗಳೆದ ಜಮೀರ್ ಮತ್ತು ಡಿಕೆಶಿ ವಿರುದ್ಧ ಸಚಿವ ಈಶ್ವರಪ್ಪ ಕಿಡಿಕಾರಿದ್ದಾರೆ. ಇದನ್ನೂ ಓದಿ: ಬೆಡ್ ಬ್ಲಾಕ್ – 17 ಮಂದಿಯನ್ನು ತೆಗೆದು ಹಾಕಿದ್ದು ಯಾಕೆ? ಹೊಸ ಬದಲಾವಣೆ ಏನು? ಗೌರವ್ ಗುಪ್ತಾ ಹೇಳೋದು ಏನು?